ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳಿಂದ ಅಪಾಯಕಾರಿಯಾಗಿ ದಾಳಿ ಮಾಡುತ್ತಿರುವುದರಿಂದ ಭಯದ ಆತಂಕ ಮೂಡಿರುತ್ತದೆ ಜಾನುವಾರುಗಳನ್ನು ಹಾಗೂ ಸಣ್ಣ ಸಣ್ಣ ಮಕ್ಕಳನ್ನು ಕಚುತ್ತಿದ್ದು ಭಯಾನಕವಾದ ಹಾವಳಿಯನ್ನು ಉಂಟು ಮಾಡಿವೇ ಆದ ಕಾರಣ ಗ್ರಾಮದ ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ಮನವಿ ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿರುವ ಬೀದಿ ನಾಯಿಗಳನ್ನು ಸ್ಥಳಾಂತರಿಸುವ ಕುರಿತು ಮನವಿಯಲ್ಲಿ ತಿಳಿಸಲಾಗಿದೆ. ಈ ವಿಷಯವಾಗಿ ಪಂಚಾಯತಿಯು ಗ್ರಾಮಸ್ಥರಿಗೆ ಡಂಗುರ ಸಾರವ ಮೂಲಕ ಎಚ್ಚರಿಕೆ ಕೊಡಬೇಕು ಅಧಿಕೃತ ಇಲ್ಲದಿರುವ ಚಿಕ್ಕನ್ ಅಂಗಡಿಗಳನ್ನು ತೆರವುಗೊಳಿಸಬೇಕು. ಗ್ರಾಮಸ್ಥರಿಂದ ಗ್ರಾಮ ಪಂಚಾಯಿತಿಗೆ ಮನವಿ ನೀಡಲಾಯಿತು.
ಬೀದಿ ನಾಯಿಗಳ ಹಾವಳಿಯಿಂದ ಗ್ರಾಮದಲ್ಲಿ ಆತಂಕ...
By -
August 02, 2024
0