ಮಹಿಳೆಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಖಾತೆಗೆ 11 ನೇ ಕಂತಿನ ಗೃಹಲಕ್ಷ್ಮಿ ಹಣ ಬಂದಿದೆ ಎನ್ನಲಾಗಿದೆ. ಈಗಾಗಲೇ 10 ಕಂತುಗಳು ಜಮಾ ಆಗಿದ್ದು, 11ನೇ ಕಂತು ಮತ್ತು ನಂತರದ ಕಂತುಗಳು ಎರಡು ಮೂರು ದಿನಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ರಾಜ್ಯ ಸರ್ಕಾರವು ಅರ್ಹ ಸ್ವೀಕೃತದಾರರ ಖಾತೆಗಳಿಗೆ ನೇರವಾಗಿ 10 ಕಂತುಗಳನ್ನು ಯಶಸ್ವಿಯಾಗಿ ವರ್ಗಾಯಿಸಿದ್ದರೂ, ಅಪೂರ್ಣ KYC ಅಥವಾ ಸಾಕಷ್ಟು ದಾಖಲಾತಿಗಳಂತಹ ಸಮಸ್ಯೆಗಳಿಂದಾಗಿ ಕೆಲವು ಮಹಿಳೆಯರು ಯೋಜನೆಯ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ. ಹೆಚ್ಚುವರಿಯಾಗಿ, ಕೆಲವು ಫಲಾನುಭವಿಗಳು ಗೃಹಲಕ್ಷ್ಮಿ ಅಡಿಯಲ್ಲಿ ತಮ್ಮ ಹಿಂದಿನ ಕಂತುಗಳ ವಿತರಣೆಗಾಗಿ ಇನ್ನೂ ಕಾಯುತ್ತಿದ್ದಾರೆ.
ಗೃಹಲಕ್ಷ್ಮಿ 11 ನೇ ಕಂತಿನ ಹಣ ಸರಕಾರದಿಂದ ಬಿಡುಗಡೆ ಯಾಗಲಿದ್ದು ಮೊದಲು ಉಡುಪಿ ಹಾಗೂ ಚಿಕ್ಕಮಗಳೂರು ಮತ್ತು ಹಾಸನ ಮತ್ತು ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಚಾಮರಾಜನಗರ, ಬೆಂಗಳೂರು ಗ್ರಾಮಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಇಷ್ಟು ಜಿಲ್ಲೆಗಳಿಗೆ ಮೊದಲು ಗೃಹಲಕ್ಷ್ಮಿ ಹಣವು ಬಿಡುಗಡೆಯಾಗಲಿದೆ.