ಚಚಡಿ ಏತ ನೀರಾವರಿ ಯೋಜನೆಯ ಹೊಲಕಾಲುವೆ ಕಾಮಗಾರಿಗಳ ಭೂಮಿ ಪೂಜೆ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ನೇಸರಗಿ. ಶನಿವಾರದಂದು ಸಮೀಪದ ಮೇಕಲಮರಡಿ ಗ್ರಾಮದ ಸೋಮನಟ್ಟಿ ರಸ್ತೆಯಲ್ಲಿ ಹತ್ತಿರ ಚಚಡಿ ನೀರಾವರಿ ಕಾಲುವೆಗಳಿಗೆ ಕರ್ನಾಟಕ ನೀರಾವರಿ ನಿಗಮ ನಿಯಮಿತ ವತಿಯಿಂದ 12 ಕೋಟಿ ರೂಪಾಯಿಗಳ ಅನುಧಾನದಲ್ಲಿ ಹೊಲಗಾಲುವೆ 16 ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ನೇಸರಗಿ ಭಾಗದ ಹೊಸಕೋಟಿ, ಗಜಮನಹಾಳ, ಮಾಸ್ತಮರಡಿ, ಹಣಬರಹಟ್ಟಿ, ವಣ್ಣೂರ, ಮೇಕಲಮರಡಿ, ಕಲಕುಪ್ಪಿ, ಬುಧನೂರ, ಹಿರೇಬುದನೂರ, ಚಚಡಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳ ರೈತರಿಗೆ ನೀರು ದೊರಕುತ್ತದೆ. ಹಿಂದಿನ ಕಾಮಗಾರಿ ಮಾಡಿದ ಗುತ್ತಿಗೆದಾರರ ಬಿಲ್ಲು ಬಾಕಿ ಉಳಿದಿದ್ದು ಆದಷ್ಟು ಬೇಗ ಆ ಗುತ್ತಿಗೆದಾರರ ಬಿಲ್ಲು ಪಾವತಿಸಲಾಗುವದೆಂದು ಹೇಳಿದರು.
  ನೀರಾವರಿ ನಿಗಮದ ಕಾರ್ಯನಿರ್ವಾಹಕ ಅಭಿಯಂತರ ಎಚ್ ಎಸ್ ಕಾಖಂಡಕಿ ಮಾತನಾಡಿ ಶಿರೂರು ಡ್ಯಾಮ್ ಮುಕಾಂತರ 35 ವರ್ಷಗಳ ಹೋರಾಟದ ಪಲವಾಗಿ ಟನಲ್ ಮುಕಾಂತರ 39 ಕಿಲೋ ಮೀಟರ್ ಗೋಕಾಕ, ಬೈಲಹೊಂಗಲ ಮತ್ತು ಸವದತ್ತಿ ತಾಲೂಕೂಗಳಲ್ಲಿ 3980 ಹೆಕ್ತೇರ್ ನೀರಾವರಿ ಯೋಜನೆ ಇದಾಗಿದೆ ಎಂದರು.
  ಕಾರ್ಯಕ್ರಮದಲ್ಲಿ ಮಾಜಿ ಜಿ ಪಂ. ಸದಸ್ಯ ನಿಂಗಪ್ಪ ಅರಿಕೇರಿ, ಯುವ ಮುಖಂಡ ಸಚಿನ ಪಾಟೀಲ, ಅಡಿವಪ್ಪ ಮಾಳಣ್ಣವರ, ಗ್ರಾಮ ಅಧ್ಯಕ್ಷರಾದ ಶ್ರೀಮತಿ ಭಾರತಿ ಮಲ್ಲಪ್ಪ ತಿಗಡಿ, ನಾಗರಾಜ್ ದೇಸಾಯಿ,ರವಿ ಸಿದ್ದಮ್ಮಣ್ಣವರ, ಗ್ರಾ ಪಂ ಉಪಾಧ್ಯಕ್ಷರಾದ ಕಾಶಿಮ್ ಜಮಾದಾರ, ಶಿವಾನಂದ ಹಿರೇಮಠ,ಮಂಜುನಾಥ ಹುಲಮನಿ, ನಜೀರ ತಹಶೀಲ್ದಾರ, ಮಲ್ಲಿಕಾರ್ಜುನ ಕಲ್ಲೋಳಿ, ರಾಜು ಹಣ್ಣಿಕೇರಿ, ವಾಯ್ ಆರ ಗುಡಿ, ರವಿ ಹುಲಮನಿ, ಶಿವಪ್ಪ ಹುಲಮನಿ, ಸಿದಪ್ಪ ಕಡಕೋಳ, ರೇಣುಕಾ ಕಡಕೋಳ,ಸಹಾಯಕ ಕಾರ್ಯನಿರ್ವಾಹಕ ಶ್ರೀನಿವಾಸ್ ಬಿರಾದಾರ, ಪಿ ಡಿ ಓ ಸವಿತಾ ಹಾಲಹಳ್ಳಿ, ಗುತ್ತಿಗೆದಾರರಾದ ಚನ್ನಪ್ಪ ಗುದಗನವರ, ವಿಠ್ಠಲ ಕೋಳಿ, ಗಣಪತಿ ಗೊರಬಾಳ, ಗ್ರಾ ಪಂ ಸದಸ್ಯರು, ಸುತ್ತಮುತ್ತಲಿನ ಗ್ರಾಮಗಳ ಹಿರಿಯರು, ರೈತರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ರೈತ ಮುಖಂಡ ಮಹಾಂತೇಶ ಹಿರೇಮಠ ನಿರೂಪಿಸಿದರು.

Post a Comment

0Comments

Post a Comment (0)