ದರ್ಶನ್ ತೂಗುದೀಪ್ ಅವರು ಇನ್ನೇನು ಕೆಲವೇ ದಿನಗಳಲ್ಲಿ ಪರಪ್ಪನ ಅಗ್ರಹಾರ ಜೈಲಿಂದ ಹೊರಗೆ ಬರಲಿದ್ದಾರೆ. ದರ್ಶನ್ ತೂಗುದೀಪ್ ಅವರಿಗೆ ಜಾಮೀನು ಸಿಗಲಿದೆ ಅಂತಾ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಹಾಗೇ ದರ್ಶನ್ ಅವರು ರಿಲೀಸ್ ಆಗುವ ದಿನ ಪರಪ್ಪನ ಅಗ್ರಹಾರ ಜೈಲಿನಿಂದ ಹಿಡಿದು ಅವರ ಮನೆಯ ತನಕ ಭರ್ಜರಿಯಾಗಿ ಮೆರವಣಿಗೆ ಮಾಡಿ, ಕರೆದುಕೊಂಡು ಹೋಗಲು ದಚ್ಚು ಫ್ಯಾನ್ಸ್ ಎಂತಹ ಪ್ಲ್ಯಾನ್ ಮಾಡಿದ್ದಾರೆ ಗೊತ್ತಾ?
Ad.
ದರ್ಶನ್ ತೂಗುದೀಪ್ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೋಟಿ ಕೋಟಿ ಸಂಭಾವನೆಯನ್ನು ಪಡೆಯುತ್ತಿದ್ದ ನಟ. ಹಾಗೇ ಅತಿ ಹೆಚ್ಚು ಬ್ಯುಸಿ ಇದ್ದ ನಟರಲ್ಲಿ ದರ್ಶನ್ ತೂಗುದೀಪ್ ಅವರು ಕೂಡ ಒಬ್ಬರು. ಹೀಗಿದ್ದಾಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ 2ನೇ ಆರೋಪಿ ಆಗಿ, ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಸೇರಿದ್ದಾರೆ ದರ್ಶನ್ ತೂಗುದೀಪ್ & ಪವಿತ್ರಾ ಗೌಡ. ಈ ಹಿಂದೆ ತಮ್ಮ ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಕಾರಣಕ್ಕೂ ದರ್ಶನ್ ಅವರಿಗೆ 2011 ರಲ್ಲಿ ಜೈಲಿಗೆ ಹೋಗುವ ಪರಿಸ್ಥಿತಿ ಬಂದಿತ್ತು. ಇದೀಗ ಕೊಲೆ ಆರೋಪದಲ್ಲಿ ದರ್ಶನ್ ಅವರು ಜೈಲಿಗೆ ಹೋಗಿದ್ದು, ದರ್ಶನ್ ತೂಗುದೀಪ್ ಜೈಲಿನಿಂದ ರಿಲೀಸ್ ಆಗಿ ಹೊರ ಬಂದಾಗ ಹೆಂಗೆಲ್ಲಾ ಸೆಲೆಬ್ರೇಟ್ ಮಾಡಲಿದ್ದಾರೆ ಗೊತ್ತಾ 'ಡಿ-ಬಾಸ್' ಸೆಲೆಬ್ರಿಟಿಗಳು? ಮುಂದೆ ಓದಿ.
Ad.
ಅಂದಹಾಗೆ ಇದೀಗ ದರ್ಶನ್ ಅವರ ಅಭಿಮಾನಿಗಳು ಹಾಕಿಕೊಂಡಿರುವ ಪ್ಲಾನ್ ಪ್ರಕಾರವೇ ದರ್ಶನ್ ತೂಗುದೀಪ್ ಅವರು ರಿಲೀಸ್ ಆಗುವ ದಿನ ಹಬ್ಬದ ವಾತಾವರಣ ನಿರ್ಮಾಣ ಆಗಲಿದೆ. ಅದ್ರಲ್ಲೂ ಪರಪ್ಪನ ಅಗ್ರಹಾರ ಜೈಲಿನಿಂದ ನೇರವಾಗಿ ಬೃಹತ್ ಮೆರವಣಿಗೆ ಮೂಲಕ ನಟ ದರ್ಶನ್ ಅವರನ್ನು ಅವರ ಮನೆಯ ತನಕ ಕರೆದುಕೊಂಡು ಹೋಗಲು ಇದೀಗ ಅಭಿಮಾನಿ ಬಳಗ ನಿರ್ಧಾರ ಮಾಡಿದೆ ಎನ್ನಲಾಗಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಕೂಡ ಭಾರಿ ದೊಡ್ಡ ಚರ್ಚೆ ಶುರುವಾಗಿದೆ. ಹಾಗಾದ್ರೆ ಮೆರವಣಿಗೆ ಮೂಲಕ ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್ ಅವರನ್ನ ಕರೆದುಕೊಂಡು ಬಂದರೆ ಮನೆ ತಲುಪಲು ಎಷ್ಟು ದಿನಗಳು ಬೇಕಾಗಬಹುದು? ಮುಂದೆ ಓದಿ.
ದರ್ಶನ್ ಮನೆ ತಲಪಲು 3 ದಿನ?
ಕೆಲ ದಿನಗಳ ಹಿಂದೆ ಕನ್ನಡ ಸಿನಿಮಾ ರಂಗದ ನಿರ್ದೇಶಕ & ದರ್ಶನ್ ಅವರ ಆಪ್ತರೊಬ್ಬರು ಇದೇ ಮಾತನ್ನು ಪ್ರಸ್ತಾಪ ಮಾಡಿದ್ದರು. ನಟ ದರ್ಶನ್ ತೂಗುದೀಪ್ ಅವರು ರಿಲೀಸ್ ಆಗಿ ಬರುವ ದಿನ ಬೃಹತ್ ಮೆರವಣಿಗೆ ಮೂಲಕ ಅವರನ್ನು ಮನೆಗೆ ಕರೆದುಕೊಂಡು ಹೋಗುತ್ತೇವೆ ಎಂದಿದ್ದರು. ಇದಕ್ಕಾಗಿ ಎಲ್ಲಾ ರೀತಿಯ ತಯಾರಿ ನಡೆಸುತ್ತೇವೆ ಎಂಬ ಬಗ್ಗೆಯೂ ಮುನ್ಸೂಚನೆ ನೀಡಿದ್ದರು.
ಹೀಗಾಗಿ ದರ್ಶನ್ ಅವರು ತಮ್ಮ ಮನೆ ತಲಪಲು ಕನಿಷ್ಠ 3 ದಿನ ಬೇಕಾಗಬಹುದು ಎಂದು ಕೂಡ ಹೇಳಿದ್ದರು. ಯಾಕಂದ್ರೆ ದರ್ಶನ್ ತೂಗುದೀಪ್ ಅವರ ಮನೆ ಇರುವುದು ರಾಜರಾಜೇಶ್ವರಿ ನಗರದಲ್ಲಿ. ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಇರುವುದು ಹೊಸೂರು ರಸ್ತೆಯ ಸಮೀಪ. ಹೀಗಾಗಿ ಹತ್ತಾರು ಕಿಲೋ ಮೀಟರ್ ಉದ್ದಕ್ಕೂ ಮೆರವಣಿಗೆ ಮಾಡಲು ಇದೀಗ ದರ್ಶನ್ ಅವರ ಅಭಿಮಾನಿಗಳು ಪ್ಲಾನ್ ಮಾಡಿದ್ದಾರೆ. ಆದರೆ ಮೆರವಣಿಗೆ ಮಾಡಲು ಪೊಲೀಸರು ಪರ್ಮಿಷನ್ ಕೊಡ್ತಾರಾ? ಎಂಬ ಕುತೂಹಲ ಕೂಡ ಕಾಡುತ್ತಿದೆ.