ವೈದ್ಯ ಮುಟ್ಟಿದರೆ ಸಾಕು ಅನಾರೋಗ್ಯ ಮಾಯವಾಗುತ್ತದೆ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಹಾವೇರಿ:‌ ಕಾಯಿಲೆ ವಾಸಿ ಮಾಡಿಕೊಳ್ಳಲು ಜನರು ವಿವಿಧ ರೀತಿಯ ವೈದ್ಯ ಪದ್ಧತಿ ಮೊರೆ ಹೋಗುತ್ತಾರೆ. ಆದರೆ ಇಲ್ಲೊಂದು ಕಡೆ, ವೈದ್ಯ ಮುಟ್ಟಿದರೆ ಸಾಕು ಅನಾರೋಗ್ಯ ಮಾಯವಾಯಿತು (Viral Video) ಎಂದು ಜನ ಹೇಳುತ್ತಿದ್ದಾರೆ. ಕಲಿಯುಗದಲ್ಲೂ ಮೈ ಮುಟ್ಟಿ ಅನಾರೋಗ್ಯ ದೂರ ಮಾಡುವ ಈ ಚಡ್ಡಿ ಸ್ವಾಮಿ ಪವಾಡ (Haveri Doctor) ಕಂಡು ಜನರು ಅಚ್ಚರಿಗೊಂಡಿದ್ದಾರೆ.
ಹೌದು, ಹಾವೇರಿ ಜಿಲ್ಲೆಗೆ ಆರೋಗ್ಯ ಭಗವಂತ ಬಂದಿದ್ದು, ಈತ ಮುಟ್ಟಿದ್ರೆ ಸಾಕು ಅನಾರೋಗ್ಯ ಮಾಯವಾಗುತ್ತೆ ಎಂದು ಜನ ನಂಬಿದ್ದಾರೆ. ಹೀಗಾಗಿ ಜನ ಮರಳೊ ಜಾತ್ರೆ ಮರಳೊ ಎಂಬಂತೆ ವೈದ್ಯನ ಕೈಯಿಂದ ಹೊಡೆಸಿಕೊಳ್ಳಲು ಜನ ಮುಗಿಬೀಳುತ್ತಿದ್ದಾರೆ.

1, 2, 3, ಎಂದು ಹೊಡೆದು ಕಾಯಿಲೆ ವಾಸಿ ಮಾಡುವ ಈ ವೈದ್ಯನಿಗೆ ಹಾವೇರಿ ಜಿಲ್ಲೆಯ ಗುತ್ತಲ ಸುತ್ತಮುತ್ತ ಬಹು ಬೇಡಿಕೆ ಉಂಟಾಗಿದೆ. ಟಾನಿಕ್ ಇಲ್ಲ, ಮಾತ್ರೆ ಇಲ್ಲ, ಜ್ಯೂಸ್ ಕುಡಿಸಿ ಈತ ಅನಾರೋಗ್ಯ ದೂರ ಮಾಡುತ್ತಾರೆ. ಮೈಗೆ ಹೊಡೆದ ನಂತರ ಅನಾರೋಗ್ಯ ಸರಿಯಾಯ್ತು ಎಂದು ಜನ ಹೇಳುತ್ತಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ಬೀದಿಯಲ್ಲಿ ವೈದ್ಯ ಬರುತ್ತಿದ್ದಂತೆ ಗುಂಪು ಗುಂಪಾಗಿ ಚಡ್ಡಿ ಸ್ವಾಮಿ ಬಳಿ ಜನ ಬರುತ್ತಿದ್ದಾರೆ. ಕೈ, ಕಾಲು, ತಲೆ ಹೀಗೆ ನೋವು ಇರುವ ಕಡೆ ವೈದ್ಯ ಮುಟ್ಟಿದರೆ ಸಮಸ್ಯೆ ಸರಿಯಾಯ್ತು ಎಂದು ಜನ ಹೇಳುತ್ತಿರುವುದು ಕಂಡುಬಂದಿದೆ.

Post a Comment

0Comments

Post a Comment (0)