ಕೇಂದ್ರದಲ್ಲಿ ಮೋದಿ 3.0 ಆಡಳಿತ ಆರಂಭ ಸಂಜೆ 7:15 ಕ್ಕೆ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0

ಹೊಸದಿಲ್ಲಿ: ಬಿಜೆಪಿಯ ಅಗ್ರನಾಯಕ ನರೇಂದ್ರ ಮೋದಿಯವರು ರವಿವಾರ ಸಂಜೆ 7.15ಕ್ಕೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಜವಾಹರ ಲಾಲ್‌ ನೆಹರೂ ಅವರ ಬಳಿಕ ಸತತ 3ನೇ ಬಾರಿಗೆ ಪ್ರಧಾನಿಯಾದ ಮೊದಲಿಗ ಎಂಬ ದಾಖಲೆ ನಿರ್ಮಿಸಲು ಮೋದಿ ಸಜ್ಜಾಗಿದ್ದಾರೆ. “ಮೋದಿ 3.0 ಆಡಳಿತ’ ಆರಂಭದ ಕ್ಷಣಕ್ಕೆ ವಿದೇಶಿ ನಾಯಕರ ಸಹಿತ 8 ಸಾವಿರ ವಿಶೇಷ ಆಹ್ವಾನಿತರು ಸಾಕ್ಷಿಯಾಗಲಿದ್ದಾರೆ. ಮೋದಿ ಜತೆಗೆ ಸಚಿವ ಸಂಪುಟದ ಕೆಲವು ಸದಸ್ಯರು ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
2014, 2019ರಲ್ಲಿ ಬಿಜೆಪಿಯ ಭರ್ಜರಿ ಜಯದೊಂದಿಗೆ ಅಧಿಕಾರದ ಗದ್ದುಗೆ ಏರಿದ್ದ ಮೋದಿ ಅವರು ಈ ಬಾರಿ ಎನ್‌ಡಿಎ ಮಿತ್ರ ಪಕ್ಷಗಳ ನೆರವಿನೊಂದಿಗೆ ಆಡ ಳಿತ ನಡೆಸಲಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 240 ಸೀಟು ಗೆದ್ದು ಬಹುಮತದ ಕೊರತೆ ಅನುಭವಿಸಿದ್ದರಿಂದ ಮೋದಿಯವರು ಮೊದಲ ಬಾರಿಗೆ ಸಮ್ಮಿಶ್ರ ಸರಕಾರದ ನೇತೃತ್ವವನ್ನು ವಹಿಸುತ್ತಿದ್ದಾರೆ. ಹಾಗಾಗಿ ಮೋದಿ 3.0 ಆಡಳಿತವು ವಿಶಿಷ್ಟವಾಗಿರಲಿದೆ. ಜೆಡಿಯು, ಟಿಡಿಪಿ ಸಹಿತ ವಿವಿಧ ಪಕ್ಷಗಳ ಬಲದೊಂದಿಗೆ ಎನ್‌ಡಿಎ ಕೂಟದ ಬಲ ಈಗ 300 ದಾಟಿದೆ.
ಎಲ್ಲಿ ಪ್ರಮಾಣ ವಚನ ಸ್ವೀಕಾರ?
ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭವು ಹೊಸದಿಲ್ಲಿಯ ರಾಷ್ಟ್ರಪತಿ ಭವನದ ಮುಂದೆ ನಡೆಯಲಿದ್ದು, ಮೂರು ಸ್ತರಗಳ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಎಸ್‌ಡಬುÉಎಟಿ (ಸ್ವಾಟ್‌) ಮತ್ತು ಎನ್‌ಎಸ್‌ಜಿ ಕಮಾಂಡೋಗಳನ್ನು ನಿಯೋಜಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರವಿವಾರ ಸಂಜೆ 7.15ಕ್ಕೆ ಪ್ರಮಾಣವಚನ ಬೋಧಿಸಲಿದ್ದಾರೆ.
ವಿದೇಶಿ ಗಣ್ಯರ ಉಪಸ್ಥಿತಿ
ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಭಾರತದ ನೆರೆ ರಾಷ್ಟ್ರಗಳಾದ ಶ್ರೀಲಂಕಾ, ಬಾಂಗ್ಲಾದೇಶ, ಭೂತಾನ್‌, ನೇಪಾಲ, ಮಾರಿಷಸ್‌, ಸೀಷೆಲ್ಸ್‌, ಮಾಲ್ದೀವ್ಸ್‌ ಸರಕಾರಗಳ ಮುಖ್ಯಸ್ಥರು ಹಾಜರಾಗಲಿದ್ದಾರೆ.

Post a Comment

0Comments

Post a Comment (0)