ಚೆನ್ನಮ್ಮನ ಕಿತ್ತೂರಿನ ಶಾಸಕರಾದ ಬಾಬಾ ಸಾಹೇಬ್ ಪಾಟೀಲ್ ಅವರು ಶಾಸಕರ ಅನುದಾನದಲ್ಲಿ 10 ಲಕ್ಷ ವೆಚ್ಚದ ರೈತರ ಜಮೀನುಗಳಿಗೆ ಸಂಪರ್ಕ ನೀಡುವ ಮೇಕಲಮರಡಿ ಗ್ರಾಮದ ರಸ್ತೆಯ ಸುಮಾರು 700 ಮೀಟರ್ ಉದ್ದ ಮೆಟ್ಲಿಂಗ್ ಕಾಮಗಾರಿ ಪೂಜೆ ಸಲ್ಲಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಿಂಗಪ್ಪ ಅರಕೇರಿ, ಸಚಿನ್ ಪಾಟೀಲ್ ಯುವ ಮುಖಂಡರು,ಅಡಿಯಪ್ಪ ಮಾಳನವರ್, ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾರತಿ ತಿಗಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕಾಸಿಂ ಜಮಾದಾರ್ ಗ್ರಾಮ ಪಂಚಾಯಿತಿ ಸದಸ್ಯರಾದ ರಾಜು ಹಣ್ಣಿಕೇರಿ, ಯಲ್ಲವ್ವ ಗುಡಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾಮದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.