ಮೇಕಲಮರಡಿ: ಬೈಲಹೊಂಗಲ ತಾಲೂಕಿನ ಮೇಕಲಮರಡಿ ಗ್ರಾಮದಲ್ಲಿ ರಾಮಾಯಣ ಎಂಬ ಅದ್ಭುತ ಮಹಾಕಾವ್ಯವನ್ನು ರಚಿಸಿದ ಆದಿ ಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಗ್ರಾಮದ ಶ್ರೀ ವಾಲ್ಮೀಕಿ ದೇವಾಲಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿಯ ಮೂರ್ತಿಗೆ ಅಭಿಷೇಕ ಹಾಗೂ ಪೂಜೆ ಸಲ್ಲಿಸುವುದರ ಮುಖಾಂತರ ಗ್ರಾಮದಲ್ಲಿ ಭವ್ಯವಾದ ಮೆರವಣಿಗೆಯೊಂದಿಗೆ ಗ್ರಾಮದ ಹೆಣ್ಣು ಮಕ್ಕಳಿಂದ ಕುಂಭಮೇಳ ಹಾಗೂ ಯುವಕ ಮಿತ್ರರಿಂದ ಜಾಂಜ ವಾದ್ಯ ಮೇಳದೊಂದಿಗೆ ಅದ್ದೂರಿಯಾಗಿ ಮೆರವಣಿಗೆಯನ್ನು ಮಾಡಲಾಯಿತು. ಅದರಂತೆ ಮಹಾ ಪ್ರಸಾದದ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಗ್ರಾಮದ ಸಮಸ್ತ ಸಾರ್ವಜನಿಕರು, ಯುವಕರು, ಮುಖಂಡರು, ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.
ಮೇಕಲಮರಡಿ::ರಾಮಾಯಣ ಎಂಬ ಅದ್ಭುತ ಮಹಾಕಾವ್ಯವನ್ನು ರಚಿಸಿದ ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿ ಅದ್ದೂರಿ ಆಚರಣೆ...
By -
October 16, 2024
0
Tags: