ರಾಜ್ಯ ಸರಕಾರದ ಗ್ಯಾರಂಟಿಗಳಿಗೆ ಹಣಹೊಂದಿಸಲು ಬೆಲೆ ಏರಿಕೆಯ ಹೊರೆಯನ್ನು ರಾಜ್ಯದ ಜನರ ಮೆಲೆ ಹಾಕಿ ಇಡಿ ಕರ್ನಾಟಕ ಜನರನ್ನು ಸಂಕಷ್ಟಕ್ಕೆ ಸಿಲುಕಿಸುವ ಸರ್ವಾಧಿಕಾರಿ ನಿರ್ಧಾರವಾಗಿದೆ. ಈ ಸರ್ಕಾರದಲ್ಲಿ ಕುಡಿಯುವ ನೀರಿಗೆ ಹಾಹಾಕರ, ರೈತರ ಬದುಕು ಹೇಳತೀರದಾಗಿದೆ.ಈ ಸರ್ಕಾರ ಬಂದಮೇಲೆ ಒಂದೇ ಒಂದು ಅಭಿವೃದ್ಧಿ ಕೆಲಸಗಳು ಆಗದೆ ನಿರುದ್ಯೋಗ ತಾಂಡವ ಆಡುತ್ತಿದೆ. ಇದರ ಬೆನ್ನಲ್ಲೆ ಇದೀಗ ಡೀ ಸೇಲ್ ಪೆಟ್ರೋಲ ದರವನ್ನು ಹೆಚ್ಚಿಸಿ ಕಳೆದ ಲೋಕಸಭಾ ಚುನಾವಣೇಯ ಫಲತಾಂಶದ ಸೇಡನ್ನು ಜನತೆಯ ಮೆಲೆ ತೀರಿಸಿಕೊಳ್ಳಲುಹೋರಟಿದೆ. ಡೀಸೆಲ್ ದರ ಏರಿಕೆಯ ಹಿನ್ನಲೆಯಲ್ಲಿ ಕೇವಲ ಸವಾರರಿಗೆ ಮಾತ್ರ ಹೊರೆಯಾಗುವುದಿಲ್ಲಾ ಇದು ಸರಕು ಸಾಗಾಣಿಕೆಯ ಮೇಲೆ ಪರಿಣಾಮ ಬೀಳಲಿದೆ. ಪ್ರಯಾಣದ ದರವನ್ನು ಹೆಚ್ಚಸಲಿದೆ ತನ್ಮೂಲಕ ತರಕಾರಿಗಳ ಬೆಲೆ, ದಿನನಿತ್ಯ ಗೃಹಬಳಕೆಯ ವಸ್ತುಗಳ ಬೆಲೆ, ದವಸ ದಾನ್ಯಗಳ ಬೆಲೆ, ಕಟ್ಟಡ ಸಾಮಗ್ರಿಗಳ ಬೆಲೆ ಕೂಡ ಹೆಚ್ಚಾಗಿವೆ. ಈ ರಾಜ್ಯದ ಜನತೆಗೆ ನೆಮ್ಮದಿಯ ಬದುಕು ನೀಡಲು ಸಾಧ್ಯವಾಗಿದ್ದರೆ ಈ ಸರಕಾರ ಅಧಿಕಾರ ಬಿಟ್ಟು ತೊಲಗಲಿ, ಅಗತ್ಯ ವಸ್ತುಗಳ ಬೆಲೆಯನ್ನು ಏರಿಸುವ ಮೂಲಕ ನಾವು ಸರ್ಕಾರವನ್ನು ನಡೆಸುತ್ತೇವೆ ಎಂದು ಹೊರಟಿರುವ ಕಾಂಗ್ರೆಸಿಗರು ಜನರ ಬದುಕಿನೊಂದಿಗೆ ಚೆಲ್ಲಾಟವಾಡಲು ಹೊರಟಿದ್ದಾರೆ.ಇದನ್ನು ನೋಡಿಕೊಂಡು ಭಾರತೀಯ ಜನತಾ ಪಾರ್ಟೀ ಕೈಕಟ್ಟಿ ಕೂರಲು ಸಾಧ್ಯವಿಲ್ಲಾ. ನಿಮ್ಮ ರೈತ ವಿರೋಧಿ, ಜನ ವಿರೋಧಿ, ಬಡವರ ವಿರೋಧಿ, ದಲಿತರ ವಿರೋಧಿ, ಹಿಂದುಳಿದ ವರ್ಗಗಳ ವಿರೋಧಿ ಹಾಗೂ ಮಧ್ಯಮ ವರ್ಗಗಳ ವಿರೋಧಿ ಆಡಳಿತ ಕೊನೆಯಾಗುವವರೆಗೂ ನಾವು ಹೋರಾಟವನ್ನು ನಿಲ್ಲಿಸುವುದಿಲ್ಲಾ. ಪೆಟ್ರೋಲ್-ಡಿಸೈಲ್ ದರ ಆರಂಭವಷ್ಟೇ ಇನ್ನು ರಾಜ್ಯದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆಗಳೂ ಗಗನಕ್ಕೇರಲಿವೆ, ಜನಸಾಮಾನ್ಯರು , ಕಾರ್ಮಿಕರು, ಬಡವರು ಹಾಗೂ ಮಧ್ಯಮ ವರ್ಗದವರೂ ನಿಮ್ಮ ಬೆಲೆ ಏರಿಕೆಯ ಚಕ್ರವ್ಯೂಹÀದಲ್ಲಿ ಸಿಲುಕಿ ನಲಗುವ ಪರಿಸ್ಥಿತಿ ಮಾಡಿದ್ದರಿ, ಬೆಲೆ ಏರಿಕೆಯ ಬಿಸಿ ಪಂಪ್ ಸೆಟ್, ಟ್ರಾಕ್ಟರ್ ಸೇರಿದಂತೆ ಇರತ ಕೃಷಿ ಉಪರಕಣಗಳು ಬಳಸುವ ರೈತರ ಕೈ ಸುಡಲಿದೆ.ವಾಹನಗಳನ್ನು ಆಶ್ರಯಿಸಿ ಶಾಲಾ ಕಾಲೇಜುಗಳಿಗೆ ತೆಳುವ ವಿದ್ಯಾರ್ಥಿಗಳಿಗೂ ಬಿಸಿ ತಟ್ಟಲಿದೆ ಒಟ್ಟಾರೆಯಾಗಿ ಎಲ್ಲಾ ಕ್ಷೇತ್ರಗಳಿಗೂ ಬೆಲೆ ಏರಿಕೆಯ ಬಿಸಿಮುಟ್ಟಿಸುವ ನಿರ್ಧಾರವನ್ನು ಈ ಕೂಡಲೇ ಕೈ ಬೀಡಬೇಕೆಂದು ಒತ್ತಾಯಿಸುತಿದ್ದೇವೆ. ಕರ್ನಾಟಕ ರಾಜ್ಯದಲ್ಲಿ ಅರಾಜಕತೆ ಸೃಷ್ಠಿ ಮಾಡಿಯೇ ನೀವೂ ಅಧಿಕಾರದಿಂದ ಕೆಳಗಿಳಿರುವ ಶಫಥ ಮಾಡಿದಂತೆ ಕಾಣುತ್ತಿದೆ. ಈ ಕೂಡಲೇ ಪೆಟ್ರೋಲ್- ಡಿಸೈಲ್‌ಗಳ ಮೆಲೆ ಹೆಚ್ಚಿಸಿರುವ ದರವನ್ನು ವಾಪಾಸ್ ಪಡೆಯದಿದ್ದರೆ ಭಾರತೀಯ ಜನತಾ ಪಾರ್ಟೀ ದರ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಕಾಂಗ್ರೇಸ್ಸ್ ಸರಕಾರದ ದುರಾಡಳಿತ ವಿರುದ್ಧ ಉಗ್ರ ಹೋರಾಟವನ್ನು ಮಾಡಲಾಗುವದು. ಎಂದು ಈ ಮೂಲಕ ಸರಕಾರಕ್ಕೆ ಮನವಿ ಮೂಲಕ ಎಚ್ಚರಿಸುತ್ತಿದ್ದೇವೆ ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಗುರುಪಾದ ಕಳ್ಳಿ, ಜಿಲ್ಲಾ ಉಪಾಧ್ಯಕ್ಷ ಹಾಗೂ ಪುರಸಭೆ ಸದಸ್ಯರಾದ ಗುರಪ್ಪ ಮೆಟಗುಡ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಜಗದೀಶ್ ಬೂದಿಹಾಳ, ಜಿಲ್ಲಾ ಮಾಧ್ಯಮ ವಕ್ತಾರ ಸಚಿನ ಕಡಿ, ಜಿಲ್ಲಾ ಎಸ್,ಸಿ ಮೋರ್ಚಾ ಉಪಾಧ್ಯಕ್ಷ ಶ್ರೀನಿವಾಸ್ ಬರಮಣ್ಣವರ್, ಜಿಲ್ಲಾ ಎಸ್ ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜು ಮರಶೆಟ್ಟಿ, ಜಿಲ್ಲಾ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಹಡಪದ, ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪುರಸಭೆ ಸದಸ್ಯ ಸಾಗರ ಬಾವಿಮನಿ,ಮಂಡಲ ಉಪಾಧ್ಯಕ್ಷ ಸುಭಾಷ ತುರುಮರಿ, ಮಂಡಲ ಸಾಮಾಜಿಕ ಜಾಲತಾಣ ಸಂಚಾಲಕ ರಾಘು ಕುಮುಚಿ, ಮಂಡಲ ಯುವ ಮೋರ್ಚಾ ಕಾರ್ಯಕಾರಣಿ ಸದಸ್ಯ ಸದಾಶಿವಗೌಡ ಪಾಟೀಲ, ಚೆನ್ನಪ್ಪ ಹೊಸೂರ, ಮಹಾಂತೇಶ್ ಅಕ್ಕಿ, ರವಿ ಹೊಸೂರ್, ರವಿ ತುರುಮರಿ,ನಿಂಗಪ್ಪ ಚೌಡನ್ನವರ, ಶಿವಯೋಗಿ ಹುಲ್ಯನ್ನವರ, ಸಂಜೀವ್ ಮುರುಗೋಡ, ಸಿಜಿ ವಿಭೂತಿ ಮಠ, ಬಸವರಾಜ್ ನೇಸರಗಿ, ಶಂಕರಗೌಡ ಪಾಟೀಲ, ಭರಮ ಗೌಡರ, ಪ್ರವೀಣ್ ವ್ಯಾಪಾರಿ
ಮಲ್ಲಿಕಾರ್ಜುನ ಮೆಟಗುಡ , ಮಲ್ಲಪ್ಪ ಬೆಳಗಾವಿ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು..