ಚಿತ್ರನಟ ದರ್ಶನ್ ಪ್ರಕರಣ:ರೇಣುಕಾ ಸ್ವಾಮಿ ಜೀವ ತೆಗೆದ ಆ ಮೆಸೇಜ್ ಏನು?

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಜೂನ್. 12: ಇಡೀ ಚಿತ್ರರಂಗವನ್ನೇ ಆಘಾತಕ್ಕೆ ತಳ್ಳಿರುವ ಘಟನೆ ನಟ ದರ್ಶನ್ ಬಂಧನ. ಅದು ಕೂಡ ಕೊಲೆ ಪ್ರಕರಣದಲ್ಲಿ. ತನ್ನ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್, ಕಾಮೆಂಟ್ ಮಾಡುತ್ತಿದ್ದ ಎಂದು 33 ವರ್ಷದ ಚಿತ್ರದುರ್ಗ ನಿವಾಸಿ ಎಸ್ ರೇಣುಕಾಸ್ವಾಮಿ ಎಂಬುವರನ್ನು ಹತ್ಯೆ ಮಾಡಿದ ಆರೋಪ ದರ್ಶನ್ ಮೇಲಿದೆ.
ಪ್ರಕರಣದಲ್ಲಿ ನಟ, ಅವರ ಗೆಳತಿ ಪವಿತ್ರಾ ಗೌಡ ಸೇರಿ 11 ಮಂದಿಯನ್ನು ಮಂಗಳವಾರ ಬಂಧಿಸಲಾಗಿದೆ.

ಚಿತ್ರದುರ್ಗದಿಂದ 200 ಕಿಮೀ ದೂರದಲ್ಲಿರುವ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಚರಂಡಿಯಲ್ಲಿ ಭಾನುವಾರ ಬೆಳಗ್ಗೆ ರೇಣುಕಾ ಸ್ವಾಮಿಯ ಮೃತದೇಹ ಪತ್ತೆಯಾಗಿದೆ. ಫಾರ್ಮಸಿ ಅಂಗಡಿಯ ಉದ್ಯೋಗಿ ಮತ್ತು ದರ್ಶನ್ ಅವರ ಅಭಿಮಾನಿಯಾಗಿದ್ದ ರೇಣುಕಾಸ್ವಾಮಿ ಅವರನ್ನು ಚಿತ್ರಹಿಂಸೆ ನೀಡಿ ಸಾಯಿಸಿದ್ದಾರೆ ಎಂದು ತನಿಖೆಗಳು ತಿಳಿಸಿವೆ. ಆದರೆ, ಇಷ್ಟು ಚಿತ್ರಹಿಂಸೆ ನೀಡಲು ಕಾರಣವಾಗಿದ್ದು ಆ ಒಂದು ಮೆಸೆಜ್.

ರೇಣುಕಾ ಸ್ವಾಮಿ ಜೀವ ತೆಗೆದ ಆ ಮೆಸೇಜ್

ಹೌದು.. ರೇಣುಕಾ ಸ್ವಾಮಿಯ ಮೃತದೇಹವನ್ನು ನೋಡಿದ ಎಂಥವರಿಗೂ ಅವರಿಗೆ ನೀಡಲಾಗಿರುವ ಚಿತ್ರಹಿಂಸೆ ಕಣ್ಣಿಗೆ ರಾಚುತ್ತದೆ. ಇಷ್ಟು ಚಿತ್ರಹಿಂಸೆ ನೀಡಿ ಸಾಯಿಸಲು ಕಾರಣ ಆತ ನಟಿ ಪವಿತ್ರಾ ಗೌಡಗೆ ಕಳುಹಿಸಿದ್ದ ಮೆಸೇಜ್ ಎನ್ನಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಪವಿತ್ರಾ ಗೌಡ (37) ಅವರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ರೇಣುಕಾ ಸ್ವಾಮಿ ಅವರ ಕಾಮೆಂಟ್ ದರ್ಶನ್ ಅವರನ್ನು ಕೆರಳಿಸಿದೆ ಎಂದು ಹೇಳಲಾಗುತ್ತದೆ.
ಇನ್ನೊಂದು ಮೂಲದ ಪ್ರಕಾರ ನಟ ದರ್ಶನ್ ಅವರನ್ನು ಕೆರಳಿಸಿರುವುದು ಮೃತ ರೇಣುಕಾಸ್ವಾಮಿ ಕಳಿಸಿರುವ ಫೋಟೋಗಳು ಮತ್ತು ಅದರ ಮೆಸೇಜ್‌ಗಳು. ಹೌದು, ಕೊಲೆಯಾದ ರೇಣುಕಾ ಸ್ವಾಮಿ ನಟ ದರ್ಶನ್ ಅಭಿಮಾನಿ ಎನ್ನಲಾಗಿದೆ. ತನ್ನ ನಟನ ದಾಂಪತ್ಯ ಜೀವನದಲ್ಲಿ ಕಾಲಿಟ್ಟು ಸಂಸಾರ ಹಾಳು ಮಾಡುತ್ತಿದ್ದಾರೆ ಎಂದು ಪವಿತ್ರಾ ಗೌಡ ಮೇಲೆ ದ್ವೇಷ ಸಾಧಿಸುತ್ತಿದ್ದರು.

ಹೀಗಾಗಿ ಕಳೆದ ಜನವರಿಯಲ್ಲಿ ನಟಿ ಪವಿತ್ರಾ ಗೌಡ ಪೋಟೋ, ವಿಡಿಯೋಗಳನ್ನು ಹಂಚಿಕೊಳ್ಳಲು ಆರಂಭಿಸಿದ ಮೇಲೆ ಇವರು ಮೆಸೆಜ್ ಮಾಡಲು ಶುರು ಮಾಡಿದ್ದರು. ಫೆಬ್ರವರಿಯಿಂದ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡೋಕೆ ಆರಂಭಿಸಿದ್ದರು. ಅಕೌಂಟ್ ಬ್ಲಾಕ್ ಮಾಡಿದರೂ ಮತ್ತೆ ಹೊಸ ಅಕೌಂಟ್‌ಗಳಿಂದ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದರು
ಇದು ಮಿತಿ ಮೀರಿ ಕಳೆದ ಶುಕ್ರವಾರ ರೇಣುಕಾ ಸ್ವಾಮಿ ತಮ್ಮ ಮರ್ಮಾಂಗದ ಫೋಟೋ ಕಳುಹಿಸಿ 'ದರ್ಶನ್ಗಿಂತ ನಾನೇನು ಕಡಿಮೆ ಬಾ' ಎಂದು ಮೆಸೇಜ್ ಮಾಡಿದ್ದಾರೆ. ಇದು ಪವಿತ್ರಾ ಗೌಡ ಅವರಿಗೆ ಸಾಕು ಎನ್ನುವಂತೆ ಮಾಡಿದೆ. ಈ ವಿಷಯ ಹೇ‌ಓ ನಟ ದರ್ಶನ್‌ಗೆ ತಿಳಿದಿದೆ. ಬಳಿಕ ದರ್ಶನ್ ಸಹಾಯಕರು ರೇಣುಕಾಸ್ವಾಮಿಯನ್ನುಅಪಹರಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ಇನ್ನು, ಆತನನ್ನು ಹೊಡೆದು ಸಾಯಿಸುವಾಗ ನಟ ಮತ್ತು ಪವಿತ್ರಾ ಇದ್ದರು ಎಂದು ಹೇಳಲಾಗಿದೆ.

ಇನ್ನು, ನಟ ದರ್ಶನ್ 2011ರಲ್ಲಿ ಪತ್ನಿಯ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದರು. ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ರಾಜಿ ಮಾಡಿಕೊಂಡರು. ಬಳಿಕ ಕನ್ನಡದ ಕೆಲವು ಚಿತ್ರಗಳಲ್ಲಿ ನಟಿಸಿ ಈಗ ಬೂಟಿಕ್ ನಡೆಸುತ್ತಿರುವ ಪವಿತ್ರಾ ಗೌಡ ತಾನು ಮತ್ತು ದರ್ಶನ್ 10 ವರ್ಷದಿಂದ ಒಟ್ಟಿಗೆ ಇದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದು ವಿಜಯಲಕ್ಷ್ಮಿ ಮತ್ತು ಪವಿತ್ರಾ ಗೌಡ ನಡುವೆ ಹಲವು ಕಿತ್ತಾಟಗಳಿಗೆ ಕಾರಣವಾಗಿದೆ. ಹೆಂಡತಿ ಜೊತೆಗೆ ಸೋಶಿಯಲ್ ಮಿಡಿಯಾದಲ್ಲಿ ಕಿತ್ತಾಡುತ್ತಿದ್ದ ಪವಿತ್ರಾ ಗೌಡ ಕೊನೆಗೆ ದರ್ಶನ್ ಅವರನ್ನು ಜೈಲಿಗೆ ಕಳಿಸಿದ್ದಾರೆ.

Post a Comment

0Comments

Post a Comment (0)