ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕಾರದಲ್ಲಿ ಡಿಕೆ ಶಿವಕುಮಾರ್ ಕೈವಾಡ: ರಮೇಶ ಜಾರಕಿಹೊಳಿ...!

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೆಳಗಾವಿ : ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಡಿಕೆಶಿ ಶಿವಕುಮಾರ ಕೈವಾಡ ಇದೆ ಎಂಬ ಮೋಬೈಲ್ ಸಂಭಾಷಣೆ ಗಿಂತ ಅಶ್ಲೀಲ ಸಿಡಿ ಪ್ರಕರಣದಲ್ಲಿ ಡಿಕೆಶಿ ಕೈವಾಡ ಇರುವ ಕುರಿತು ನನ್ನ ಬಳಿ ಸಾಕ್ಷಿ ಇವೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.

ಗೋಕಾಕ್ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ರಾಜಕಾರಣ ವಿಷಯದಲ್ಲಿ ಸಿಡಿ ಕಾರ್ಖಾನೆ ಇದೆ ಎಂಬ ತಮ್ಮ ಹಿಂದಿನ ಹೇಳಿಕೆ ಕುರಿತು ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಇವರು. ನನ್ನ ವಿರುದ್ಧ ಷಡ್ಯಂತ್ರ ನಡೆದಾಗ ನಕ್ಕಿದ್ದವರು ನನ್ನ ಪ್ರಕರಣ ನಂತರ ಹಲವಾರು ನಡೆಯುತ್ತಿದ್ದು ಈ ಕುರಿತು ಸಿಎಂ ಹಾಗೂ ಗೃಹಮಂತ್ರಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಮುಂದೆ ಸಿದ್ದರಾಮಯ್ಯ ಹಾಗೂ ಪರಮೇಶ್ವರ ಸಿಡಿ ಬರಬಹುದು. ಈ ಕುರಿತು ಈಗಾಗಲೇ ತನಿಖೆ ನಡೆಸಬೇಕು. ಅಶ್ಲೀಲ ಸಿಡಿ ವಿಷಯದಲ್ಲಿ ಕೆಲವು ನೇರವಾಗಿ ಇದ್ದಾರೆ. ಈ ಕುರಿತು ನನ್ನ ಬಳಿ ದಾಖಲೆ ಇವೆ. ಚುನಾವಣೆ ಫಲಿತಾಂಶ ‌ನಂತರ ಬಿಡುಗಡೆ ಮಾಡುವೆ ಹಾಗೆಯೆ ಮಾತನಾಡುವುದು ತುಂಬಾ ಇದೆ ಎಂದು ಹೇಳಿದರು.

Post a Comment

0Comments

Post a Comment (0)