ಸೋಯಾಬೀನ್ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ರೈತರಿಗೆ ಅನುಕೂಲ ಆಗುವ ದೃಷ್ಟಿಕೋನದಿಂದ ಎಫ್ ಎಕ್ಯೂ ಗುಣಮಟ್ಟದ ಹೆಚ್ಚುವರಿ ಕೇಂದ್ರ ಆರಂಭಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಶನ್ ತಿಳಿಸಿದ್ದಾರೆ.
ಬೆಂಬಲ ಬೆಲೆ ಯೋಜನೆ ಅಡಿ ಕ್ವಿಂಟಾಲ್ ಗೆ ₹4, 892 ದರದಲ್ಲಿ ಗುಣಮಟ್ಟದ ಶ್ರೇಯಾ ಬಿನ್ ಖರೀದಿಸಲಾಗುತ್ತದೆ. ಬೆಳಗಾವಿ ಬೈಲಹೊಂಗಲ ಸಂಕೇಶ್ವರ ನಿಪ್ಪಾಣಿ ಟಿಎಪಿಸಿಎಂಎಸ್ ಹಾಗೂ ನೇಸರಗಿ ಎಂಕೆ ಹುಬ್ಬಳ್ಳಿ ಪಿಕೆಪಿಎಸ ಗಳಲ್ಲಿ ಆರಂಭಿಸಲಾಗಿದೆ. ಗೋಕಾಕ್ ಹಾಗೂ ಮೂಡಲಗಿ ಹೆಚ್ಚುವರಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.