ಬೈಲಹೊಂಗಲ ತಾಲೂಕಿನ ನಂಜಮ್ಮ ನಗರದ ಶ್ರೀ ನಂಜಮ್ಮ ದೇವಿ ಜಾತ್ರಾ ಮಹೋತ್ಸವ ದಿನಾಂಕ 24 25 26 ಮೂರು ದಿನಗಳ ಕಾಲ ವಿಜೃಂಭಣೆಯಿಂದ ಸಹಸ್ರಾರು ಭಕ್ತರೊಂದದಿಂದ ನೆರವೇರಿತು.
ನಂಜಮ್ಮ ದೇವಿಯ ಪಲ್ಲಕ್ಕಿ ಉತ್ಸವ ಮೊದಲನೇ ದಿನ ಮಲಪ್ರಭೆಯ ನದಿಯ ದಡಕ್ಕೆ ಹೋಗಿ ಪೂಜೆ ಸಲ್ಲಿಸಿ ಅಲ್ಲಿಂದ ಬೈಲಹೊಂಗಲದ ನಗರದ ಪ್ರಮುಖ ಬೀದಿಗಳ ಮುಖಾಂತರ ಭವ್ಯ ಮೆರವಣಿಗೆಯೊಂದಿಗೆ ಪಲ್ಲಕ್ಕಿ ಉತ್ಸವವನ್ನು ನೆರವೇರಿಸಿದರು ತದನಂತರ ಎರಡನೆಯ ದಿನದಂದು ಸಾಯಂಕಾಲ ಶ್ರೀ ದೇವಿಯ ಪಲ್ಲಕ್ಕಿಯನ್ನು ಕೆಂಡ ಸೇವೆ ನೆರವೇರಿಸಿದರು, ಮೂರನೆಯ ದಿನ ಎಲ್ಲ ಮುತ್ತೈದರೆಲ್ಲರೂ ಕೂಡಿ ಶ್ರೀ ನಂದೆಮ್ಮ ದೇವಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ನೆರವೇರಿಸಿದರು, ಹಾಗೂ ಅನ್ನಪ್ರಸಾದ ಸೇವೆಯನ್ನು ಇಟ್ಟುಕೊಂಡಿದ್ದರು. ಅಮ್ಮನ ಭಕ್ತಾದಿಗಳು ಹಾಗೂ ನಗರದ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.