JD(S) ; ಎಚ್.ಡಿ.ಕುಮಾರಸ್ವಾಮಿ ಅವರಿಗಿಂತ ಪತ್ನಿಯೇ ಸಿರಿವಂತೆ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಮಂಡ್ಯ : ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರದ ಜತೆಗೆ ಸಲ್ಲಿಸಿದ ಅಫಿಡವಿಟ್ ಪ್ರಕಾರ ಪತ್ನಿ ಅನಿತಾ ಸೇರಿ ಒಟ್ಟು 217.21 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಮಾಜಿ ಶಾಸಕಿಯಾಗಿರುವ ಅನಿತಾ ಅವರು ಕುಮಾರಸ್ವಾಮಿ ಅವರಿಗಿಂತ ಶ್ರೀಮಂತರಾಗಿದ್ದು, ಒಟ್ಟು ಆಸ್ತಿ 154.39 ಕೋಟಿ ರೂ.ಆಸ್ತಿ ಮೌಲ್ಯ ಹೊಂದಿದ್ದು, ಕುಮಾರಸ್ವಾಮಿ ಅವರ ಒಟ್ಟು ಆಸ್ತಿ 54.65 ಕೋಟಿ ರೂ. ಆಗಿದೆ. HUF (ಹಿಂದೂ ಅವಿಭಜಿತ ಕುಟುಂಬ) ನಿಂದ ಅವರ ಹೆಸರಿನಲ್ಲಿ ಸುಮಾರು 8.17 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

Post a Comment

0Comments

Post a Comment (0)