ಏ. 14 ರಿಂದ ಬೈಲಹೊಂಗಲದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಜಾತ್ರಾ ಮಹೋತ್ಸವ ಸಂಭ್ರಮ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಏ. 14 ರಿಂದ ಬೈಲಹೊಂಗಲದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಜಾತ್ರಾ ಮಹೋತ್ಸವ ಸಂಭ್ರಮ

ಬೈಲಹೊಂಗಲ- ಪಟ್ಟಣದ ಬಸವ ನಗರದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಶ್ರೀ ಮಾತಾ ಸಂಭ್ರಮ 2025 ಹಾಗೂ ಜಾತ್ರಾ ಮಹೋತ್ಸವ ಮತ್ತು ಶ್ರೀ ದುರ್ಗಾ ಪರಮೇಶ್ವರಿಯ ನೂತನ ಭವ್ಯ ರಥೋತ್ಸವದ ಸಂಭ್ರಮವು ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ನಿರ್ಧೇಶಕ ವೇ.ಮೂ. ಡಾ.ಮಹಾಂತಯ್ಯ ಶಾಸ್ತ್ರಿ ಆರಾದ್ರಿಮಠ ಅವರ ದಿವ್ಯ ಸಾನಿಧ್ಯದಲ್ಲಿ ಏ. 14 ರಿಂದ ಏ. 17 ರವರೆಗೆ ಕಾರ್ಯಕ್ರಮ ಜರುಗಲಿದೆ ಎಂದು ಚಿತ್ರನಟ ಶಿವರಂಜನ ಬೋಳನ್ನವರ ಹೇಳಿದರು.

ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು ಈ ಭಾಗದಲ್ಲಿ ವರ್ಷ ಪದ್ಧತಿಯಂತೆ ಶ್ರೀ ಮಾತಾ ಸಂಭ್ರಮವನ್ನು ವೇ.ಮೂ.ಡಾ.ಮಹಾಂತಯ್ಯ ಶಾಸ್ತ್ರೀಗಳು ನಡೆಸುತ್ತಾ ಬಂದಿದ್ದು ಈ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುವ ಸಾಹಿತ್ಯ-ಕಲೆ, ಸಾಮಾಜಿಕ ಸೇವೆ ಸಲ್ಲಿಸುವವರನ್ನು ಗುರಿತಿಸಿ ಸನ್ಮಾನಿಸುವದು.ನಾಡಿನ ಹಿರಿಯ ಪೂಜ್ಯರಿಂದ ಧರ್ಮ ಸಮ್ಮೇಳನ, ಉಚಿತ ಸಾಮೂಹಿಕ ವಿವಾಹ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗಿದ್ದು, ಈ ಬಾರಿ ನೂತನವಾಗಿ ದುರ್ಗಾ ಪರಮೇಶ್ವರಿ ಅವರ ನೂತನ ರಥೋತ್ಸವವನ್ನು ಜರುಗಿಸಲಾಗುವದು. ಈ ಪುನೀತ ಕಾರ್ಯದಲ್ಲಿ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.

ಏ. 14 ರಂದು ಅಮ್ಮನವರಿಗೆ ಅಭಿಷೇಕ, ದುರ್ಗಾ ಹವನ, ಆಶ್ಲೇಷ ಬಲಿಪೂಜೆ, ನವದುರ್ಗಾ ಹೋಮ, ಉಡಿ ತುಂಬುವ ಕಾರ್ಯಕ್ರಮ, ಲಲಿತ ಸಹಸ್ರ ಪಾರಾಯಣ ಬೆಳಿಗ್ಗೆ 10 ಗಂಟೆಗೆ ದೊಡವಾಡ ಹಿರೇಮಠದ ಜಡಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳಿಂದ ಪಂಚಾಚಾರ್ಯ ಧ್ವಜಾರೋಹಣ, ನೆರವೇರುವುದು.

ಸಂಜೆ 6 ಗಂಟೆಗೆ ಜಾತ್ರಾ ಮಹೋತ್ಸವ ಹಾಗೂ ಧರ್ಮಸಭೆಯನ್ನು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕೀಹೊಳಿ ಉದ್ಘಾಟಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಶಾಸಕ ಮಹಾಂತೇಶ ಕೌಜಲಗಿ ವಹಿಸಲಿದ್ದು, ಮುರಗೋಡದ ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಶ್ರೀ,ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಅಂಕಲಗಿ ಶ್ರೀ ಅಡವಿ ಸಿದ್ದೇಶ್ವರ ಮಠದ ಅಮರ ಸಿದ್ದೇಶ್ವರ ಸ್ವಾಮೀಜಿ, ಅರಳಿಕಟ್ಟಿಯ ಶಿವಮೂರ್ತಿ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.

ಜಿಲ್ಲಾಧಿಕಾರಿ ಮಹಮ್ಮದ ರೋಶನ್, ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಸವದತ್ತಿ ಶಾಸಕ ವಿಶ್ವಾಸ ವೈದ್ಯ, ಪೋಲೀಸ್ ವರಿಷ್ಠಾಧಿಕಾರಿ ಡಾ.ಬೀಮಾಶಂಕರ ಗುಳೇದ, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ, ಚಿತ್ರನಟ ಶಿವರಂಜನ ಬೋಳಣ್ಣವರ ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದು ಇದೇ ಸಂದರ್ಭದಲ್ಲಿ ಖ್ಯಾತ ಚಲನಚಿತ್ರ ನಟ ವಿ. ರವಿಚಂದ್ರನ್ ಅವರಿಗೆ ಗುರುರಕ್ಷೆ ನೀಡಲಾಗುವುದು.

ಏ. 15 ರಂದು ಬೆಳಿಗ್ಗೆ 6 ಗಂಟೆಗೆ ಅಮ್ಮನವರಿಗೆ ಅಭಿಷೇಕ, ನಾಗಾರಾಧನೆ, ನವಚಂಡಿಕಾ ಹೋಮ ಜರುಗುವವು. ಸಂಜೆ 7 ಗಂಟೆಗೆ ಧರ್ಮಸಭೆ ನಡೆಯಲಿದ್ದು ಕೊಪ್ಪಳ ಗವಿಸಿದ್ದೇಶ್ವರ ಸ್ವಾಮೀಜಿಗಳಿಂದ ಪ್ರವಚನ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ಖ್ಯಾತ ಹಾಸ್ಯನಟರಾದ ಸಾಧುಕೋಕಿಲ ಅವರಿಗೆ ಗುರುದೀಕ್ಷೆ ನೀಡಲಾಗುವುದು. ಈಸಂದರ್ಭದಲ್ಲಿ ಖ್ಯಾತ ಕಲಾವಿದರಾದ ಬಿಗಬಾಸ್ ಖ್ಯಾತಿಯ ಮೋಕ್ಷಿತಾ ಪೈ, ಬಾಳು ಬೆಳಗುಂದಿ, ದೀಪಿಕಾ, ವಾಣಿ ಪ್ರವೀಣ ಜೈನ, ಗೋಪಿ, ಗೋಲ್ಡ ಸುರೇಶ ಇವರಿಂದ ಹಾಸ್ಯ ಸಂಜೆ ಜರುಗಲಿದೆ.

ಏ.16 ಕ್ಕೆ ಬೆಳಿಗ್ಗೆ 6 ಗಂಟೆಗೆ ಅಭಿಷೇಕ, ದುರ್ಗಾ ಸಪ್ತಶತಿ ಪಾರಾಯಣ, ಲಲಿತ ಸಹಸ್ರ ಪಾರಾಯಣ, ಉಡಿ ತುಂಬುವ ಕಾರ್ಯಕ್ರಮ ನಡೆಯುವುದು. ಸಂಜೆ 4 ಗಂಟೆಗೆ ಸ್ಥಳೀಯ ವೀರಭದ್ರೇಶ್ವರ ದೇವಸ್ಥಾನದಿಂದ ಸಕಲ ವಾದ್ಯ, ಕುಂಭಮೇಳದೊಂದಿಗೆ ಬಾಳೇ ಹೊನ್ನೂರಿನ ರಂಭಾಪುರಿ ಜಗದ್ಗುರುಗಳ ಸಾರೋಟ ಉತ್ಸವದ ಮೆರವಣಿಗೆಯು ಪ್ರಮುಖ ಬೀದಿಯಲ್ಲಿ ಸಾಗಿ ದೇವಸ್ಥಾನ ತಲುಪುವುದು.

ಸಂಜೆ 6 ಗಂಟೆಗೆ ಜೋಗುತಿ ಮಂಜಮ್ಮ ನವರಿಗೆ ಶಾಂಭವಿಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬಾಳೇಹೊನ್ನೂರಿನ ರಂಭಾಪೂರಿ ಮಠದ ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಸಂಜೆ ವಿವಿಧ ಕಲಾವಿದರಿಂದ ಮನರಂಜನೆ ಕಾರ್ಯಕ್ರಮಗಳು ಜರುಗಲಿವೆ.

Post a Comment

0Comments

Post a Comment (0)