ಸಂಭ್ರಮದ ಜಾತ್ರೆ
ಮಲ್ಲಮ್ಮನ ಬೆಳವಡಿ : ಸ್ಥಳೀಯ ಗ್ರಾಮದಲ್ಲಿ ಐತಿಹಾಸಿಕ ಮಲ್ಲಮ್ಮನ ಬೆಳವಡಿಯ ಜಾಗೃತ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಮಹಾರಥೋತ್ಸವವು ಸಾವಿರಾರು ಭಕ್ತರ ಹರ್ಷೋದ್ವಾರದ ಮದ್ಯೆ ಗುರುವಾರ ಸಡಗರ ಸಂಭ್ರಮದಿಂದ ನಡೆಯಿತು. ಮತ್ತೆ ಮರಳಿ ಸೋಮವಾರ ರಥೋತ್ಸವ ಶ್ರೀ ವೀರಭದ್ರೇಶ್ವರಕ್ಕೆ ದೇವಸ್ಥಾನಕ್ಕೆ ತರುವುದು
ಗ್ರಾಮದ ಸಾಂಪ್ರದಾಯಿಕ ಪಾಳಿ ಪದ್ಧತಿಯಂತೆ ಇಲ್ಲಿನ 4ನೇ ವಾರ್ಡಿನ ಭಕ್ತ ವೃಂದ ಜಾತ್ರೆಯ ಸಕಲ ಉಸ್ತುವಾರಿ ವಹಿಸಿಕೊಂಡಿದರು. ಬೆಳವಡಿ ಸಂಸ್ಥಾನದ ರಾಜ ಗುರುಗಳಾದ ಹೂಲಿಯ ಶ್ರೀ ಶಿವ ಸಿದ್ದರಾಮೇಶ್ವರ ಶ್ರೀಗಳು ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಧಾರಾಕಾರ ಸುರಿದ ಮಳೆ ಹೊತ್ತು ರಥೋತ್ಸವಕ್ಕೆ ಅಡಚನೆ ಉಂಟು ಮಾಡಿದರೂ ಮಳೆ ನಿಂತ ಬಳಿಕ ಸರಾಗವಾಗಿ ಜರುಗಿತು. ವೀರಭದ್ರೇಶ್ವರ ತೆರಿಗೆ ತೆಂಗು. ಬಾಳೆ. ಕಬ್ಬು. ಬಣ್ಣ ಬಣ್ಣದ ಪರಪರಿ ಹಾಗೂ ವಿವಿಧ ಹೂಗಳಿಂದ ಶೃಂಗರಿಸಲಾಗಿತ್ತು. ಈ ನಿಮಿತ್ಯ ಶ್ರೀ ವೀರಭದ್ರೇಶ್ವರ ಕತೃ ಗದ್ದುಗೆಗೆ ಬೆಳಗ್ಗೆ ಮಹಾ ರುದ್ರಭಿಷೇಕ ಪಂಚಾಮೃತಾಭಿಷೇಕ. ಸಹಸ್ರ ಬಿಲ್ವಾರ್ಚನೆ. ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆದವು ತೇರು. ಎಳೆಯುವ ವೇಳೆ ಭಕ್ತರು ರಥಕ್ಕೆ ಬಾಳೆಹಣ್ಣು ಖಾರೀಕು ಎಸೆದು ಭಕ್ತಿ ಭಾವ ಮೆರೆದರು
ಶ್ರೀ ವೀರಭದ್ರೇಶ್ವರ ಮಹಾರಾಜ ಕೀ ಜೈ ಘೋಷಗಳೊಂದಿಗೆ ರಥೋತ್ಸವದಲ್ಲಿ ಸಂಭ್ರಮಿಸಿದರು ಬೆಳವಡಿ ಹಾಗೂ ಸುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ವೀರಭದ್ರೇಶ್ವರ ದೇವಸ್ಥಾನಕ್ಕೆ ಹೂ ಕಾಯಿ ಹಣ್ಣು ನೈವಿದ್ಯ ಅರ್ಪಿಸಿ ದೇವರ ದರ್ಶನ ಪಡೆದರು ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು ಜಾಗೃತ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ 4ನೇ ವಾರ್ಡಿನ ಕಮಿಟಿ ಸದಸ್ಯರು ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು