*ಯರಗಟ್ಟಿ* :ಸವದತ್ತಿ ಕ್ಷೇತ್ರದ ವ್ಯಾಪ್ತಿಯ ಮುಗಳಿಹಾಳ ಗ್ರಾಮದಲ್ಲಿ ಕನಕ ಭವನ, ಹಾಗೂ ಗ್ರಾಮ ಪಂಚಾಯತ ನೂತನ ಕಟ್ಟಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೂತನ ಅಂಗನವಾಡಿ ಕಟ್ಟಡ ಅಂದಾಜು 20,00,000 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ವಿಶ್ವಾಸ ವೈದ್ಯ ತಿಳಿಸಿದರು.
ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು ಕ್ಷೇತ್ರದ ವ್ಯಾಪ್ತಿಯ ಮುಗಳಿಹಾಳ ಗ್ರಾಮದಿಂದ ಸುತ್ತಮುತ್ತಲಿನ ಗ್ರಾಮಗಳ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುವುದು.
ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಕಷ್ಟು ರಸ್ತೆಗಳು ಹಾಳಾಗಿದ್ದವು. ಅಲ್ಲದೇ ಶಾಲೆ, ಕಾಲೇಜು, ಭವನ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವ ಸಂಬಂಧ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಿ ಸಂಬಂಧಪಟ್ಟ ಸಚಿವರ ಗಮನ ಸೆಳೆಯುತ್ತೆನೆ.
ಅಲ್ಲದೇ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೂ ಮನವಿ ಮಾಡುತ್ತೇನೆ. ಈಗ ಕ್ಷೇತ್ರದ ವ್ಯಾಪ್ತಿಯಲ್ಲಿ ಹಾಳಾದ ರಸ್ತೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ವಿಶೇಷ ನಿಧಿ ಹಾಗೂ ಲೋಕೋಪಯೋಗಿ ಸಚಿವರಿಂದ ಬರುವ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ಈ ವೇಳೆ ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ರುಕ್ಮವ್ವ ಕೊಪ್ಪದ, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಚನ್ನವ್ವ ಕಡಕೋಳ,
ಎಪಿಎಂಸಿ ಅಧ್ಯಕ್ಷ ನೀಲಕಂಠ ಶಿದಬಸನ್ನವರ, ಸಿಡಿಪಿಓ ಸುನೀತಾ ಪಾಟೀಲ, ಪಿಡಿಓ ಅಮಿತ್ ನಾಯ್ಕ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ,ಪ್ರಕಾಶ ವಾಲಿ, ಬಸು ಸತ್ತೂರ, ರಾಮಣ್ಣ ದಳವಾಯಿ, ವಿಠ್ಠಲ ದಳವಾಯಿ, ಬಸವರಾಜ ಅರಭಾವಿ, ಮಾರುತಿ ಅರಭಾವಿ, ಪಂಚಾಕ್ಷರಿ ಪಟ್ಟಣಶೆಟ್ಟಿ, ಬಸು ಹಸಬಿ, ಗೋಪಾಲ ದಳವಾಯಿ, ಗ್ರಾ,ಪಂ ಸದಸ್ಯರಾದ ರಾಮಸಿದ್ದಪ್ಪ ಧರ್ಮಟ್ಟಿ, ನಾಗಪ್ಪ ಪುಂಜಿ, ರಾಮನಗೌಡ ಗಂಗರೆಡ್ಡಿ, ಶಿವಪ್ಪ ಇಟ್ನಾಳ, ಪದ್ಮಾವತಿ ಮುರಗಟ್ಟಿ, ಮಾನಿಂಗವ್ವ ಮಾಯಣ್ಣಿ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮದ ಜನರು ಇದ್ದರು.
(ವರದಿ ಚನ್ನಪ್ಪ ಎಸ್ ಪಣದಿ)