ರಾಜ್ಯದ ಎಲ್ಲ ಸರಕಾರಿ ನೌಕರರು ಕೆಂಪು ಹಾಗೂ ಹಳದಿ ಬಣ್ಣದ ಕೊರಳುದಾರ (ಟ್ಯಾಗ್‌) ಹೊಂದಿದ ಗುರುತಿನ ಚೀಟಿಯನ್ನು ಧರಿಸಬೇಕು ಎಂದು ರಾಜ್ಯ ಸಕಾರ ಆದೇಶ ಹೊರಡಿಸಿದೆ.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ "ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ' ಅಭಿಯಾನದಡಿಯಲ್ಲಿ ರಾಜ್ಯದ ಎಲ್ಲ ಸರಕಾರಿ ನೌಕರರು ಕೆಂಪು ಹಾಗೂ ಹಳದಿ ಬಣ್ಣದ ಕೊರಳುದಾರ (ಟ್ಯಾಗ್‌) ಹೊಂದಿದ ಗುರುತಿನ ಚೀಟಿಯನ್ನು ಧರಿಸಬೇಕು ಎಂದು ರಾಜ್ಯ ಸಕಾರ ಆದೇಶ ಹೊರಡಿಸಿದೆ.
ರಾಜ್ಯ ಸರಕಾರದ ಎಲ್ಲ ಇಲಾಖೆಗಳು, ನಿಗಮ ಮಂಡಳಿ, ನಿರ್ದೇಶನಾಲಯ, ಆಯುಕ್ತಾಲಯ ಹಾಗೂ ಸರಕಾರಿ ಸ್ವಾಮ್ಯದ ಎಲ್ಲ ಕಚೇರಿಗಳಲ್ಲಿ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೆಂಪು ಹಳದಿ ಬಣ್ಣದ ಟ್ಯಾಗ್‌ ಒದಗಿಸಿಕೊಡಬೇಕು ಎಂದು ಆದೇಶದಲ್ಲಿ ಹೇಳಿದೆ.

ನೂತನ ಕೊರಳುದಾರದ ವಿನ್ಯಾಸವನ್ನು https://photos.app.goo.gl/YcjeNHnDNPecW8Q48 ಎಲ್ಲ ಈ ಆನ್‌ಲೈನ್‌ ವಿಳಾಸದಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಸಿಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ (ರಾಜಕೀಯ) ಇವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ. ಇಲ್ಲಿಯವರೆಗೆ ರಾಜ್ಯದ ಸರಕಾರಿ ನೌಕರರು ನೀಲಿ ಬಣ್ಣದ ಐಡಿ ಟ್ಯಾಗ್‌ ಹಾಕುತ್ತಿದ್ದರು. ಇದೀಗ ಅದನ್ನು ಬದಲಿಸಿ ಕೆಂಪು-ಹಳದಿ ಬಣ್ಣದ ಟ್ಯಾಗ್‌ ಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ.

Post a Comment

0Comments

Post a Comment (0)