ಮೇಕಲಮರಡಿ ಗ್ರಾಮದಲ್ಲಿ ಚನ್ನಮ್ಮನ ಕಿತ್ತೂರಿನ ಶಾಸಕ ಬಾಬಾಸಾಹೇಬ್ ಪಾಟೀಲ್ ಅವರ ಜನ್ಮದಿನ ಅಂಗವಾಗಿ ಮಕ್ಕಳಿಗೆ ಪೆನ್,ಬುಕ್ ಮತ್ತು ಸಸಿ ವಿತರಣೆ ಮಾಡುವುದರ ಮೂಲಕ ಆಚರಣೆ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ನೇಸರಗಿ...
ಮೇಕಲಮರಡಿ........
ಐತಿಹಾಸಿಕ ಕ್ಷೇತ್ರ ವಾದ ಚನ್ನಮ್ಮನ ಕಿತ್ತೂರಿನ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಬಾಬಾ ಸಾಹೇಬ್ ಪಾಟೀಲ್ ಅವರ 52ನೇ ಜನ್ಮದಿನದ ಅಂಗವಾಗಿ ಕಿತ್ತೂರು ಮತ ಕ್ಷೇತ್ರದ ಮೇಕಲಮರಡಿ ಗ್ರಾಮದಲ್ಲಿ ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಸರಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ಉಚಿತವಾಗಿ ಪೆನ್ ನೋಟ್ ಬುಕ್ ವಿತರಣೆ ಮಾಡಲಾಯಿತು. ಹಾಗೂ ಶ್ರಮಿಕ ಅಭಿವೃದ್ಧಿ ಸಂಘದ ಕಚೇರಿಯಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿ ಬಳಗದಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿದರು, ಹಾಗೂ ಜನುಮದಿನದ ನಿಮಿತ್ಯವಾಗಿ ಗ್ರಾಮದಲ್ಲಿಯ ಅಂಗವಿಕಲರಿಗೆ ಮತ್ತು ವಿಕಲಚೇತನರಿಗೆ ಒಂದೊಂದು ಜೊತೆಯ ಬಟ್ಟೆಯನ್ನು ವಿತರಿಸಲಾಯಿತು. ಕಿತ್ತೂರು ಮತಕ್ಷೇತ್ರದಲ್ಲಿ ಶಾಸಕರಾಗುವ ಮೊದಲೇ ಕ್ಷೇತ್ರದ ಜನತೆಯ ನಾಡಿ ಮಿಡಿತ ಅರಿತವರು ಮತ್ತು ರಾಜಕೀಯದಲ್ಲಿ ಸಾಕಷ್ಟು ಅನುಭವ ಹೊಂದಿದವರು ನೇರ ನಡೆಯಿಂದ ಹೆಸರುವಾಸಿಯಾಗಿರುವ ಶಾಸಕರು ಬಾಬಾ ಸಾಹೇಬ್ ಪಾಟೀಲ ಅವರಿಗೆ ಅಭಿಮಾನಿ ಬಳಗದವರು ಹಾಗೂ ಕಾರ್ಯಕರ್ತರು ಕೂಡಿ ಜೈಕಾರ ಹಾಕಿ ಜನುಮ ದಿನವನ್ನು ವಿಜೃಂಭಣೆಯಿಂದ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಶಾಸಕರು ಬಾಬಾ ಸಾಹೇಬ್ ಪಾಟೀಲ ಉಪಸ್ಥಿತಿಯಲ್ಲಿ ನೇಸರಗಿ ಭಾಗದ ಕಾರ್ಯಕರ್ತರಾದ 
 ಅಡವಪ್ಪ ಮಾಳಣ್ಣವರ,ಸಚಿನ್ ಪಾಟೀಲ ( ಯುವ ಮುಖಂಡರು )
 ಮಲ್ಲಿಕಾರ್ಜುನ್ಕ ಕಲ್ಲೋಳಿ ಸುಭಾಷ್ ರಾಮನಟ್ಟಿ, ರುದ್ರಗೌಡ ಪಾಟೀಲ್ ,ಸಿದ್ದಪ್ಪ ಕಡಬಿ ,ಅಜ್ಜಪ್ಪ ಸತ್ಯಣ್ಣವರ ,ಬಾಳೇಶ ಪೂಜಾರಿ ರಾಜು ಕೂಗುನವರ, ಬೀರಪ್ಪ ಗೊಡಚಿ,ಪಕೀರಪ್ಪ ಮೂಕಾಶಿ,ಕಾಶಿಮ ಜಮಾದಾರ(ಗ್ರಾಪಂ ಉಪಾಧ್ಯಕ್ಷರು ಮೆಕಲಮರಡಿ)ಬಾಬು,ಹೊಸಮನಿರಾಜು ಕಡಕೋಳ, ದಸಗಿರಸಾಬ್ ಜಮಾದಾರ,ರಾಜು ಹನ್ನಿಕೇರಿ(ಗ್ರಾಪಂ ಸದಸ್ಯರು ಮೇಕಲಮರಡಿ)ಲಕ್ಷ್ಮಣ್ ಪೂಜಾರಿ,ಮಂಜುನಾಥ ಹೊಸಮನಿ,ವಿಶಾಲ ಜಂಗಳಿ,ವಿನೋದ ಹೊಸಮನಿ,ದಿಲವಾರ ಶಾಬಾಯಿ ,ಬೀರಪ್ಪ ಗೊಡಚಿ,ಬಹದ್ದೂರ್ ನಾಯಕ್,ಮಲಿಕ್ ಶಿಲೆದಾರ,ಯಲ್ಲಪ್ಪ ಸಿಗ್ಗಾವಿ, ಬಸವರಾಜ್ ಗಣಾಚಾರಿ ಹಾಗೂ ಗ್ರಾಮದ ಕಾರ್ಯಕರ್ತರು ಉಪಸ್ಥಿತರಿದ್ದರು.
ಬೀರೋ ರಿಪೋರ್ಟ್ ಕಿತ್ತೂರು ಕ್ರಾಂತಿ ಟಿವಿ ಬಸವರಾಜ ಕುರಗುಂದ...

Post a Comment

0Comments

Post a Comment (0)