*ಕಂದ್ಗಲ್ ಗ್ರಾಮದಲ್ಲಿ ಮನೆಯ ಮೇಲ್ಚಾವಣಿ ಬಿದ್ದು 2ಬಾಲ ಮಕ್ಕಳು ಸಾವು. ಸಾವನ್ನಪ್ಪಿದ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಶಾಸಕ ಕಾಶಪ್ಪನವರು*

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
*ಕಂದ್ಗಲ್ ಗ್ರಾಮದಲ್ಲಿ ಮನೆಯ ಮೇಲ್ಚಾವಣಿ ಬಿದ್ದು 2ಬಾಲ ಮಕ್ಕಳು ಸಾವು. ಸಾವನ್ನಪ್ಪಿದ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಶಾಸಕ ಕಾಶಪ್ಪನವರು*

ಬಾಗಲಕೋಟ ಜಿಲ್ಲೆ ಇಳಕಲ್ ತಾಲೂಕಿನ ಕಂದ್ಗಲ್ ಗ್ರಾಮದಲ್ಲಿ ಮನೆ ಮೇಲ್ಚಾವಣಿ ಕುಸಿದು ಬಿದ್ದ ಪರಿಣಾಮ 2 ಬಾಲ ಮಕ್ಕಳು ರುದ್ದರಯ್ಯ ಈಶ್ವರಯ್ಯ ಅದಪುರಮಠ ವೈಯಸ್ಸು 10. ಗೀತಾ ಈಶ್ವರಯ್ಯ ಅದಪುರಮಠ ವೈಯಸ್ಸು 14 ಮೃತಪ್ಪಟ್ಟ ಮಕ್ಕಳು ಸಾವನ್ನು ಅಪ್ಪಿದ್ದಾರೆ. ಆ ಮಕ್ಕಳನ್ನು ಇಳಕಲ್ ತಾಲೂಕ ಆಸ್ಪತ್ರೆಗೆ ರವಾನಿಸಿದ್ದು ಸುದ್ದಿ ತಿಳಿದ ತಕ್ಷಣಕ್ಕೆ ಸ್ಥಳಕ್ಕೆ ತಾಲೂಕಿನ ಶಾಸಕರಾದ ವಿಜಯಾನಂದ್ ಎಸ್ ಕಾಶಪ್ಪನವರ ಆಸ್ಪತ್ರೆಗೆ ದೌಡಾಯಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇದೆ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಶಪ್ಪನವರ ಅವರು ಮೃತರ ಕುಟುಂಬಕ್ಕೆ ಧೈರ್ಯ ಹೇಳಿ ನಿಮ್ಮ ಕುಟುಂಬದ ಜೊತೆಗೆ ನಾನಿದ್ದೇನೆ. ನಿಮ್ಮ ಕುಟುಂಬಕ್ಕೆ ಆ ದೇವರು ಅನ್ಯಾಯ ಮಾಡಿದ್ದಾನೆ ನಿಮಗೆ ನಿಮ್ಮ ಕುಟುಂಬಕ್ಕೆ ನನ್ನಿಂದ ನಿಮಗೆ ನಿಮ್ಮ ಮಕ್ಕಳನ್ನು ತರಲು ಆಗುವುದಿಲ್ಲ. ಆದರೆ ನನ್ನಿಂದ ಮತ್ತು ನನ್ನ ಸರ್ಕಾರದಿಂದ ಆಗುವ ಪರಿಹಾರವನ್ನು ನಿಮ್ಮ ಕುಟುಂಬಕ್ಕೆ ನೀಡುತ್ತೇನೆಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಶಾಸಕ ಕಾಶಪ್ಪನವರ್ ಅವರು ಅಧಿಕಾರಿಗೆಗಳೊಂದಿಗೆ ಫೋನ್ ಮುಖಾಂತರ ಚರ್ಚಿಸಿ ಅದೆಷ್ಟು ಬೇಗ ಮಕ್ಕಳನ್ನು ಕಳೆದುಕೊಂಡ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರವನ್ನು ಒದಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ವಿಜಯ ಮಾಂತೇಶ್ ಗದ್ದನಕೇರಿ. ಸುರೇಶ್ ಜಂಗ್ಲಿ. ಮಹಾಂತೇಶ ಗಜೇಂದ್ರಗಡ. ಮತ್ತು ಇನ್ನು ಅನೇಕರು ಇದ್ದರು

Post a Comment

0Comments

Post a Comment (0)