ಲಾಲ್ ಕೃಷ್ಣ ಅಡ್ವಾಣಿ ಅವರ ಸಾವಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಹೀಗೆ ಸುಳ್ಳು ಸುದ್ದಿ ಹರಡುತ್ತಿರುವ ಸಮಯದಲ್ಲೇ ಎಲ್ಲರೂ ಹಿಂದೆ & ಮುಂದೆ ಯೋಚನೆ ಮಾಡದೆ ಅಡ್ವಾಣಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಪರಿಸ್ಥಿತಿ ಈ ರೀತಿ ವಿಕೋಪಕ್ಕೆ ಹೋಗಿರುವ ಸಮಯದಲ್ಲೇ ಕೇಂದ್ರ ಸಚಿವ ವಿ. ಸೋಮಣ್ಣ & ಸಂಸದ ಡಾ.ಮಂಜುನಾಥ್ ಕೂಡ ಅಡ್ವಾಣಿ ಅವರ ವಿಚಾರದಲ್ಲಿ ದೊಡ್ಡ ಎಡವಟ್ಟು ಮಾಡಿದ್ದಾರೆ.
ಅಂದಹಾಗೆ ಲಾಲ್ ಕೃಷ್ಣ ಅಡ್ವಾಣಿ ಅವರು ಕೆಲವು ದಿನಗಳ ಹಿಂದಷ್ಟೇ ವಯೋ ಸಹಜವಾದ ಕಾಯಿಲೆಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತೆರಳಿದ್ದರು. ಆ ನಂತರ ಚಿಕಿತ್ಸೆ ಪಡೆದು ಅವರು ಡಿಸ್ಚಾರ್ಜ್ ಕೂಡ ಆಗಿದ್ದರು. ಆದರೆ ಹೀಗೆ, ಭಾರತದ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರು ಆಸ್ಪತ್ರೆಯಿಂದ ಬಿಡುಗಡೆ ಆಗಿ ಬಂದ ನಂತರ ಯಾರೋ ಕಿಡಿಗೇಡಿಗಳು, ಈ ರೀತಿಯಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಹೀಗಿದ್ದಾಗ ಕರ್ನಾಟಕ ಮೂಲದ ಕೇಂದ್ರ ಸಚಿವ ವಿ. ಸೋಮಣ್ಣ & ಸಂಸದ ಡಾ. ಮಂಜುನಾಥ್ ಹಿಂದೆ & ಮುಂದೆ ಯೋಚಿಸದೇ ಕಿಡಿಗೇಡಿಗಳು ತೋಡಿದ ಸುಳ್ಳು ಸುದ್ದಿಯ ಹಳ್ಳಕ್ಕೆ ಬಿದ್ದು, ಅಡ್ವಾಣಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ಆರೋಪ ಕೇಳಿಬಂದಿದೆ.
ಅಡ್ವಾಣಿ ಅವರು ಆರೋಗ್ಯವಾಗಿ ಇದ್ದಾರೆ
ಲಾಲ್ ಕೃಷ್ಣ ಅಡ್ವಾಣಿ ಅವರು ಸಂಪೂರ್ಣ ಆರೋಗ್ಯವಾಗಿ ಇದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬುದಾಗಿ ಖಚಿತ ಮಾಹಿತಿ ಸಿಕ್ಕಿದೆ. ಹೀಗಾಗಿ ಸಾಮಾನ್ಯ ಜನ ಸೋಷಿಯಲ್ ಮೀಡಿಯಾದ ಮೂಲಕ ಈ ಸುಳ್ಳು ಸುದ್ದಿ ಶೇರ್ ಮಾಡುತ್ತಿದ್ದಾರೆ. ಸಾಮಾನ್ಯ ಜನರು ಬಿಡಿ ಜನಪ್ರತಿನಿಧಿ ಅಂತಾ ಕರೆಸಿಕೊಳ್ಳುವವರು ಕೂಡ ಈ ರೀತಿಯಾಗಿ ಸುಳ್ಳು ಸುದ್ದಿ ಹಂಚಿಕೊಂಡಿರುವ ಕಾರಣ ಇದೀಗ ಎಲ್ಲೆಲ್ಲೂ ಆಕ್ರೋಶ ಮೊಳಗುತ್ತಿದೆ. ಈ ರೀತಿಯಾಗಿ ಮಾಡುವುದು ತಪ್ಪು ಎನ್ನುತ್ತಾ ತಜ್ಞರು ಬುದ್ಧಿ ಹೇಳುತ್ತಿದ್ದಾರೆ. ಅಲ್ಲದೆ ಅಡ್ವಾಣಿ ಅವರ ಬಗ್ಗೆ ಮೊದಲಿಗೆ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದು ಯಾರು? ಅನ್ನೋದು ತಿಳಿದು ಶಿಕ್ಷೆ ಕೊಡಿಸುವಂತೆ ಆಗ್ರಹ ಕೇಳಿಬಂದಿದೆ.
ಹೋರಾಟದ ನೆಲೆಯಿಂದ ಅಡ್ವಾಣಿ ಅವರು..
1927 ನವೆಂಬರ್ 8 ರಂದು ಜನಿಸಿದ ಲಾಲ್ ಕೃಷ್ಣ ಅಡ್ವಾಣಿ ಅವರು ಹೋರಾಟದ ನೆಲೆಯಿಂದ ಬಂದ ನಾಯಕ. ಬಿಜೆಪಿ ಪಕ್ಷದಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದ ಲಾಲ್ ಕೃಷ್ಣ ಅಡ್ವಾಣಿ ಅವರು, ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲೂ ಸದ್ದು ಮಾಡಿದ್ದರು. ಹಾಗೇ ದೊಡ್ಡ ದೊಡ್ಡ ಹೋರಾಟದಲ್ಲಿ & ಕಾಂಗ್ರೆಸ್ ವಿರುದ್ಧ ಭಾರಿ ದೊಡ್ಡ ಪ್ರತಿಭಟನೆಗಳನ್ನು ಹಮ್ಮಿಕೊಂಡು ಸದ್ದು ಮಾಡಿದ್ದರು.
ವಾಜಪೇಯಿ ಅವರ ಸರ್ಕಾರದಲ್ಲಿ ಲಾಲ್ ಕೃಷ್ಣ ಅಡ್ವಾಣಿ ಉಪಪ್ರಧಾನಿ ಆಗಿ ಕೆಲಸ ಮಾಡಿ, ಇಡೀ ದೇಶದ & ಜಗತ್ತಿನ ಗಮನವನ್ನ ಸೆಳೆದಿದ್ದರು. ಹೀಗಿದ್ದಾಗ ಅವರಿಗೆ 96 ವರ್ಷ ವಯಸ್ಸು ಆಗಿದ್ದು, ಯಾರೋ ಕೆಲವು ಕಿಡಿಗೇಡಿ ಯುವಕರು ಸೋಷಿಯಲ್ ಮೀಡಿಯಾ ಮೂಲಕ ಅವರ ಸಾವಿನ ಕುರಿತು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಈ ಬಗ್ಗೆ ಜನಾಕ್ರೋಶಕ್ಕೆ ಈ ಸುಳ್ಳು ಸುದ್ದಿಯು ಕಾರಣವಾಗ್ತಿದೆ. ಅಲ್ಲದೆ ಹೀಗೆ ಸುಳ್ಳು ಸುದ್ದಿ ಹರಡುವವರ ವಿರುದ್ಧ ಪೊಲೀಸರು ಕ್ರಮವನ್ನ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ ಜನ.