ನೇಸರಗಿಯಲ್ಲಿ ಭಾರಿ ಮಳೆ ಜನಜೀವನ ಅಸ್ತವ್ಯಸ್ತ .
ನೇಸರಗಿ. ಶುಕ್ರವಾರ ಸಂಜೆ 5-15 ರಿಂದ 6-15 ರವರೆಗೆ ಸುರಿದ ಭಾರಿ ಮಳೆಗೆ ರಸ್ತೆಗಳು ನೀರಿನ ಹೊಂಡಗಳತಾಗಿ ರಸ್ತೆಗಳ ಪಕ್ಕ ಇರುವ ಮನೆಗಳ ಒಳಗೆ ನೀರು ತುಂಬಿ ಹೊರಗೆ ಹಾಕುವ ಕಾರ್ಯದಲ್ಲಿ ಜನ ಹೈರಾಣದರು. ಬಸ್ ನಿಲ್ದಾಣ, ಪೇಟೆ ರಸ್ತೆ, ದೇಶನೂರ ರಸ್ತೆ, ಗೋಕಾಕ ರಸ್ತೆ, ದೇವರಕೊಂಡ ಅಜ್ಜಾನ ಗುಡಿ ರಸ್ತೆ, ಸುತಗಟ್ಟಿ ಹೊಲಕ್ಕೆ ಹೋಗುವ ರಸ್ತೆ ಗ್ರಾಮದ ಎಲ್ಲ ಕಡೆ ಮಳೆ ನೀರಿನಿಂದ ಜಲಾವೃತವಾಗಿದ್ದು ಜನರು ಪರದಾಡುವ ಪರಿಸ್ಥಿತಿ ಎದುರಾಗಿದ್ದು, ದ್ವಿಚಕ್ರ ವಾಹನ ಸವಾರರು, ದಾರಿಹೋಕರು ತೀವ್ರ ತೊದರೆ ಅನುಭವಿಸಿದರು ಕೆಲಕಾಲ ರಸ್ತೆ ಸಂಚಾರ ಬಂದಾಗಿತ್ತು. ಭಾರಿ ಪ್ರಮಾಣದ ಹಳ್ಳ ಬಂದು, ಹೊಲ, ಗದ್ದೆಗಳೆಲ್ಲ ನೀರಿನಲ್ಲಿ ಜಲಾವೃತವಾಗಿವೆ.