ರಾಣಿ ಚನ್ನಮ್ಮಳ ತ್ಯಾಗವೇ ನಮಗೆಲ್ಲ ಪ್ರೇರಣೆ, ಪೂಜ್ಯ ಶ್ರೀ ರಾಜ ಗುರು ಮಡಿವಾಳ ರಾಜಯೋಗೇಂದ್ರ ಸ್ವಾಮಿಗಳು...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
 ಚನ್ನಮ್ಮನ ಕಿತ್ತೂರು:- ಬ್ರಿಟಿಷರ ವಿರುದ್ಧ ಧೈರ್ಯದಿಂದ ಹೋರಾಡಿದ ರಾಣಿ ಚನ್ನಮ್ಮಳ ತ್ಯಾಗವೇ ನಮಗೆಲ್ಲ ಪ್ರೇರಣೆಯಾಗಿದ್ದು ಅವರನ್ನು ಸದಾ ಸ್ಮರಿಸುವದು ಈ ನಾಡಿನ ಜನತೆಯ ಜವಾಬ್ದಾರಿ ಆಗಿದೆ ಎಂದು ರಾಜಗುರು ಸಂಸ್ಥಾನ ಕಲ್ಮಠದ  ಪರಮ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ತಿಳಿಸಿದರು.ಅವರು ರಾಜಗುರು ಸಂಸ್ಥಾನ ಕಲ್ಮಠದ ಆವರಣದಲ್ಲಿ ನಡೆದ ವೀರರಾಣಿ ಚನ್ನಮ್ಮಾಜಿಯ 196 ನೆಯ ಪುಣ್ಯ ಸ್ಮರಣೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಪ್ರತಿಯೊಬ್ಬರು ಚನ್ನಮ್ಮಾಜಿಯ ತ್ಯಾಗ ಬಲಿದಾನಗಳನ್ನು ತಿಳಿಯುವಂತಾಗಬೇಕೆಂದು ಆಶೀರ್ವದಿಸಿದರು. ಕಿತ್ತೂರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ಮಾತನಾಡುತ್ತಾ ಈ ಪುಣ್ಯಸ್ಮರಣೆಯ ಸಂದರ್ಭದಲ್ಲಿ ವೀರ ರಾಣಿ ಚನ್ನಮ್ಮಳ ಇತಿಹಾಸವನ್ನು ನಮ್ಮ ನಾಡಿನ ಮಕ್ಕಳಿಗೆ ತಿಳಿಸುವಂತಾಗಬೇಕು ಮತ್ತು ಚನ್ನಮ್ಮಳ ಶೌರ್ಯ ನಮ್ಮೆಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತಾಗಲಿ ಎಂದು ಶಿಕ್ಷಕರಲ್ಲಿ ಮನವಿ ಮಾಡಿದರು.ಪುರೋಹಿತರಾದ ಶ್ರೀ ಸಂಜು ಹಿರೇಮಠ ಇವರಿಂದ ರಾಣಿ ಚನ್ನಮ್ಮಳ ಮೂರ್ತಿಗೆ ಪೂಜೆ ಸಲ್ಲಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಾಜಗುರು ಶಿಕ್ಷಣ ಸಂಸ್ಥೆಯ ಪ್ರಧಾನ ಗುರುಗಳಾದ ಶ್ರೀಮತಿ ರಾಜೇಶ್ವರಿ ಕಳಸಣ್ಣವರ ಸ್ವಾಗತಿಸಿದರು.ಶ್ರೀ ಗುರುಪಾದಯ್ಯ ಗಾಳೀಮಠ ವಂದಿಸಿದರು. ಬಸವರಾಜ ಭೀಮರಾಣಿ ನಿರೂಪಿಸಿದರು. ರಾಜಗುರು ಶಿಕ್ಷಣ ಸಂಸ್ಥೆಯ ಶಿಕ್ಷಕಿಯರು ಮತ್ತು ಇತರರು ಉಪಸ್ಥಿತರಿದ್ದರು.

Post a Comment

0Comments

Post a Comment (0)