ಚೆನ್ನಮ್ಮನ ಕಿತ್ತೂರು: ಅಪಹರಣಕ್ಕೆ ಒಳಗಾದ ಬಿಜೆಪಿ ಸದಸ್ಯ ನಾಗರಾಜ ಅಸುಂಡಿ ಕೋರ್ಟಿಗೆ ಹಾಜರು.ಕೋರ್ಟ್ ಧರಿಸಿ ವಕಾಲತ್ತು ವಹಿಸಿದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ಅತ್ಯಂತ ಕುತೂಹಲ ಕೆರಳಿಸಿದ ಚುನಾವಣೆ ಹಿನ್ನೆಲೆ ಬಿಜೆಪಿ ಸದಸ್ಯ ಅಪಹರಣಕ್ಕೆ ಒಳಗಾದ ನಾಗರಾಜ್ ಅಸುಂಡಿ ಅವರು ಕೊನೆಗೂ ಪತ್ತೆಯಾಗಿದ್ದಾರೆ. 
ಈ ವಿಷಯದ ಹಿನ್ನೆಲೆಯಲ್ಲಿ ಬಿಜೆಪಿ ತಮ್ಮ ಪಕ್ಷದ ಸದಸ್ಯರನ್ನು ಅಪಹರಿಸಿದ ಬಗ್ಗೆ ತೀವ್ರ ಪ್ರತಿಭಟನೆಯನ್ನು ಚನ್ನಮ್ಮನ ಕಿತ್ತೂರಿನಲ್ಲಿ ಮಾಜಿ ಶಾಸಕ ಮಹಾಂತೇಶ ದೊಡ್ಡ ಗೌಡರ ಹಾಗೂ ಪಕ್ಷದ ಜಿಲ್ಲಾ ಅಧ್ಯಕ್ಷರು ಪಕ್ಷದ ಹಿರಿಯ ಮುಖಂಡರುಗಳ ಒಳಗೊಂಡು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಅದರಂತೆ ನಾಗರಾಜ್ ಅಸಹೊಂದಿಯವರ ತಾಯಿ ಸಹ ಮಗನ ಅಪಹರಣದಿಂದ ಬೇಸರಗೊಂಡು ಧಾರವಾಡ ಆಸ್ಪತ್ರೆಗೆ ದಾಖಲಾಗಿದ್ದರು. ಕೊನೆಗೂ ಪತ್ತೆಯಾದ ನಾಗರಾಜ್ ಅಸುಂಡಿ ಇಂದು ಮಾನ್ಯ ಘನ ನ್ಯಾಯಾಲಯ ಬೈಲಹೊಂಗಲದಲ್ಲಿ ಪೊಲೀಸರು ಕರೆತಂದು ಹಾಜರುಪಡಿಸಿದ್ದರು, ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯನ ಪರ ವಕಾಲತ ವಹಿಸಿದ ಕಿತ್ತೂರು ಮಾಜಿ ಶಾಸಕ ಮಹಾಂತೇಶ್ ದೊಡ್ಡಗೌಡರ ತಾವೇ ಖುದ್ದಾಗಿ ನಿಯಮದಂತೆ ಕೋಟ್ ಧರಿಸಿ ಕೋರ್ಟ್ ಗೆ ಆಗಮಿಸಿದ್ದು ಗಮನ ಸೆಳೆದಿತ್ತು.

Post a Comment

0Comments

Post a Comment (0)