ಬೆಳಗಾವಿ : ಕಳಸಾ ಬಂಡೂರಿ ಯೋಜನೆಯ ಅನುಷ್ಠಾನದ ವಿಷಯದಲ್ಲಿ ಗೋವಾ ಸರ್ಕಾರ ತಡೆಯೊಡ್ಡುತ್ತಿದೆ ಎಂದು ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಆರೋಪಿಸಿದ್ದಾರೆ.
ಅವರು ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಜುಲೈ 7ರಂದು ಮಹದಾಯಿ ಜಲಾನಯನ ಪ್ರದೇಶಕ್ಕೆ ಮಹದಾಯಿ 'PRAVAH' ಪ್ರಾಧಿಕಾರ ಸದಸ್ಯರ ಭೇಟಿ ಮಾಡಲಾಗುವದೆಂದು .
ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಗೋವಾ ಸಿಎಂ ಪ್ರಮೋದ್ ಸಾವಂತ. ರಾಜ್ಯದ ಮಲಪ್ರಭೆಯ ಉಗಮಸ್ಥಾನ ಕಣಕುಂಬಿ ಗ್ರಾಮಕ್ಕೆ ಕೂಡಾ ಭೇಟಿ ನೀಡಲಿದ್ದಾರೆ.
ಕರ್ನಾಟಕ ಸರ್ಕಾರ ನಡೆಸುತ್ತಿರುವ ಕಾಮಗಾರಿಯನ್ನು ಮಹದಾಯಿ ಪ್ರವಾಹ ಪ್ರಾಧಿಕಾರ ಬಯಲಿಗೆಳೆಯುತ್ತೆ ಎಂದು ಗೋವಾ ಸಿಎಂ ಟ್ವೀಟ್ ಮಾಡಿರುವದು ಇದು ಗೋವಾ ಸರ್ಕಾರದ ಕುತಂತ್ರದ ಭಾಗ ಎಂದರು ಕಳಸಾ ಬಂಡೂರಿ, ಮಹದಾಯಿ ವಿಚಾರದಲ್ಲಿ ಕರ್ನಾಟಕ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಲಾಗಿದೆ ಎಂದರು.