ಖೋ ಖೋ ವಿಶ್ವ ಕಪ್ ಭಾರತೀಯ ಪುರುಷ ಮಹಿಳೆಯರ ತಂಡಕ್ಕೆ ನೇಪಾಳದ ವಿರುದ್ಧ ಅಮೋಘ ಗೆಲವು...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ನವದೆಹಲಿ: ಖೋ ಖೋ ವಿಶ್ವಕಪ್‌ನ ಉದ್ಘಾಟನಾ ಆವೃತ್ತಿಯಲ್ಲಿ ಭಾರತೀಯ ಪುರುಷರ ತಂಡ ಮತ್ತು ಮಹಿಳೆಯರ ತಂಡಗಳು ರವಿವಾರ(ಜ19) ನೇಪಾಳದ ವಿರುದ್ಧದ ಅಮೋಘ ಗೆಲುವು ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿವೆ.
ಎರಡೂ ತಂಡಗಳು ನೇಪಾಳದ ಮೇಲೆ ಸರ್ವೋಚ್ಚ ಆಟ ಪ್ರದರ್ಶಿಸಿ ಪ್ರಶಸ್ತಿ ತನ್ನದಾಗಿಸಿಕೊಂಡರು. ಪುರುಷರ ತಂಡವು ಕೆಲವು ದಿನಗಳ ಹಿಂದೆ ಆರಂಭಿಕ ಪಂದ್ಯದಲ್ಲಿ ನೇಪಾಳವನ್ನು ಸೋಲಿಸಿದ ನಂತರ ಫೈನಲ್ ನಲ್ಲಿ ಮತ್ತೊಂದು ಬಾರಿಗೆ ಸೋಲಿಸಿತು.
ಮಹಿಳೆಯರ ತಂಡ ನೇಪಾಳ ವಿರುದ್ಧ 78-40 ಅಂಕಗಳ ಜಯ ಸಾಧಿಸಿದರೆ, ಪುರುಷರು 54-36 ಅಂಕಗಳ ಅಂತರದ ದೊಡ್ಡ ಜಯ ತನ್ನದಾಗಿಸಿಕೊಂಡರು.
ಪ್ರಧಾನಿ ಮೋದಿ ಅಭಿನಂದನೆ
ಎರಡೂ ತಂಡಗಳಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಎಕ್ಸ್ ಪೋಸ್ಟ್ ನಲ್ಲಿ ಮೊದಲ ಬಾರಿಗೆ ಖೋ ಖೋ ವಿಶ್ವಕಪ್ ಗೆದ್ದ ತಂಡಗಳಿಗೆ ಅಭಿನಂದನೆಗಳು! ಈ ಐತಿಹಾಸಿಕ ಗೆಲುವು ಅವರ ಅಪ್ರತಿಮ ಕೌಶಲ್ಯ, ದೃಢಸಂಕಲ್ಪ ಮತ್ತು ತಂಡದ ಕೆಲಸ. ಈ ವಿಜಯೋತ್ಸವವು ಭಾರತದ ಅತ್ಯಂತ ಹಳೆಯ ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಒಂದಕ್ಕೆ ಹೆಚ್ಚಿನ ಗಮನ ಸೆಳೆಯುವಂತೆ ಮಾಡಿದೆ, ರಾಷ್ಟ್ರದಾದ್ಯಂತ ಅಸಂಖ್ಯಾತ ಯುವ ಕ್ರೀಡಾಪಟುಗಳನ್ನು ಪ್ರೇರೇಪಿಸಿದೆ. ಈ ಸಾಧನೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಯುವಕರು ಈ ಕ್ರೀಡೆಯನ್ನು ಮುಂದುವರಿಸಲು ದಾರಿ ಮಾಡಿಕೊಡಲಿ” ಎಂದು ಹಾರೈಸಿದ್ದಾರೆ.

Post a Comment

0Comments

Post a Comment (0)