14-10-2024
ಯರಗಟ್ಟಿ ಸುದ್ದಿ
*ಅಂಬೇಡ್ಕರ್ ಪ್ರೌಢಶಾಲೆಯ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ*
ಯರಗಟ್ಟಿ : ಸಮೀಪದ ಮುರಗೋಡ ಗ್ರಾಮದಲ್ಲಿ ಭಾರತ ರತ್ನ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಶಿಕ್ಷಣ ಸಂಸ್ಥೆಯ ವತಿಯಿಂದ
ಅಂಬೇಡ್ಕರ್ ಪ್ರೌಢಶಾಲೆಯ ಆವರಣದಲ್ಲಿ ನೂತನ ಶಾಲಾ ಕಟ್ಟಡ ನಿರ್ಮಾಣದ ಕಾಮಗಾರಿಯ ಭೂಮಿ ಪೂಜೆ ಸಮಾರಂಭವು ಜರುಗಿತು.
ಹಿರೇಮಠದ ಶ್ರೀ ಮಹೇಶ್ ಸ್ವಾಮಿಗಳ ಭೂಮಿ ಪೂಜೆಯನ್ನು ನೆರವೇರಿಸಿದರು.
ಈ ಸಮಾರಂಭಕ್ಕೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಾಂತಕ್ಕ ಕೆಳಗೇರಿ, ಸಂಸ್ಥಾಪಕ ಕಾರ್ಯದರ್ಶಿಗಳಾದ ಬಿ ವೈ ಚಿಕ್ಕಣ್ಣವರ್, ನಿರ್ದೇಶಕರು ನಾಗಪ್ಪ ಕೆಳಗೇರಿ, ಮಲ್ಲಿಕಾರ್ಜುನ್ ಕೆಳಗೇರಿ, ಶಿವಪ್ರಸಾದ್ ಕೆಳಗೇರಿ, ಉದಯ್ ಕುಮಾರ್ ಚಿಕ್ಕಣ್ಣವರ್, ಶಿಕ್ಷಕರಾದ ಯಾಕೋಶಿ ರಾಹುತ ಇನ್ನು ಹಲವಾರು ಗಣ್ಯಮಾನ್ಯರು ಉಪಸ್ಥಿತರಿದ್ದರು.
(ವರದಿ ಚನ್ನಪ್ಪ ಎಸ್ ಪಣದಿ)