ಮಹಾಲಕ್ಷ್ಮೀ ಮಹಿಳಾ ಮಂಡಳದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಹಸಿರೇ ಉಸಿರು ಉಳಿದರೆ ಕಾಡು ಅಳಿಯದು ನಾಡು ಎಂಬ ಮಾತು ಅಕ್ಷರಶಃ ಸತ್ಯ ವನದಿಂದಲೇ ಮಳೆ, ಮಳೆಯಿಂದಲೇ ಬೆಳೆ ಬಳೆದ ದಿವಸ ಧಾನ್ಯದಿಂದ ನಮ್ಮೆಲ್ಲರ ಬದುಕು ಸಾಗುತ್ತದೆ. ಆದ್ದರಿಂದ ಕಾಡನ್ನು ನಾವು ಬೆಳೆಸಿ ನಾಡನ್ನು ಉಳಿಸಬೇಕು. ಪ್ರತಿ ವರ್ಷದಂತೆ ಈ ಬಾರಿಯು ನಮ್ಮ ಮಹಾಂತೇಶ ನಗರದ ಮಹಾಲಕ್ಷ್ಮೀ ಮಹಿಳಾ ಮಂಡಳದಿ ವತಿಯಿಂದ ಅತೀ ವಿಭಿನ್ನವಾದ ರೀತಿಯಲ್ಲಿ ವಿಶ್ವ ಪರಿಸರ ದಿವನ್ನು ಆಚರಿಸಲಾಯಿತು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀಯುತ ಎಸ್.ಎಸ್. ಪಾಟೀಲ ರವರ ಅಧ್ಯಕ್ಷತೆಯಲ್ಲಿ ಮಹಾಂತೇಶ ನಗರದ ಶಿವಾಲಯ ಗುಡಿಯಲ್ಲಿ ಗಿಡಗಳನ್ನು ಹಚ್ಚುವುದರ ಮೂಲಕ ಈ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ವಿಜೇತರು Best Garden
1. ವಿಜಯಲಕ್ಷ್ಮೀ ಅಚಲಕರ
2. ಮಹಾದೇವಿ ವಿಭೂತಿ
3. ಪ್ರಭಾವತಿ ಪಾಟೀಲ
4. ಸುಮಾ ತೂಪದಿ
ನಮ್ಮ ಮಹಾಲಕ್ಷ್ಮೀ ಮಹಿಳಾ ಮಂಡಳದ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಕಲೂತಿ ಅವರು ವಿಶ್ವ ಪರಿಸರ ದಿನದ ಕುರಿತು ಮಾತನಾಡಿದರು, ಗೌರವಾನ್ವಿತ ಸದಸ್ಯರಾದ ಲತಾ ಕರಡಿಗುದ್ದಿ, ಸುನೀತಾ ಪಾಟೀಲ, ಶೋಭಾ ಪಾಟೀಲ, ವಿದ್ಯಾಗೌಡರ, ಶಾರದಾ ಪಾಟೀಲ ಹಾಗೂ ಎಲ್ಲ ಕಮೀಟಿ ನಿರ್ದೇಶಕರು ಹಾಗೂ ಸದಸ್ಯರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಮ್ಮ ಸದಸ್ಯರ ಮನೆ ಮನೆಗೆ ತೆರಳಿ, ಅತೀ ಅತ್ಯುತ್ತದ ಹೂ ತೋಟವನ್ನು ವೀಕ್ಷಿಸಲಾಯಿತು, ಹಾಗೂ ತೀರ್ಪುಗಾರರಾದ ಶ್ರೀಯುತ ಎಸ್.ಎಸ್. ಪಾಟೀಲರು ವಿಜೇತರಿಗೆ ಬಹುಮಾನ ವಿತರಿಸಿದರು ಹಾಗೂ ಎಲ್ಲ ಮಹಾಲಕ್ಷ್ಮೀ ಮಹಿಳಾ ಮಂಡಳದ ಸದಸ್ಯರಿಗೆ ಸಸಿಗಳನ್ನು ಶ್ರೀಯುತ ಎಸ್.ಎಸ್.ಪಾಟೀಲರು ವಿತರಿಸಿದರು.
ಕಮೀಟಿ Members
1. ರಾಜಶ್ರೀ ಮಗದುಮ
2. ರೇಣುಕಾ ಯಡಾಲ
3. ಲಕ್ಷ್ಮೀ ಪಾಟೂಲ
4. ಶಿವಲೀಲಾ ಕೋಕಣಿ
5. ಶ್ರೀದೇವಿ ಹಾರದಗಟ್ಟಿ
6. ನಂದಾ ಬಗ್ಲಿ
7. ಸ್ನೇಹಾ ಮುಧೋಳ ಉಪಸ್ಥಿತರಿದ್ದರು.