ರೈತರಿಗೆ ನೀಡುವ ಸಬ್ಸಿಡಿ ಹಾಗೂ ಅನುದಾನ ಹೆಚ್ಚಿಸಲಾಗುತ್ತಿದೆ, ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ...!

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೆಳಗಾವಿ:ರೈತರಿಗೆ ನೀಡುವ ಸಬ್ಸಿಡಿ ಹಾಗೂ ಅನುದಾನ ಹೆಚ್ಚಿಸಲಾಗುತ್ತಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (N Chaluvaraya swamy) ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೆರಿಗೆ ಹಾಕದಿದ್ದರೆ ಅಭಿವೃದ್ಧಿ ಅಸಾಧ್ಯವಾಗಲಿದೆ.
ಅವೈಜ್ಞಾನಿಕವಾಗಿ ದರ ಏರಿಕೆ ಮಾಡಿದರೆ ತಪ್ಪು ಎನ್ನಬಹುದು. ಆದರೆ, ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನುದಾನ ಕೊಡುತ್ತಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ದರ ಕಡಿಮೆ ಇದೆ. ಒಂದು ಲೀಟರ್ ಗೆ ಹೆಚ್ಚುವರಿ ಹಾಲು ನೀಡುತ್ತಿರುವುದರಿಂದಾಗಿ 2 ರೂ. ಹೆಚ್ಚಳ ಮಾಡಲಾಗಿದೆ ಎಂದು ಹೇಳಿದ್ದಾರೆ.
ದರ ಹೆಚ್ಚಳ ಮಾಡಿದರೂ ಹಾಲಿನ ಪ್ರಮಾಣ ಜಾಸ್ತಿ ಆಗಿದೆ. ರೈತರಿಗೆ ಇದರ ಲಾಭ ಆಗಲಿದೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಪೆಟ್ರೋಲ್, ಹಾಲು ದರ ಎಷ್ಟಿದೆ? ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಹೈಕಮಾಂಡ್ ಕಾಣಿಕೆ ನೀಡಿದೆಯಾ ಎಂದು ಪ್ರಶ್ನಿಸಿದ ಅವರು, ಕಾಣಿಕೆ ನೀಡಿದವರಿಗೆ ಈ ರೀತಿ ಆರೋಪ ಮಾಡುತ್ತಾರೆ ಎಂದು ಹೇಳಿದ್ದಾರೆ.

Post a Comment

0Comments

Post a Comment (0)