"ಕಾಲಚಕ್ರ ಮತ್ತಿತರ ಕಥೆಗಳು" ಎಂಬ ಕಥಾ ಸಂಕಲನದ ಅವಲೋಕನ... ಸಿ ವೈ ಮೆಣಸಿನಕಾಯಿ!

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
"ಕಾಲಚಕ್ರ ಮತ್ತಿತರ ಕಥೆಗಳು" ಎಂಬ ಕಥಾ ಸಂಕಲನದ ಅವಲೋಕನ

 "ಕಾಲವದು ಕಳೆಯುವುದು ಗಳಿಗೆಯೂ ಮೀರುತಲಿ 
 ಸಾಲವನು ಮಾಡದಲೆ ಸಾಗುತಿರಲು 
 ಮೂಲೆಯಲಿ ಕೂರದೆಯೆ ಕೆಲಸವನು ಮಾಡುತಿರೆ
 ಶಾಲೆಯಲಿ ಕಲಿತಂತೆ ಲಕ್ಷ್ಮಿ ದೇವಿ".....

 ಯಾವುದೇ ವ್ಯಕ್ತಿಯು ಕಾಲವನ್ನು ಹರಣ ಮಾಡಬಾರದು ಗಳಿಗೆಗಳ ಮಹತ್ವವನ್ನು ತಿಳಿದು ಅದು ಮೀರುವ ಮುಂಚೆ ಕಾರ್ಯವನ್ನು ಮಾಡಬೇಕು. ಸಾಲವನ್ನು ಮಾಡಿ ಚಿಕ್ಕವರಾಗದಂತೆ ತಾನೇ ದುಡಿದು ಹಣವನ್ನು ಸಂಪಾದಿಸಬೇಕು. ಹಾಗೆ ಆರೋಗ್ಯವಾಗಿರುವ ವ್ಯಕ್ತಿಯು ಮೂಲೆಯಲ್ಲಿ ಕೂರದಂತೆ ಕೆಲಸವನ್ನು ಮಾಡುತ್ತಿದ್ದರೆ. ಶಾಲೆಯಲ್ಲಿ ಕಲಿತಷ್ಟೆ ಜೀವನದ ಪಾಠ ಕಲಿಯುತ್ತಾರೆ .
 ಬಹಳ ದಿನದಿಂದ ನನಗೆ ಸಿಕ್ಕಂತಹ ಪುಸ್ತಕ ಕಾಲಚಕ್ರ ಮತ್ತು ಇತರ ಕಥೆಗಳು ಈ ಪುಸ್ತಕವನ್ನು ಸಿ. ವಾಯ್. ಮೆಣಶಿನಕಾಯಿ ರವರು ಬರೆದಿರುವರು. ಇವರು ಹಿರಿಯ ಪತ್ರಕರ್ತರು. ಇವರ ಈ ಬಹಳಷ್ಟು ಅನುಭವದ ವಿಚಾರಗಳನ್ನು ಒಳಗೊಂಡ ಪುಸ್ತಕ ಇದಾಗಿದೆ . ಪುಸ್ತಕವು 2023ರ ಆವೃತ್ತಿಯಾಗಿದ್ದು. 118 ಪುಟಗಳನ್ನು ಒಳಗೊಂಡಿದೆ. ಬೆಲೆಯೂ 130 ಆಗಿದ್ದು. ಮುನ್ನುಡಿಯನ್ನು ಅವರ ಪರಿಚಯದಿಂದ ಪುಸ್ತಕದ ವಿಚಾರಗಳನ್ನು ತಿಳಿಸುವ ಪ್ರಯತ್ನವನ್ನು ಶ್ರೀ ಡಾ. ನಾಗರಾಜ್ ತಂಬ್ರಹಳ್ಳಿ . ಹಗರಿಬೊಮ್ಮನಹಳ್ಳಿ ತಾ. ವಿಜಯನಗರ ಜಿಲ್ಲೆ, ಇವರು ಬರೆದಿದ್ದಾರೆ. ಆನಂತರದಲ್ಲಿ ಶುಭನುಡಿಗಳನ್ನು ಶ್ರೀ. ಸಿ. ವಿ. ಕಟ್ಟಿಮನಿ ನಿವೃತ್ತ ಶಿಕ್ಷಕರು ವಿದ್ಯಾ ಮಂದಿರ ಪ್ರೌಢಶಾಲೆ ನೈಸರಗಿ ರವರು ತಿಳಿಸಿದ್ದಾರೆ. ಆ ನಂತರ ಲೇಖಕರ ನುಡಿಯನ್ನು ಶ್ರೀ ಸಿ. ವಾಯ್. ಮೆಣಸಿನಕಾಯಿ ಹಿರಿಯ ಪತ್ರಕರ್ತರು ತಮ್ಮ ಮನದಾಳದ ಭಾವನೆಗಳನ್ನು ವ್ಯಕ್ತಪಡಿಸಿದ್ದು ಸಾಹಿತ್ಯ ಕ್ಷೇತ್ರದ ಹಾದಿಯಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಆನಂತರದಲ್ಲಿ ಪರಿವಿಡಿಯನ್ನು ಓದಬಹುದು . ನಂತರ ಕಾಲಚಕ್ರ ಮತ್ತಿತರ ಕಥೆಗಳು ಪ್ರಾರಂಭವಾಗುತ್ತದೆ. ಮೊದಲ ಕಥೆಯಾದಂತಹ " ಸುಖಾಂತ್ಯ ಕಂಡ ರವಿಯ ಪ್ರಕರಣ" ಎಂಬ ಕಥೆಯು ಪ್ರಾರಂಭವಾಗುತ್ತದೆ. ಇಲ್ಲಿ ನಾವು ನೋಡಬಹುದಾದದ್ದು ರವಿ ಎಂಬ ಹುಡುಗನ ಬೇರೆಯ ಊರಿನಲ್ಲಿ ಓದಿಕೊಂಡು ಬಹಳಷ್ಟು ಕಷ್ಟಗಳ ಪಾಠವನ್ನು ಕಲಿತಿರುತ್ತಾನೆ. ಅವನ ಮಾವ ಶೇಖರಪ್ಪ ಅವನನ್ನು ಓದಿಸಲು ಹರಸಾಹಸವನ್ನೇ ಮಾಡುತ್ತಾನೆ ಎಂಬುದನ್ನು ತಿಳಿಸಿದ್ದಾರೆ. ಅವನಿಗೆ ಇಬ್ಬರು ತಂಗಿಯರು ಇರುತ್ತಾರೆ. ಆಶಾ,ಗೀತಾ ಎಂಬ ಸಹೋದರಿಯನ್ನು ಓದಿಸಿ ಅವರಿಗೊಂದು ನೆಲೆ ಕಟ್ಟಲು ಬಹಳಷ್ಟು ಕಷ್ಟಪಡುತ್ತಿರುತ್ತಾನೆ. ಆದರೆ ವಿಧಿಯಾಟ ನೋಡಿ ಆತ ಓದುತ್ತಿದ್ದಂತಹ ಕಾಲೇಜಿನಲ್ಲಿ ಸುಧಾ ಎಂಬವಳೊಂದಿಗೆ ಮೋಹದ ಪಾಶಕ್ಕೆ ಬದಿದ್ದ ರವಿ. ಅವಳ ಮೇಲೆ ಕಣ್ಣಿಟ್ಟಿದ್ದ ಕಳನಾಯಕನಾದ ಮಧುಕರ ಇವರಿಬ್ಬರ ಪ್ರೀತಿಗೆ ಅಡ್ಡಲಾಗಿ ಇದ್ದುದ್ದನ್ನು ಕಾಣಬಹುದಾಗಿದೆ. ಪ್ರೀತಿಗೆ ಅಡ್ಡಲಾದ ರವಿಯನ್ನು ಕೊಲೆಯನ್ನೇ ಮಾಡಿಬಿಡುತ್ತಾನೆ ಎಂಬುದನ್ನು ತಿಳಿಸಿದ್ದಾರೆ. ನಂತರ ದಿನಗಳಲ್ಲಿ ಅವನ ಕೊಲೆಯ ಯಾವ ರೀತಿಯ ನ್ಯಾಯ ದೊರಕುವುದಿಲ್ಲ ಎಂಬುದನ್ನು ಈ ಕಥೆಯ ಕೊನೆಯಲ್ಲಿ ತಿಳಿಸಿದ್ದಾರೆ. ಕಥೆಯು ಬಹಳಷ್ಟು ವಿಚಾರಗಳನ್ನು ಒಳಗೊಂಡಿದ್ದು ಭಾವನಾತ್ಮಕವಾಗಿ ಮನಮುಟ್ಟುವಂತಿದೆ.
 ಎರಡನೇ ಕಥೆಯಾದ ಮಹೇಶನ ಮಕ್ಕಳ ಛಲದ ಬದುಕಿನ ಕಥೆಯಲ್ಲಿ ಪರಮೇಶಪ್ಪ ಮತ್ತು ಕಮಲಮ್ಮ ಎಂಬ ದಂಪತಿಯ ಮಗಳಾದ ಬಸು ಮತ್ತು ಮಹೇಶನು ಜೀವನದಲ್ಲಿ ಯಾವ ರೀತಿ ಕಷ್ಟದಿಂದ ಮುಂದೆ ಬಂದು ತಮ್ಮ ಮಕ್ಕಳನ್ನು ಯಾವ ರೀತಿ ಬೆಳೆಸಿದರು. ಅದಕ್ಕೆ ಅವರು ಪೈಚಲಾಟ ಪಟ್ಟ ಬದುಕಿನ ಹವಣೆಗಳ ಬಗ್ಗೆ ತಿಳಿಸಿದ್ದಾರೆ. ಮಕ್ಕಳನ್ನು ಸಾಕುವಾಗ ಎಷ್ಟೆಲ್ಲಾ ಹಂತದ ರೀತಿಯ ಅನುಭವಗಳನ್ನು ಪಡೆದನೆಂಬುದನ್ನು ವಿವರವಾಗಿ ತಿಳಿಸಿದ್ದಾರೆ. ಮಕ್ಕಳ ಕುರಿತಾದ ವಿವರಣೆಯಿಂದ ಯಾವ ರೀತಿ ಮಕ್ಕಳನ್ನ ಬೆಳೆಸಬೇಕು ಎಂಬುದನ್ನ ನಿದರ್ಶನವಾಗಿ ಕಥೆಯಲ್ಲಿ ತಿಳಿಸಿದ್ದಾರೆ.
 ಪ್ರಮುಖವಾದ ಕಥೆ ಎಂದರೆ " ಮಾಯವಾದ ಜಾತಿ ಎಂಬ ಭೂತ" ಈ ಕಥೆಯಲ್ಲಿ ನಾವು ಕಾಣುವ ಅಂಶವೆಂದರೆ ಮೌನೇಶ ಮತ್ತು ಪಾರ್ವತಿ ಅವರ ಪ್ರೇಮ ಪ್ರಸಂಗವನ್ನು ಕಾಣಬಹುದಾಗಿದೆ. ಅವರಿಬ್ಬರೂ ಪಾಲಕರಿಂದ ಬಜಿಸಿ ಪಡುವ ಅನುಭವಗಳನ್ನು ಸಾರಾ ಸಾಗುಟಾಗಿ ತಿಳಿಸಿದ್ದಾರೆ. ನಂತರದಲ್ಲಿ ಅವರ ಪ್ರೀತಿ ಜಾತಿಯನ್ನು ಮೀರಿ ಬೆಳೆದು ಪಾಲಕರನ್ನು ಯಾವ ರೀತಿ ಒಂದು ಹುಡುಸುತ್ತದೆ ಎಂಬುದರ ಅನುಭವಗಳನ್ನು ತಿಳಿಸಿದ್ದಾರೆ. ಈ ಕಥಾಹಂದರದಲ್ಲಿ ಪ್ರೇಮದ ಜೊತೆಗಿನ ಪಾಲಕರ ಬೆಲೆಯನ್ನು ಕಾಣಬಹುದಾಗಿದೆ.
" ಪರಿತ್ಯಕ್ತೆಗೆ ಆಶ್ರಯ ನೀಡಿದ ಮಲ್ಲು" ಈ ಕಥೆಯಲ್ಲಿ ನಾವು ನೋಡುವುದಾದರೆ ಮಲ್ಲು ಎಂಬ ಅಗರ್ಭ ಶ್ರೀಮಂತನಿಗೆ ತಂದೆ ತಾಯಿ ಇಲ್ಲದಿದ್ದಾಗ ತನ್ನ ಹುಟ್ಟು ಹಬ್ಬದ ಆಚರಣೆಯನ್ನು ಅನಾಥಾಶ್ರಮದಲ್ಲಿ ಮಾಡುವ ಸಂದರ್ಭದಲ್ಲಿ ಪರಿಚಯ ವಯಸ್ಸಾದ ಮುದುಕಿಯ ಜೀವನ. ಮತ್ತು ಅವರ ಮೇಲಿನ ಕರುಣೆಯಿಂದ ಮಲ್ಲು ಆರೋಗ್ಯವನ್ನು ದತ್ತು ತೆಗೆದುಕೊಂಡು ಪೋಷಿಸುವ ಕಥೆಯಂತೂ ಮನಸ್ಸಿಗೆ ಮುಟ್ಟುವಂತಿದೆ. ಬದುಕಿನ ಅಲೆದಾಡುವ ಜೀವನದ ಬಗ್ಗೆ ಸಾರವಿದೆ. ಬಹಳಷ್ಟು ಭಾವನಾತ್ಮಕ ಅಂಶಗಳನ್ನು ಈ ಕಥೆಯಲ್ಲಿ ಕಾಣಬಹುದು. ಮನುಕುಲದಲ್ಲಿ ಇಂತಹ ಘಟನೆಗಳು ನಡೆದರೆ ಎಷ್ಟು ವೃದ್ಧರಿಗೆ ಆಸರೆ ನೀಡಿದಂತಾಗುತ್ತದೆ. ಆನಂತರದಲ್ಲಿ "ಅಳಿಯನ ಶ್ರೀ ರಕ್ಷೆ " ಈ ಕಥೆಯಲ್ಲಿ ರಾಮರಾಯರ ಅಳಿಯ ತನ್ನ ಮಾವ ತೀರಿಕೊಂಡ ಮೇಲೆ ಮನೆಯಲ್ಲಿ ಗಂಡು ಮಕ್ಕಳಿಲ್ಲದ ಕಾರಣ ಹೆಂಡತಿಯ ತಂಗಿಗೆ ವರ ಹುಡುಕಿ ಮದುವೆ ಮಾಡುವುದರ ಕಥೆಯನ್ನು ತಿರುಳಾಗಿಸಿದೆ. ಯಾರು ಇಲ್ಲದ ಹೆಂಡತಿಯ ತಂಗಿ ಎಂಬ ಒಂದು ಕಾರಣಕ್ಕೆ ಅತ ಜವಾಬ್ದಾರಿಯನ್ನು ತೆಗೆದುಕೊಂಡು ಮದುವೆ ಮಾಡಿದ ಅಂಶವು ಪ್ರೇರಣಾದಾಯಕವಾಗಿದೆ.
 ಕಾಲಚಕ್ರ ಈ ಕಥೆಯಲ್ಲಿ ಸುಪ್ರೀತ ಎಂಬ ಯುವಕ ಬಹಳ ಬಡ ಕುಟುಂಬದವನು. ಬಡ ಕುಟುಂಬದಲ್ಲಿ ಬೆಳೆದು ನಗರದ ಶ್ರೀಮಂತರ ಮನೆಯಲ್ಲಿ ಕೆಲಸ ಮಾಡುತ್ತಾನೆ. ಬಹಳ ಕಷ್ಟ ಪಟ್ಟು ಆ ನಗರದಲ್ಲೇ ಯಶಸ್ವಿ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಅದರಲ್ಲಿ ಯಶಸ್ವಿಯಾಗಿ ಪಟ್ಟಣದಲ್ಲಿ ಆಶ್ರಯ ನೀಡಿದ ಶ್ರೀಮಂತರ ಮಗಳನ್ನು ಮದುವೆಯಾಗುವುದಲ್ಲದೆ 
 ಆ ಮದುವೆ ಆಗಬೇಕಾದರೆ ಅವನು ಅನುಭವಿಸಿದಂತಹ ಅನುಭವಗಳ ಬಗ್ಗೆ ಬಹಳಷ್ಟು ಅರ್ಥಪೂರ್ಣವಾಗಿ ತಿಳಿಸಿದ್ದಾರೆ.
 ತ್ಯಾಗಮಯಿ ಮತ್ತು ಕಳ್ಳರ ಕೈಯಿಂದ ಪಾರಾದ ರವಿ ಈ ಕಥೆಯು ಅಷ್ಟೇ ಬಹಳ ಕುತೂಹಲವನ್ನು ಮೂಡಿಸುತ್ತದೆ. ಈ ಕಥಾ ಸಂಕಲದಲ್ಲಿ ಬಸ್ ಸ್ಟ್ಯಾಂಡಿನಲ್ಲಿ ರವಿ ನಿಂತು ಕಾಯುತ್ತಿರುವ ವಿಚಾರದಿಂದ ಪ್ರಾರಂಭವಾಗುವ ಕಥೆಯು ಆತ ಪ್ರಯಾಣದಲ್ಲಿ ಅನುಭವಿಸಿದ ನೋವು ಮತ್ತು ಅನುಭವಗಳನ್ನು ತಿಳಿಸಿದ್ದಾರೆ. ನಂತರ ಆ ಸಮಸ್ಯೆಯಿಂದ "ಸುಮ್ಮನೆ ಇರಲಾರದೆ ಇರುವೆ ಬಿಟ್ಟುಕೊಂಡೆ"ಎಂದು ಸಪ್ಪಿಸಿಕೊಳ್ಳುತ್ತಾ ಪೊಲೀಸರ ಸಹಾಯದಿಂದ ಕಳ್ಳರಿಂದ ಪಾರದಾ ಆತ ತನ್ನ ಊರಿನ ಬಸ್ಸುಗಾಗಿ ಕಾಯುತ್ತಾ ಮತ್ತೆ ಬಸ್ ನಿಲ್ದಾಣಕ್ಕೆ ಬರುತ್ತಾನೆ. ಬಸ್ ನಿಲ್ದಾಣಕ್ಕೆ ಬಿಟ್ಟು ಹೋದಂತಹ ಪೊಲೀಸರನ್ನು ಕಳ್ಳರಿಂದ ತನಗಾದ ಅನುಭವವನ್ನು ಶಪಿಸಿಕೊಳ್ಳುವುದನ್ನು ಬಹಳ ಸೊಗಸಾಗಿ ಓದುಗರಿಗೆ ತಿಳಿಸಿದ್ದಾರೆ 
 ಹೀಗೆ ಮುಂದುವರೆಯುತ್ತಾ ಇವರ ಕಥಾ ಸಂಕಲನವು ಓದುಗರಿಗೆ ಆಸಕ್ತಿಯನ್ನು ಮೂಡಿಸುವಂತಿದೆ .
" ಹೋಯ್ದಾಟದಲ್ಲಿ ಸಿಲುಕಿದ ಸಂಗಮನಾಥ " ಇದು ಸಹ ಭಾವನಾತ್ಮಕವಾದದ್ದು ಮನೆಯಲ್ಲಿ ನಡೆದ ಗಂಡ ಹೆಂಡತಿಯ ಜಗಳದಲ್ಲಿ ಕೂಸು ಬಡವದಂತಹ ಪರಿಸ್ಥಿತಿಯನ್ನು ಒಳಗೊಂಡಂತಹ ಕಥೆ. ಸಂಗಮನಾಥನ ಪರಿಸ್ಥಿತಿಯನ್ನು ಇಲ್ಲಿ ಪೂರ್ಣವಾಗಿ ತಿಳಿಸುತ್ತಾರೆ. ಎಷ್ಟೇ ಕಷ್ಟಪಟ್ಟರೂ ಸಹ ಸಂಸಾರಿಕ ಜೀವನದಲ್ಲಿ ನಡೆಯುವ ಕೆಲವು ಘಟನೆಗಳು ಮಕ್ಕಳ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಸುತ್ತದೆ. ಗಂಡ ಹೆಂಡತಿಯ ಜಗಳ ಕಂಡ ಮಗು ಹುಡುಕುವುದಕ್ಕೆ ಪ್ರಯತ್ನಿಸಿ ಹುಡುಕಿದ ನಂತರದಲ್ಲಿ ಒಂದು ಮಾಡಿದ ಪ್ರಾಂಶುಪಾಲರು ಇಂತಹ ಜಗಳಗಳನ್ನು ಶಾಲೆಯವರೆಗೆ ತರದ ಬಾರದು ಎಂದು ಹೇಳುತ್ತಾರೆ. ಗಂಡ ಹೆಂಡತಿ ಯಾವ ಜಗದ ಜಗಳವಾಡದೆ ಹೊಂದಾಣಿಕೆಯಿಂದ ಇರಬೇಕು ಎಂದು ಬುದ್ಧಿವಾದ ಹೇಳಿ ಕಳಿಸುತ್ತಾರೆ. ಹೀಗೆ ಮುಂದುವರೆದ ಈ ಪುಸ್ತಕದಲ್ಲಿ ಸರ್ಕಾರದ ಕಣ್ತೆರಿಸಿದ ಗ್ರಾಮಸ್ಥರು ಎಂಬ ಕಥೆಯು ಸಿದ್ದಪ್ಪನ ಹೊಲದಲ್ಲಿ ಮಳೆಯಿಂದಾದ ಪಜೀತಿಯನ್ನು ಮತ್ತು ಅದಕ್ಕೆ ಪರಿಹಾರವನ್ನು ಯಾವ ರೀತಿ ಪರಿಹರಿಸುತ್ತಾರೆ ಎಂಬುದು ಇದೆ. ಆನಂತರದಲ್ಲಿ ಗ್ರಾಮಸ್ಥರ ಹೊಂದಾಣಿಕೆಯನ್ನು ಕಾಣಬಹುದು. ಕುಡಿತಕ್ಕೆ ಬಲಿಯಾಯಿತು ಕುಟುಂಬ ಎಂಬ ಕಥೆಯಲ್ಲಿ ರಾಧಮ್ಮನ ಗಂಡನ ಕುಡಿತದಿಂದ ಆದಂತಹ ಅನಾಹುತಗಳನ್ನು ಮಕ್ಕಳ ಅಂತ್ಯ ಸಂಸ್ಕಾರ ಮಾಡಿದ ವಿಧಾನವನ್ನು ಕಣ್ಣಲ್ಲಿ ನೀರು ತರಿಸುವಂತಿತ್ತು. ಪೊಲೀಸ್ ಬಂದು ಮಕ್ಕಳು ಬಲಿಯಾದ್ದಕ್ಕೆ ಮಾಂತ್ರಿಕನನ್ನು ಸಹ ಎಳೆದು ತಂದ ಪೊಲೀಸರು ವಿಚಾರಣೆ ಗೊಳಪಡಿಸಿದರು.
ಕ್ರೂರಿ ಮನಸ್ಸು ಈ ಕಥೆಯಲ್ಲಿ ರಾಜೇಶ ಮತ್ತು ಮಾಧವೀಯ ಸಂಭಾಷಣೆಯಿಂದ ಪ್ರಾರಂಭವಾಗುವ ಸಾಲುಗಳಿವೆ ಗಂಡ ಹೆಂಡತಿಯ ನಡುವೆ ನಡೆದ ಹಿತಕರ ಘಟನೆಗಳು ಎಷ್ಟೋ ಅದರೊಳಗಿನ ಭಾವದ ಅಲೆಗಳ ಕದನಗಳೆಷ್ಟು ಎಂಬುದನ್ನು ಇಲ್ಲಿ ತಿಳಿಸಿದ್ದಾರೆ.
 "ಬಾರಾ ಕೆಳಗಿಳಿಸಿದ ಕಮಲವ್ವ"ಸಂತು, ಎಲ್ಲಿದ್ದೀಯಾ? ಎಂಬ ಪ್ರಶ್ನೆಯಿಂದ ಪ್ರಾರಂಭವಾಗುವ ಕಥೆಯೂ ಕಚೇರಿ ಕಟ್ಟಲೆಗಳು ಭಾವನಾತ್ಮಕ ಅಲೆಗಳು ಜೀವನದ ತಿರುಗುಗಳ ಬಗ್ಗೆ ತಿಳಿಸಿದ್ದಾರೆ.
 ನೋಯಿಸಿದ ಗೆಳೆಯ ಎಂಬ ಕಥೆಯು ಹಲವಾರು ಪಾತ್ರಗಳಿಂದ ಸ್ಪರ್ಧೆಗಳವರೆಗೂ ವಿವರಣೆಯನ್ನು ನೀಡಿದ್ದಾರೆ. ನೌಕರಿ ಕಸಿದಾ ಕಥೆಯಲ್ಲಿ ಅಂಗವಿಕಲನ ಬಗೆಗೆ ಇರುವ ಕಾಳಜಿಯನ್ನ ತಿಳಿಸಲಾಗಿದೆ 
 ಮದುವೆಯ ಬ್ರೋಕರ್ ಎಂಬ ಕಥೆಯಲ್ಲಿ ಸತೀಶನ ಮದುವೆಯ ವಿಚಾರವಾಗಿ ಪರದಾಡಿದ ಪರದಾಟವನ್ನು ಸುಲಲಿತವಾಗಿ ತಿಳಿಸಿದ್ದಾರೆ. ಈ ಕಥೆಯೊಂದಿಗೆ ಮುಕ್ತಾಯಗೊಳ್ಳುವ ಪುಸ್ತಕವು ಹಲವಾರು ರೀತಿಯ ಚಿಂತನೆಗಳಿಗೆ ಒಳಮಾಡುತ್ತದೆ. ಹಿರಿಯ ಪತ್ರಕರ್ತರಾದ ಸಿ. ವಾಯ್ ಮೆಣಸಿನಕಾಯಿ ರವರ ಪುಸ್ತಕದಲ್ಲಿನ ಕಥೆಗಳು ಮನಸ್ಸಿಗೆ ಮುಧದ ಜೊತೆಗೆ ಅನುಭವಗಳ ಸಾರವನ್ನು ತಿಳಿಸುತ್ತದೆ. ಕಷ್ಟ ಸುಖಗಳ ಅರಿವಿನ ಅಲೆಗಳಿಗೆ. ಈ ಪುಸ್ತಕದ ಬೆನ್ನುಡಿಯನ್ನು ಡಾ.ಮಲ್ಕಪ್ಪ ಅಲಿಯಾಸ್ ಮಹೇಶ, ಶಿಕ್ಷಕರು, ಬೆಂಗಳೂರು ಇವರು ಬರೆದಿದ್ದಾರೆ. ಹೀಗೆ ಲೇಖಕರಿಂದ ಇನ್ನೂ ಹೆಚ್ಚಿನ ಗಟ್ಟಿತನದ ಬರಹಗಳನ್ನು ನಿಮ್ಮಿಂದ ಬಯಸುತ್ತೇವೆಂದು ತಿಳಿಸುತ್ತಾ ಸಾಹಿತ್ಯ ಲೋಕಕ್ಕೆ ಹಲವಾರು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿರೆಂದು ಆಶಿಸುತ್ತೇನೆ. ಶುಭವಾಗಲಿ ಎಂದು ಆರೈಕೆಯೊಂದಿಗೆ ಈ ಪುಸ್ತಕ ಪರಿಚಯವನ್ನು ಮುಕ್ತಾಯಗೊಳಿಸುತ್ತಿದ್ದಾರೆ. ಜೈ ಹಿಂದ್ ಜೈ ಭಾರತ್ ಮಾತೆ.

ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್.
 ಸಾಮಾಜಿಕ ಚಿಂತಕಿ.ಶಿಕ್ಷಕಿ. ಹಾಸನ

Post a Comment

0Comments

Post a Comment (0)