ಚನ್ನಮ್ಮನ ಕಿತ್ತೂರು 27-05-2024 : ಕಿತ್ತೂರು ತಾಲೂಕಿನ ಹಿರೇನದಿಹಳ್ಳಿ
ಗ್ರಾಮದ ರೈತ ಹಾಗೂ ಪಿಕೆಪಿಎಸ್ ಸದಸ್ಯ ಮಂಜುನಾಥ
ನೀಲಪ್ಪ ದಾಸನಕೊಪ್ಪ ವಿದ್ಯುತ್ ತಂತಿ ತಗುಲಿ
ಮೃತಪಟ್ಟಿದ್ದಾರೆ.
ಸೋಮವಾರ ಮುಂಜಾನೆ ತಮ್ಮ ಜಮೀನಿನಲ್ಲಿ ಟ್ರಾಕ್ಟರ್‌ನಿಂದ ಉಳುಮೆ ಮಾಡುತ್ತಿರುವ ಸಂದರ್ಭದಲ್ಲಿ ರೈತ ಮಂಜುನಾಥನ ಕೈಗೆ ವಿದ್ಯುತ್ ಪ್ರವಹಿಸುತ್ತಿದ್ದ
ತಂತಿ ತಗುಲಿದೆ. ಅಷ್ಟರಲ್ಲಿ ಅಲ್ಲಿಂದ ಜನರು ಬಿಡಿಸಲು ಪ್ರಯತ್ನಿಸಿದ್ದಾರೆ. ಹೊಲದಲ್ಲಿ ಮಂಜುನಾಥ ಕೆಳಗೆ
ಬಿದ್ದಿದ್ದಾರೆ. ತುಂಡಾಗಿ ಬಿದ್ದಿದ್ದ ತಂತಿ ಅವರ ಕಾಲಿಗೆ ಮತ್ತೆ ತಗುಲಿದೆ. ಇದರಿಂದ ಸ್ಥಳದಲ್ಲಿಯೇ ಮಂಜುನಾಥ ಮೃತ ಪಟ್ಟಿದ್ದಾರೆ.
ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನಿಗೆ ತಂದೆ, ತಾಯಿ, ಪತ್ನಿ, ಓರ್ವ ಪುತ್ರ ಇದ್ದಾರೆ.