ಚನ್ನಮ್ಮನ ಕಿತ್ತೂರು: ಚನ್ನಮ್ಮನ ಕಿತ್ತೂರಿನ ನಿಚ್ಚನಕಿಯ
ಶ್ರೀ ಮಡಿವಾಳೇಶ್ವರ ಮಠದ ಶ್ರೀಗಳಿಗೆ ಕಳೆದ ವರ್ಷ ಕಿತ್ತೂರಿನಲ್ಲಿ ನಡೆದ ಧಾರವಾಡ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ವಿನಯ್ ಕುಲಕರ್ಣಿ ಅವರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶ್ರೀಗಳಿಗೆ ವಾಹನದ ಸೌಕರ್ಯವನ್ನು ನೀಡುವುದಾಗಿ ಹೇಳಿದ್ದರು ಅದರಂತೆ ಕೊಟ್ಟ ಮಾತಿನಂತೆ ಶಾಸಕ ಬಾಬಾಸಾಹೇಬ ಪಾಟೀಲ ಅವರು ಪೂಜ್ಯರಿಗೆ ವಾಹನದ ಸೌಕರ್ಯವನ್ನು ಕಲ್ಪಿಸಿ ಪೂಜ್ಯರ ಆಶೀರ್ವಾದ ಪಡೆದುಕೊಂಡರು.