ಬ್ಯಾಂಕ್‌ ಮ್ಯಾನೇಜರ್‌ ಸಮಯ ಪ್ರಜ್ಞೆ: ವೃದ್ಧೆಯ 1.35 ಕೋಟಿ ರೂ. ಬಚಾವ್‌!

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಮಂಗಳೂರು: ಪಾತ್ರಧಾರಿಗಳು, ಕಥಾ ಹಂದರ, ಸನ್ನಿವೇಶಗಳು ಎಲ್ಲವೂ ಈ ಹಿಂದಿನಂತೆಯೇ. ಆದರೆ ದುಃಖಕರ ಅಂತ್ಯ ಕಾಣಬೇಕಾದಲ್ಲಿ ಹಠಾತ್ತನೆ ಒದಗಿ ಬಂದ ಹೊಸ ನಾಯಕಿ; ಹೀಗಾಗಿ ಕಥೆಗೆ ಲಭಿಸಿದ ಹೊಸ ತಿರುವು…
ನಿಜ, ಇದು ಮಂಗಳೂರಿನಲ್ಲಿ ಈಚೆಗೆ ಸಂಭವಿಸಿದ ಘಟನೆ. ಬ್ಯಾಂಕ್‌ನಲ್ಲಿ ದೊಡ್ಡ ಮೊತ್ತದ ಠೇವಣಿ ಇರಿಸಿದ್ದ ವಯೋವೃದ್ಧೆ. “ನಿಮ್ಮ ಡೆಬಿಟ್‌ ಕಾರ್ಡ್‌ ಅಕ್ರಮ ಹಣ ವರ್ಗಾವಣೆಗೆ ಬಳಕೆಯಾಗಿದೆ’ ಎಂದು ಬೆದರಿಸಿ ಸೈಬರ್‌ ಅರೆಸ್ಟ್‌ಗೆ ಪ್ರಯತ್ನಿಸಿದ ಸೈಬರ್‌ ಖದೀಮರು. ಈ ಸೈಬರ್‌ ವಂಚನೆ ಯತ್ನ ನಂಬಿ ಬ್ಯಾಂಕ್‌ಗೆ ಧಾವಿಸಿ ತಾನು ಠೇವಣಿ ಇರಿಸಿದ ಹಣವನ್ನು ಕೂಡಲೇ ಮರಳಿಸುವಂತೆ ಬ್ಯಾಂಕ್‌ನವರಲ್ಲಿ ವಿನಂತಿಸಿದ್ದ ವೃದ್ಧೆ.
ಎಲ್ಲವೂ ಮಾಮೂಲಿಯಂತೆ ಸಾಗುತ್ತಿರುವಾಗಲೇ ವೃದ್ಧೆಯ ಗಡಿಬಿಡಿ, ಆತಂಕವನ್ನು ಗಮನಿಸಿಯೇ ಏನೋ ಎಡವಟ್ಟು ಆಗಿದೆ ಎಂದು ಖಚಿತಪಡಿಸಿಕೊಂಡ ಬ್ಯಾಂಕ್‌ ಮ್ಯಾನೇಜರ್‌ ಮಹಿಳೆ ಎಲ್ಲವನ್ನೂ ಕೇಳಿ ತಿಳಿದುಕೊಂಡು ಆಕೆಯನ್ನು ವಂಚಕರ ಕಪಿಮುಷ್ಠಿಯಿಂದ ಪಾರು ಮಾಡಿ “ಹೀರೋಯಿನ್‌’ ಆಗಿದ್ದಾರೆ!
ನಡೆದದ್ದೇನು?
ಮಂಗಳೂರು ನಗರದ ಬ್ಯಾಂಕೊಂದರ ಶಾಖಾ ವ್ಯವಸ್ಥಾಪಕರ ಸಕಾಲಿಕ ಎಚ್ಚರಿಕೆ ಕ್ರಮಗಳಿಂದಾಗಿ ವೃದ್ಧೆಯೊಬ್ಬರು ಕೋಟ್ಯಂತರ ರೂಪಾಯಿ ವಂಚನೆಗೆ ಒಳಗಾಗುವುದು ತಪ್ಪಿದೆ. ಸೈಬರ್‌ ವಂಚಕರ ಬಲೆಗೆ ಸಿಲುಕಿ “ಡಿಜಿಟಲ್‌ ಅರೆಸ್ಟ್‌’ ಆಗಿದ್ದ ವೃದ್ಧೆಯೊಬ್ಬರನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌ ಮಂಗಳೂರು ಕಂಕನಾಡಿ ಶಾಖಾ ವ್ಯವಸ್ಥಾಪಕರು ಬಚಾವ್‌ ಮಾಡಿದ್ದಾರೆ.

Post a Comment

0Comments

Post a Comment (0)