ಬೈಲಹೊಂಗಲ ತಾಲೂಕಿನ ನೇಸರಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮೇಕಲಮರಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಕೇಂದ್ರದಲ್ಲಿ ಇಂದು ನೇಸರಗಿ ಆರಕ್ಷಕ ಠಾಣೆಯಿಂದ ಗಣೇಶ ಹಬ್ಬದ ನಿಮಿತ್ಯವಾಗಿ ಗ್ರಾಮದಲ್ಲಿ ಗಣೇಶ ಮೂರ್ತಿಗಳನ್ನು ಯುವಕರು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿ ಹಬ್ಬವನ್ನು ಆಚರಿಸುವ ಕುರಿತು ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು.
ಪೂರ್ವಭಾವಿ ಸಭೆಯನ್ನು ನೇಸರಗಿಯ ಆರಕ್ಷಕ ಠಾಣೆಯ ಪಿಎಸ್ಐ ವಾಯ ಎಲ್ ಸೀಗಿಹಳ್ಳಿ ನೇತೃತ್ವದಲ್ಲಿ ಸಭೆಯನ್ನು ಆಯೋಜನೆ ಮಾಡಲಾಗಿತ್ತು, ಗಣೇಶ ಮೂರ್ತಿಗಳನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಯುವಕ ಸಂಘಟನೆಗಳು ಸಂಘದ ಮುಖಂಡರುಗಳು ಸಂಘದ ಹೆಸರು ಮತ್ತು ಸದಸ್ಯರ ಮೊಬೈಲ್ ನಂಬರ್ ಗಳನ್ನು ಅರ್ಜಿಯಲ್ಲಿ ನಮೂದಿಸಿ ಪರವಾನಿಗೆಯನ್ನು ಪಡೆದುಕೊಳ್ಳಬೇಕು, ಹಾಗೂ ಮೆರವಣಿಗೆಯಲ್ಲಿ ಡಾಲ್ಬಿ ಹಾಗೂ ಸೌಂಡ್ ಸಿಸ್ಟಮ್ ಗಳನ್ನು ಹಚ್ಚುವುದನ್ನು ಸಂಪೂರ್ಣವಾಗಿ ಸರ್ಕಾರದ ಆದೇಶದ ಪ್ರಕಾರ ನಿಷೇಧಿಸಲಾಗಿದೆ, ಅದರಂತೆ ಗಲಾಟೆ, ತಂಟೆ, ತಕರಾರು ಮಾಡಬಾರದು ಯಾವುದೇ ಅಂತಹ ಸಮಸ್ಯೆ ಇದ್ದರೆ ತಕ್ಷಣ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಬೇಕು ಹಾಗೂ ಪೋಲಿಸ್ ಠಾಣೆಗೆ ವಿಷಯವನ್ನು ತಿಳಿಸಬೇಕು ಎಂದು ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಗ್ರಾಮದ ಪ್ರಮುಖರಾದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ನಿಂಗಪ್ಪ ಅರಕೇರಿ ಅವರು ಮಾತನಾಡಿ ಗ್ರಾಮದಲ್ಲಿ ಪ್ರತಿವರ್ಷದಂತೆ ಯುವಕರು ಸಾರ್ವಜನಿಕ ಗಣೇಶನನ್ನು ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ಗಣೇಶ ಹಬ್ಬವನ್ನು ಆಚರಣೆ ಮಾಡುತ್ತಾರೆ. ಯುವಕ ಮಿತ್ರರಲ್ಲಿ ತಿಳಿಸುವುದಂದರೆ ಗ್ರಾಮದಲ್ಲಿ ಇರುವ ನಾವೆಲ್ಲರೂ ಒಂದೇ ಎಂಬ ಮನೋಭಾವನೆಯಿಂದ ಹಬ್ಬವನ್ನು ಆಚರಣೆ ಮಾಡಬೇಕು, ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಶಾಂತತೆ ಯಿಂದ ವಿಸರ್ಜನೆ ಮಾಡಬೇಕು ಎಂದು ಗ್ರಾಮದ ಯುವಕರಿಗೆ ತಿಳುವಳಿಕೆಯನ್ನು ನೀಡಿದರು.
ಈ ಸಭೆಯಲ್ಲಿ ಆರಕ್ಷಕ ಠಾಣೆಯ ವತಿಯಿಂದ ಪೊಲೀಸ್ ಸಿಬ್ಬಂದಿಗಳಾದ ಎನ್ ಪಿ ಪರಡ್ಡಿ ಎಸ ಬಿ ಮುರಗೋಡ ಎ ಕೆ ಡಂಬರ ಹಾಗೂ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಕಾಶಿಮ ಜಮಾದಾರ ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಯ್ಯ ಹಿರೇಮಠ ಪಿ ಕೆ ಪಿ ಎಸ್ ಅಧ್ಯಕ್ಷರಾದ ಬಾಹುಬಲಿ ಟಗರಿ ಬಸವರಾಜ ಕಂಡ್ಯೈನವರ ರಾಜು ಕಡಕೋಳ ಮಂಜುನಾಥ ಹೊಸಮನಿ ಪ್ರಾಥಮಿಕ ಶಾಲೆ ಮೇಕಲಮರಡಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಜಿತ ತುಬಾಕ ಲಕ್ಷ್ಮಣ್ ಬುದ್ನೂರ ರುದ್ರಪ್ಪ ಕಲ್ಲನ್ನವರ ಊರಿನ ಯುವಕರು ಹಾಗೂ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.