ವಶಕ್ಕೆ ಪಡೆದ ಕಿತ್ತೂರು ಪೊಲೀಸ್‌ರು
ಚನ್ನಮ್ಮನ ಕಿತ್ತೂರು : ಚನ್ನಮ್ಮನ ಕಿತ್ತೂರು, ಸವದತ್ತಿ, ಖಾನಾಪುರ,
ಬೈಲಹೊಂಗಲ ಸೇರಿ ವಿವಿಧ ಪೊಲೀಸ್ ಠಾಣೆಯ
ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ ಆರೋಪಿಗಳನ್ನು ಚನ್ನಮ್ಮನ
ಕಿತ್ತೂರು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಚನ್ನಮ್ಮನ ಕಿತ್ತೂರು ತಾಲೂಕಿನ ದೇಮಟ್ಟಿ ಗ್ರಾಮದ ಪುಂಡಲೀಕ ಸಿದ್ದಪ್ಪ ಕುರಿ (37) ಹಾಗೂ ಸುಲೇಮಾನ ರೆಹಮಾನಸಾಬ ಹವಾಲ್ದಾರ್(30) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ವಿವಿಧ ಕಂಪನಿಯ 11 ಬೈಕ್‌ಗಳನ್ನೂ ಪತ್ತೆ ಹಚ್ಚಿ ಸುಮಾರು 5 ಲಕ್ಷ ಮೌಲ್ಯದ ಬೈಕಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೈಲಹೊಂಗಲ ಡಿವೈಎಸ್‌ಪಿ ರವಿ ನಾಯಕ, ಚನ್ನಮ್ಮನ ಕಿತ್ತೂರು ಹಾಗೂ ನಂದಗಡ ಪ್ರಭಾರಿ ಸಿಪಿಐ ಎಸ್. ಸಿ ಪಾಟೀಲ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಪ್ರವೀಣ ಗಂಗೋಳ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಆರೋಪಿಗಳನ್ನು ಅಂದರ ಮಾಡಿದ್ದಾರೆ.
ಬೆಳಗಾವಿ ಎಸ್ ಪಿ ಡಾ ಭೀಮಾಶಂಕರ ಗುಳೇದ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶೃತಿ, ಆರ್.ಬಿ ಬಸರಗಿ ಅವರು ಚನ್ನಮ್ಮನ ಕಿತ್ತೂರು ಪೊಲೀಸರ ಕಾರ್ಯಾಚರಣೆ ಮೆಚ್ಚುಗೆಯನ್ನು
ವ್ಯಕ್ತಪಡಿಸಿದ್ದಾರೆ.