ಚನ್ನಮ್ಮನ ಕಿತ್ತೂರು- ಐತಿಹಾಸಿಕ ಚನ್ನಮ್ಮನ ಕಿತ್ತೂರ ಅಭಿವೃದ್ಧಿಗೆ ಬಜೆಟ್ ಮಂಡನೆ ಮಾಡುವ ವೇಳೆ ಸರ್ಕಾರದ ಅನುದಾನ ನೀಡದೇ ಕಿತ್ತೂರನ್ನು ಕಡೆಗಣಿಸಿದ್ದು ವಿಷಾದನೀಯ ಸಂಗತಿ ಎಂದು ಬೇಸರ ವ್ಯಕ್ತ ಪಡಿಸಿದ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಸಾಮಿಜೀ,
ಕಲ್ಮಠ ಆವರಣ ಶ್ರೀಶಂಕರ ಚಂದರಗಿ ಸಭಾಭವನದಲ್ಲಿ ನಡೆದ ನಾಗರಿಕರ ಸಭೆಯ ಸಾನಿಧ್ಯವಹಿಸಿ ಮಾತನಾಡಿದವರು ಕಿತ್ತೂರು ನಾಡಿನ ಜನತೆ ತಮ್ಮ ಸ್ವಾಭಿಮಾನಕ್ಕಾಗಿ ಎದ್ದುನಿಲ್ಲುವ ಸಮಯ ಬಂದಿದೆ. ಯಾರು ಹಿಂದೆ ಜರೆಯಬೇಡಿ. ಎಲ್ಲರೂ ಸೇರಿ ಮಾರ್ಚ ೧೮ ರಂದು ಕಿತ್ತೂರು ಪಟ್ಟಣ ಸಂಪೂರ್ಣ ಬಂದ್‌ಮಾಡಿ ರಾಷ್ಟಿಯ ಹೆದ್ದಾರಿ ೪ರ ಪಕ್ಕ ಚನ್ನಮ್ಮನ ವರ್ತುಳದಲ್ಲಿ ಪ್ರತಿಭಟನೆ ಮಾಡೋಣ. ಅನುದಾನ ಹಂಚಿಕೆಯಲ್ಲಿ ಕಿತ್ತೂರಿಗೆ ಆದ ಅನ್ಯಾಯ ಖಂಡಿಸೋಣವೆದು ಸ್ವಾಮಿಜೀ ಘೋಷಿಸಿದರು, ಒಂದಿಷ್ಟು ಪ್ರಾಧಿಕಾರಗಳಿಗೆ ಕೋಟಿ-ಕೋಟಿ ಅನುದಾನ ನೀಡಲಾಗಿದೆ. ಹೀಗಿರುವಾಗ ಕಿತ್ತೂರು ಪ್ರಾಧಿಕಾರಕ್ಕೆ ೧೦ಕೋಟಿಯಾದರೂ ಬೇಡವೇ ? ಪಕ್ಷಾತೀತವಾಗಿ ಪ್ರವಾಸೋಧ್ಯಮ ಬೆಳೆಸಲು ಹೋರಾಟ ಮಾಡೋಣ ಇದನ್ನು ಮಾಡದಿದ್ದರೆ ಕಿತ್ತೂರಿಗೆ ಒಳ್ಳೆ ಕಾಲ ಬರುವುದಿಲ್ಲ ಅದಕ್ಕಾಗಿ ಪ್ರತಿಭಟನೆಯಲ್ಲಿ ಎಲ್ಲರೂ ಪಾಲ್ಗೊಳಬೇಕೆಂದು ಕರೆ ನೀಡಿದರು.
ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮಿಜೀ ಮಾತನಾಡಿ ರಾಯಣ್ಣನ ಜನ್ಮಸ್ಥಳ ಅಭಿವೃದ್ಧಿ ಪಡಿಸುವುದರಲ್ಲಿ ಸಿಎಂ ಅವರು ಕಾಳಜಿ ವಹಿಸಿದ್ದು ಸ್ವಾಗತಾರ್ಹ ಆದರೆ ಅದೇ ಕಾಳಜಿ ಐತಿಹಾಸಿಕ ಕಿತ್ತೂರು ಚನ್ನಮ್ಮಾಜೀ ಮೇಲೆ ಏಕ್ಕಿಲ್ಲ ಅವರ ಮನಸ್ಸು? ರಾಯಣ್ಣ ಮತ್ತು ಚನ್ನಮ್ಮ ಇವರಿಬ್ಬರು ಮೇಲೆ ತಾರತಮ್ಯ ಮಾಡದೇ ಅಭಿವೃದ್ಧಿ ಪಡಿಸಬೇಕು. ಇವರಿಗೆ ಸದಾ ಲಿಂಗಾಯತ ಶಾಸಕರ, ಸಚಿವರ ಸಹಾಯ ಪಡೆದುಕೊಂಡೇ ಮಂತ್ರಿಯಾಗಿದ್ದಾರೆ. ಶಾಸಕ ಬಾಬಾಸಾಹೇಬ ಪಾಟೀಲ ಹೆಚ್ಚಿನ ಮುತವರ್ಜಿವಹಿಸಿಕೊಂಡು ಅವರು ಪ್ರತಿಭಟನೆಯಲ್ಲಿ ಭಾಗಿಯಾಗಲಿ ಎಂದರು.
`ದೇಗುಲಹಳ್ಳಿ- ಅಂಬಡಗಟ್ಟಿ ಶ್ರೀ ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮಿಜೀ ಮಾತನಾಡಿ ಕ್ಷೇತ್ರದ ಶಾಸಕರ ಮೇಲೆ ದೊಡ್ಡ ಜವಾಬ್ದಾರಿಯಿದೆ. ಅವರನ್ನು ಕಂಡು ಸರ್ಕಾರದ ಮೇಲೆ ಒತ್ತಡ ತರೋಣ ನಾವೆಲ್ಲರೂ ಒಂದಾಗಿ ಹೋರಾಟದ ಮೂಲಕ ನ್ಯಾಯ ಕೇಳೋಣವೆಂದರು.
ಈ ವೇಳೆ ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಚಂದ್ರಗೌಡ ಪಾಟೀಲ, ಲಿಂ.ಪ ತಾ, ಘಟಕದ ಅಧ್ಯಕ್ಷ ಡಿ.ಆರ್.ಪಾಟೀಲ, ಕಿನಾವಿವಿ ಸಂಘದ ಅಧ್ಯಕ್ಷ ಜಗದೀಶ ವಸ್ತಂದ, ಕಸಾಪ ಅಧ್ಯಕ್ಷ ಎಸ್.ಬಿ. ದಳವಾಯಿ, ಅಪ್ಪೇಶ ದಳವಾಯಿ, ಹನಮಂತ ಲಂಗೋಟಿ, ಕಾದರವಳ್ಳಿ ಮೌಲಾನಾ ಹಜರತ್ ತಸ್ವೀರಸಾಬ ಮುಜಾವರ ಇವರೆಲ್ಲರೂ ಮಡಿವಾಳ ರಾಜಯೋಗೀಂದ್ರ ಸ್ವಾಮಿಜೀ ನಿರ್ಧಾರ ಬೆಂಬಲಿಸ ಅನ ರೇಕರು ಮಾತನಾಡಿದರು. ಬಿಜೆಪಿ ಮಂಡಳಾಧ್ಯಕ್ಷ ಶ್ರೀಕರ ಕುಲಕರ್ಣಿ, ಅಶೋಕ ಅಳ್ಳಾವರ, ಕಿರಣ ವಾಳದ, ಮಲ್ಲಿಕಾರ್ಜುನ ಸಾಣಿಕೊಪ್ಪ ಪ್ರವೀಣ ಸರದಾರ, ವಿವಿಧ ಸಂಘ-ಸಸ್ಥೆಗಳ ಪದಾಧಿಕಾರಿಗಳು, ನಾಗರಿಕರು ಇನ್ನಿತರರಿದ್ದರು.