ಬೈಲಹೊಂಗಲ: ಗ್ರಾಮೀಣ ಪ್ರದೇಶದ ಮಕ್ಕಳಿಗೂ ಉನ್ನತ ಶಿಕ್ಷಣ ಸಿಗಲಿ - ಡಾ ಶಿವಾನಂದ ಭಾರತಿ ಸ್ವಾಮೀಜಿ
ಬೈಲಹೊಂಗಲ: ಗ್ರಾಮೀಣ ಪ್ರದೇಶದ ಮಕ್ಕಳಿಗೂ ಉನ್ನತ ಶಿಕ್ಷಣ ಸಿಗಬೇಕೆಂದು ನಮ್ಮ ಸಂಸ್ಥೆಯಿದ ಪ್ರಯತ್ನ ನಡೆಸಿದ್ದೇವೆ ಅದೇ ರೀತಿ ಈ ವರ್ಷದಿಂದ ಪ್ರೀ ನರ್ಸರಿಯಿಂದ ಎಂಟನೇ ತರಗತಿವರೆಗೆ ಸಿಬಿಎಸ್ಸಿ ಶಾಲೆಯನ್ನು ಪ್ರಾರಂಭ ಮಾಡಲಾಗಿದೆ ಇದರ ಉಪಯೋಗವನ್ನು ಗ್ರಾಮೀಣ ಪ್ರದೇಶದ ಮಕ್ಕಳು ಪಡೆದುಕೊಳ್ಳಬೇಕೆಂದು ಡಾ.ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.
ಸಮೀಪದ ಇಂಚಲದ ಶ್ರೀ ಶಿವಯೋಗೀಶ್ವರ ಶಿಕ್ಷಣ ಸಂಸ್ಥೆಯಿಂದ ಹೊಸದಾಗಿ ಸಿಬಿಎಸ್ಸಿ ಶಾಲೆಯ ಪ್ರಾರಂಭದ ಉದ್ಘಾಟನೆಯನ್ನು ಮಾಡಿ ಮಾತನಾಡಿ, ಪಟ್ಟಣದಲ್ಲಿ ಮಾತ್ರ ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಲಾಗುತ್ತದೆ ಆದರೆ ಗ್ರಾಮೀಣ ಪ್ರದೇಶಕ್ಕೆ ಇದು ದೊರೆಯುತ್ತಿಲ್ಲ ಹೀಗಾಗಿ ನಾವು ನಮ್ಮ ಸಂಸ್ಥೆಯಲ್ಲಿ ಹೆಚ್ಚಿನ ವಿದ್ಯಾಭ್ಯಾಸ ದೊರೆಯಲಿ ಎಂದು ಈ ವರ್ಷದಿಂದ ಸಿಬಿಎಸ್ಸಿ ಶಾಲೆಯನ್ನು ಪ್ರಾರಂಭ ಮಾಡಿದ್ದೇವೆ ಶಿಕ್ಷಣ ಕಲಿತರೆ ಮಕ್ಕಳ ಭವಿಷ್ಯ ಉಜ್ವಲವಾಗಲು ಕಾರಣವಾಗುತ್ತದೆ ತಮ್ಮ ಮನೆಯವೂ ಕೂಡ ಬೆಳಗುತ್ತದೆ. ಹೀಗಾಗಿ ನಮ್ಮ ಸಂಸ್ಥೆಯಲ್ಲಿ ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಆಡಳಿತ ಅಧಿಕಾರಿ ಪೂರ್ಣಾನಂದ ಸ್ವಾಮೀಜಿ, ಮಾಜೀ ಚೇರಮನ್ ರಾಹುತನವರ, ಪುರಸಭೆ ಮಾಜಿ ಅಧ್ಯಕ್ಷ ರಾಜು ಜನ್ಮಟ್ಟಿ, ನಾಗಪ್ಪ ಮೇಟಿ. ಶಿವಾನಂದ ಗುಡಗುನಟ್ಟಿ, ಬಿ.ಪಿ.ತುಪ್ಪದ, ಎಸ್.ಡಿ.ಕರಾಡೆ, ಮಲ್ಲಿಕಾರ್ಜುನ ಖನಗೌಡ್ರ ಅನೇಕರು ಇದ್ದರು.