ನವದೆಹಲಿ: ಮಾರ್ಚ್ 22 ರಂದು ಕನ್ನಡ ಪರ ಹೋರಾಟಗಾರರು ಮರಾಠಿ ಪುಂಡರ ಹಾವಳಿಯನ್ನು ಖಂಡಿಸಿ ಕರ್ನಾಟಕ ಬಂದ್ಗೆ (Karnataka bandh) ಕರೆ ನೀಡಿದ್ದಾರೆ. ಆದರೆ ಈ ಮಧ್ಯೆ ಕಾರ್ಮಿಕ ಸಂಘಟನೆಗಳು (Labor organization) ಭಾರತ ಬಂದ್ಗೆ (Bharat bandh) ಕರೆ ನೀಡಿದೆ. ಹೌದು, ದೇಶಾದ್ಯಂತ ಕಾರ್ಮಿಕ ಸಂಘಟನೆಗಳು ಮೇ 20 ರಂದು ಮುಷ್ಕರ ನಡೆಸಲು ಯೋಜಿಸಿವೆ. ಕಾರ್ಮಿಕ ನೀತಿಗಳು, ಉದ್ಯೋಗ ಭದ್ರತೆ, ಕನಿಷ್ಠ ವೇತನ ನೀತಿ ಮತ್ತು ಕಾರ್ಮಿಕರಿಗೆ ಅನುಕೂಲಕರವಾಗಿರಬೇಕಾದ ಪಿಂಚಣಿ ಹಕ್ಕುಗಳಂತಹ ವಿಷಯಗಳ ಬಗ್ಗೆ ಸರ್ಕಾರ (Govt) ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಕಾರ್ಮಿಕ ಸಂಘಗಳು ಕಳವಳ ವ್ಯಕ್ತಪಡಿಸಿ, ಬಂದ್ಗೆ ಕರೆ ನೀಡಿದೆ.
ಕರ್ನಾಟಕ ಬಂದ್ ಬೆನ್ನಲ್ಲೇ ಭಾರತ್ ಬಂದ್! ಕಾರ್ಮಿಕ ಸಂಘಟನೆಗಳಿಂದ ಈ ದಿನ ಬಂದ್‌ಗೆ ಕರೆ...
By -
March 21, 2025
0
Tags: