200 ನೇ ಚೆನ್ನಮ್ಮನ ಕಿತ್ತೂರು ಉತ್ಸವಕ್ಕೆ 5 ಕೋಟಿ, ಏಳು ಎಕರೆ ಜಮೀನಿನಲ್ಲಿ 35 ಕೋಟಿ ವೆಚ್ಚದ ಥೀಮ್ ಪಾರ್ಕ್ ಗೆ ಬಿಡುಗಡೆ, ಸಚಿವ ಕೃಷ್ಣ ಬೈರೇಗೌಡ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
200 ನೇ ವೀರರಾಣಿ ಕಿತ್ತೂರು ಚನ್ನಮ್ಮ ಉತ್ಸವದ ಪ್ರಯುಕ್ತ ಮಾನ್ಯ ಕಂದಾಯ ಸಚಿವರ ನೇತೃತ್ವದಲ್ಲಿ ನಡೆದ ಸಭೆಯ ಸಾರಾಂಶಗಳು . ಕಿತ್ತೂರು ಕೋಟೆ ಆವರಣದ ಎಳು ಎಕರೆ ಜಾಗದಲ್ಲಿ ಭವ್ಯವಾದ ಥೀಮ ಪಾರ್ಕ ನಿರ್ಮಾಣ ಸೇರಿದಂತೆ ಚನ್ನಮ್ಮನ ಕಿತ್ತೂರಿನ ಸಮಗ್ರ ಅಭಿವೃದ್ದಿಗಾಗಿ 40 ಕೋಟಿ ಕಾಮಗಾರಿಗೆ ಅನುಮೋದನೆ ನೀಡಿ ಅನುದಾನ ಬಿಡುಗಡೆಗೊಳಿಸಲಾಗಿದೆ.
ದೇಶದಲ್ಲಿ ಪ್ರಥಮ ಸ್ವಾತಂತ್ರದ ಕಿಚ್ಚು ಹತ್ತಿಸಿದ ಕೀರ್ತಿ ಕಿತ್ತೂರಿನ ರಾಣಿ ಚನ್ನಮ್ಮನಿಗೆ ಸಲ್ಲುತ್ತದೆ. ಈ ಬಾರಿಯ ಉತ್ಸವ 200 ನೇ ವರ್ಷದ ವಿಜಯೋತ್ಸವ ರಾಷ್ಟ್ರಮಟ್ಟದ ಉತ್ಸವವಾಗಬೇಕು, ದೇಶದಾತ್ಯಂತ ಜನರು ಚನ್ನಮ್ಮನ ಕಿತ್ತೂರು ನಾಡಿನ ಕಡೆಗೆ ಪ್ರವಾಸಕ್ಕೆ ಆಗಮಿಸುವಂತೆ ಪ್ರವಾಸಿ ಹಬ್ಬವಾಗಬೇಕು ಎನ್ನುವುದು ಶಾಸಕ ಬಾಬಾಸಾಹೇಬ್ ಪಾಟೀಲ ಅವರ ಒತ್ತಾಯವಾಗಿತ್ತು.
ಶಾಸಕರ ವಿಶೇಷ ಪ್ರಯತ್ನಕ್ಕೆ ಸಾರ್ವಜನಿಕರು, ಮಠಾಧೀಶರು, ಸಂಘ ಸಂಸ್ಥೆಗಳ ಪ್ರಮುಖರು ಸೇರಿದಂತೆ ನಾಡಿನ ಜನತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಪ್ರತಿಕ್ರಿಯೆ ನೀಡಿ “ರಾಜ್ಯ ಕಂಡ ಅತ್ಯಂತ ಕ್ರಿಯಾಶೀಲ ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ತೇಜಸ್ವಿ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರ ಸತತ ಪ್ರಯತ್ನದಿಂದ 200ನೇ ವರ್ಷದ ಕಿತ್ತೂರು ವಿಜಯೋತ್ಸವಕ್ಕೆ ರೂ 5 ಕೋಟಿ ಹಾಗೂ ಥೀಮ್ ಪಾರ್ಕ ನಿರ್ಮಾಣ ಮಾಡಲು ರೂ 35 ಕೋಟಿ ಹಣ ಬಿಡುಗಡೆಗೊಳಿಸದ್ದಕ್ಕೆ ಅಭಿನಂದನೆಗಳು.
ಪೂರ್ವಭಾವಿ ಸಭೆಯಲ್ಲಿ ಶಾಸಕ ಮಹಾಂತೇಶ ಕೌಜಲಗಿ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಜಿ.ಪಂ. ಸಿಇಒ ರಾಹುಲ ಶಿಂಧೆ, ಉಪ ವಿಭಾಗ ಅಧಿಕಾರಿ ಪ್ರಭಾವತಿ ಪಕ್ಕಿರಪೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಕ್ಯೂರೇಟರ್ ರಾಘವೇಂದ್ರ, ಸಂತೋಷ ಹಾನಗಲ್ಲ, ಅಸ್ಪಾಕ ಹವಾಲ್ದಾರ ಉಪಸ್ಥಿತರಿದ್ದರು. 


Post a Comment

0Comments

Post a Comment (0)