ಬೈಲಹೊಂಗಲ : ಬೈಲಹೊಂಗಲ ತಾಲೂಕು ನಾಗನೂರ ಗ್ರಾಮದ "ಮಾಜಿ ಸೈನಿಕರ ಕಲ್ಯಾಣ ಸಂಘ(ರಿ)ನಾಗನೂರ"ತಾ. ಬೈಲಹೊಂಗಲ .ಜಿ .ಬೆಳಗಾವಿ. ಇದರ ಉಧ್ಘಾಟನಾ ಸಮಾರಂಭ ಕಾರ್ಯಕ್ರಮ ದಿ.26/07/2024ಶುಕ್ರವಾರದಂದು ನಾಗನೂರ ಗ್ರಾಮದ ಶ್ರೀ ಶಿವಬಸವ ಸಭಾಭವನದಲ್ಲಿ ಅದ್ದೂರಿಯಾಗಿ ಜರುಗಿತು. ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಮ ನಿ ಪ್ರ .ಅಲ್ಲಮ ಪ್ರಭು ಮಹಾಸ್ವಾಮಿಗಳು ರುದ್ರಾಕ್ಷಿಮಠ ನಾಗನೂರ . ಬೆಳಗಾವಿ ಅವರು ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ಶ್ರೀಮತಿ ರೋಹಿಣಿ ಬಾಬಾಸಾಹೇಬ್ ಪಾಟೀಲ್. ಕಿತ್ತೂರ ವಿಧಾನಸಭಾ ಕ್ಷೇತ್ರದ ಮಾಜಿ ಸದಸ್ಯರಾದ ಮಹಾಂತೇಶ ದೊಡಗೌಡರ. ಶ್ರೀಮತಿ ಲಕ್ಷ್ಮೀ ಇನಾಮದಾರ ನಾಗನೂರ ಗ್ರಾಮ ಪಂಚಾಯತ ಅದ್ಯಕ್ಷರಾದ ಕು . ಶೋಭಾ ಪಾಟೀಲ್. ಡಿ. ಎಮ್ ಪಾಟೀಲ್ .ಬೈಲಹೊಂಗಲ ತಾಲೂಕು ತಹಶೀಲ್ದಾರ ಹನುಮಂತ ಶಿರಹಟ್ಟಿ. ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶುಭಾಶ ಸಂಪಗಾವಿ. ಹಾಗೂ ಹಾವೇರಿ ಸಮಾಜಕಲ್ಯಾಣ ಜಿಲ್ಲಾಧಿಕಾರಿ ಅಶೋಕ ಗಡ್ಡಿಗೌಡರ ಹಾಗೂ ಸುತ್ತಮುತ್ತಲಿನ ಗ್ರಾಮದ ಮಾಜಿ ಸೈನಿಕರು ಭಾಗವಹಿಸಿದ್ದರು. ಸಂಧರ್ಭದಲ್ಲಿ ದೇಶಕ್ಕೆ ಸೇವೆ ಸಲ್ಲಿಸಿದ ಮಾಜಿ ಸೈನಿಕರಿಗೆ ಗೌರವ ಸಮರ್ಪಣೆ ಜೊತೆಗೆ ಸನ್ಮಾನಿಸಲಾಯಿತು. ಹಾಗೂ ಕಾರ್ಗಿಲ್ ವಿಜಯೋತ್ಸವದ ಬಗ್ಗೆ ಸಮಾರಂಭದಲ್ಲಿ ಮಾತನಾಡಿ ಗೌರವಿಸಲಾಯಿತು. ಸಭೆಗೆ ಮಳೆಯನ್ನು ಲೆಕ್ಕಿಸಿದೆ ಅಪಾರ ಜನ ಬಾಗವಹಿಸಿದ್ದರು. ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು .ಹಾಗೂ ಮಾಜಿ ಹಾಗೂ ಹಾಲಿ ಸೈನಿಕರು ಹಾಗು ಅವರ ಕುಟುಂಬದ ಸದಸ್ಯರು ಬಾಗವಹಿಸಿ ಕಾರ್ಯಕ್ರಮ ಯಶಸ್ವಿಗೋಳಿಸಿದರು..