Bailahongala:ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಡಿ.ಬಿ.ಇನಾಮದಾರ ಅವರ ಕಾರ್ಖಾನೆಯ ಕನಸನ್ನು ಸಾಕಾರಗೊಳಿಸುವಲ್ಲಿ ರೂವಾರಿ ಮಾರ್ಗದರ್ಶಕರಾದ ಡಾ.ಪ್ರಭಾಕರ ಕೋರೆ, ವ್ಯವಸ್ಥಾಪಕ ಅಮಿತ ಕೋರೆ ಅವರ ಮಾರ್ಗದರ್ಶನ| ಕಾರ್ಖಾನೆಯ ಪಾಲುದಾರ, ಉದ್ಯಮಿ ಬಿಜೆಪಿಯ ಯುವ ಮುಖಂಡ ವಿಜಯ ಮೆಟಗುಡ್ಡ
ಮರಕುಂಬಿ: ಭಾರತ ಸಂವಿಧಾನ ಜಗತ್ತಿನಲ್ಲಿ ಗೌರವಿಸಲ್ಪಟ್ಟ, ಅತಿ ಭದ್ರವಾದ ಹಾಗೂ ದೊಡ್ಡ ಸಂವಿಧಾನ, ಸ್ವಾತಂತ್ರ್ಯ ನಂತರ ಹೇಗೆ ಆಡಳಿತ ಮಾಡಬೇಕು ಸಂವಿಧಾನ ತಿಳಿಸಿದೆ. ನಾವೆಲ್ಲರೂ ಸುಭದ್ರ ದೇಶಕ್ಕಾಗಿ ಶ್ರಮಿಸುತ್ತ ದೇಶದ ಅಭಿವೃದ್ಧಿಗಾಗಿ ಕಾರ್ಯ ಪ್ರವೃತವಾಗಬೇಕು ಎಂದು ಗಣ್ಯರಾದ ಕಾರ್ತಿಕ ಪಾಟೀಲ ಹೇಳಿದರು.
ಅವರು ಇಲ್ಲಿನ ಹೊರವಲಯದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಇನಾಮದಾರ ಸಕ್ಕರೆ ಕಾರ್ಖಾನೆಯ ನಿ. ಆವರಣದಲ್ಲಿ ಪ್ರಥಮ ಬಾರಿಗೆ 76ನೇ ಗಣರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿ, ಧ್ವಜಾರೋಹಣ ನೆರವೇರಿಸಿ, ಸಂವಿಧಾನದ ಮಹತ್ವ ವಿವರಿಸಿದರು. ಜತೆಗೆ 'ಈ ಭಾಗದಲ್ಲಿ ಅತಿ ಅವಶ್ಯವಿದ್ದ ರೈತರ ಕನಸು, ಕಾರ್ಖಾನೆ ನಿರ್ಮಿಸಿದ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿ. ಈ ಭಾಗದ ರೈತರು ಕಾರ್ಖಾನೆಯ ಅಭಿವೃದ್ಧಿಗಾಗಿ ಶ್ರಮಿಸಲು ಮನವಿ ಮಾಡಿದರು.
ಕಾರ್ಖಾನೆಯ ಮುಖ್ಯ ಆಡಳಿತ ಅಧಿಕಾರಿ ರವೀಂದ್ರ ಪಟ್ಟಣಶೆಟ್ಟಿ ಸ್ವಾಗತಿಸಿಕೊಂಡು, ಸಕ್ಕರೆ ಕಾರ್ಖಾನೆಗಳ ಇತಿಹಾಸದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಕಾರ್ಖಾನೆ ನಿರ್ಮಿಸಿ, ಆರಂಭ ಮಾಡಿ ಕೆಲವೇ ದಿನಗಳಲ್ಲಿ 3 ಲಕ್ಷ ಟನ್ ಕಬ್ಬು ನುರಿಸಲಾಗಿದ್ದು, ಯಶಸ್ಸಿಗೆ ಕಾರಣರಾದ ರೈತರಿಗೆ, ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಘಟಕದ ಮುಖ್ಯಸ್ಥ ಶ್ರೀನಿವಾಸ ಸುನಕರ ಮಾತನಾಡಿ, ಕಾರ್ಖಾನೆಯ ಪ್ರಗತಿ ಹಾಗೂ ಮುಂದಿನ ವಿಸ್ತರಣೆಯ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.
ಕಾರ್ಖಾನೆಯ ಪಾಲುದಾರ. ಉದ್ಯಮಿ ಹಾಗೂ ಬಿಜೆಪಿಯ ಯುವ ಮುಖಂಡ ಅಧ್ಯಕ್ಷತೆ ವಹಿಸಿದ್ದ ವಿಜಯ ಮೆಟಗುಡ್ಡ ಮಾತನಾಡಿ, ಕಾರ್ಖಾನೆಯ ಮೂಲ ರೂವಾರಿಗಳಾದ ಡಿ.ಬಿ.ಇನಾಮದಾರ ಅವರ ಕಾರ್ಖಾನೆಯ ಕನಸನ್ನು ಸಾಕಾರಗೊಳಿಸುವಲ್ಲಿ ಕಾರ್ಖಾನೆಯ ರೂವಾರಿಗಳು ಹಾಗೂ ಮಾರ್ಗದರ್ಶಕರಾದ ಡಾ.ಪ್ರಭಾಕರ ಕೋರೆ, ವ್ಯವಸ್ಥಾಪಕ ನಿರ್ದೇಶಕರಾದ ಅಮಿತ ಕೋರೆ ಅವರ ಮಾರ್ಗದರ್ಶನ, ಎಲ್ಲ ಮಕ್ತೆದಾರರ, ಕಾರ್ಮಿಕರು, ಸಿಬ್ಬಂದಿ ವರ್ಗದವರು ಹಾಗೂ ರೈತ ಬಾಂಧವರ ಸಹಕಾರ ನೆನಪಿಸಿಕೊಳ್ಳುತ್ತ ಬರುವ ಹಂಗಾಮಿನಲ್ಲಿ 10 ಲಕ್ಷ ಟನ್ ಕಬ್ಬು ನೂರಿಸುವ ಗುರಿಯಿದೆ ಎಂದರು. ಸುತ್ತಲಿನ ರೈತರಿಗೆ ನೀರಾವರಿ ಹಾಗೂ ಹನಿ ನೀರಾವರಿ, ವೈದ್ಯಕೀಯ ವಿಮಾ ಸೌಲಭ್ಯ, ಗೊಬ್ಬರಗಳ ಮಾಹಿತಿ. ಮಣ್ಣು, ನೀರು ಪರೀಕ್ಷೆ ವಿವಿಧ ಸೌಲಭ್ಯಗಳನ್ನು ಒದಗಿಸಿ ಕೊಡಲಾಗುವುದೆಂದು ತಿಳಿಸಿದರು ಹಾಗೂ ರೈತ ಭಾಂದವರು ಸದರಿ ಎಲ್ಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆದು ನಮ್ಮ ಕಾರ್ಖಾನೆಯ ಏಳಿಗೆಗಾಗಿ ಶ್ರಮಿಸಬೇಕು ಎಂದು ವಿನಂತಿಸಿದರು. ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ ಭಾವಚಿತ್ರಗಳಿಗೆ ಎಲ್ಲ ವಿಭಾಗದ ಮುಖ್ಯಸ್ಥರು ಪೂಜೆ ಸಲ್ಲಿಸಿದರು. ಗಣ್ಯರಾದ ಕಾರ್ತಿಕ ಪಾಟೀಲ ಭದ್ರತಾ ಸಿಬ್ಬಂದಿಗೆ ಹಾಗೂ ಕಾರ್ಮಿಕರಿಗೆ ಕಿರು ಕಾಣಿಕೆ ನೀಡಿದರು ಮತ್ತು ಎಲ್ಲರಿಗೂ ಸಿಹಿ ಹಂಚಿದರು. ರೋಟರಿ ಕ್ಲಬ್ ಅಧ್ಯಕ್ಷ ಮಹಾಂತೇಶ ಜಿಗಜಿನ್ನಿ, ಉದ್ಯಮಿ ನಾಗರಾಜ ಮರಕುಂಬಿ, ಪ್ರಪುಲ ಪಾಟೀಲ, ಘಟಕದ ಮುಖ್ಯಸ್ಥ ಶ್ರೀನಿವಾಸ ಸುನಕರ, ಕಾರ್ಖಾನೆಯ ಎಲ್ಲ ವಿಭಾಗದ ಮುಖ್ಯಸ್ಥರು, ಕಾರ್ಮಿಕ ಹಾಗೂ ಸಿಬ್ಬಂದಿ ವರ್ಗದವರು, ಸುತ್ತಲಿನ ಪ್ರಗತಿಪರ ರೈತರು, ಹಿತೈಷಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು, ಕಾರ್ಖಾನೆಯ ಮುಖ್ಯ ಆಡಳಿತ ಅಧಿಕಾರಿ ರವೀಂದ್ರ ಪಟ್ಟಣಶೆಟ್ಟಿ ಸ್ವಾಗತಿಸಿದರು. ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಶ್ರೀನಿವಾಸ ಖೋತ ನಿರೂಪಿಸಿದರು. ಮಾನವ ಸಂಪನ್ಮೂಲ ಅಧಿಕಾರಿ ವೀರಯ್ಯ ವಿರಕ್ತಮಠ ವಂದಿಸಿದರು.
Tags:

Post a Comment

0Comments

Post a Comment (0)