ಹುಬ್ಬಳ್ಳಿ ಕಾಂಗ್ರೆಸ್ ಕಾರ್ಪೊರೇಟ್ ಮಗಳ ಭೀಕರ ಹತ್ಯೆ...!!!

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಹುಬ್ಬಳ್ಳಿ ಕಾಂಗ್ರೆಸ್ ಕಾರ್ಪೊರೇಟ್ ಮಗಳ ಭೀಕರ ಹತ್ಯೆ...!!!
ಹುಬ್ಬಳ್ಳಿ : ಹುಬ್ಬಳ್ಳಿಯ ಪ್ರತಿಷ್ಠಿತ ಬಿವಿಬಿ ಕಾಲೇಜಿನಲ್ಲಿ ಎಂಸಿಎ ಓದುತ್ತಿರುವ ‌ವಿದ್ಯಾರ್ಥಿನಿಯನ್ನು ಮಾಸ್ಕ ಹಾಕಿಕೊಂಡು ಬಂದ ಯುವಕನೊಬ್ಬ ಚಾಕುವಿನಿಂದ ಇರಿದು ಕೊಲೆ‌ ಮಾಡಿದ್ದಾನೆ.

ಹತ್ಯೆ ಆಗಿರುವ ವಿದ್ಯಾರ್ಥಿನಿ ನೇಹಾ ಹಿರೇಮಠ. ಆಕೆ ಕಾಂಗ್ರೆಸ್ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಎನ್ನುವರ ಮಗಳು ಎಂದು ತಿಳಿದುಬಂದಿದೆ.

ಹತ್ಯೆಯಾದ ಯುವತಿಯನ್ನು ಮುಸ್ಲಿಂ ಯುವಕ ಪ್ರೀತಿ ಮಾಡುತ್ತಿದ್ದ. ಯುವತಿ ಪ್ರೀತಿಗೆ ನಿರಾಕರಿಸಿದ್ದಕ್ಕೆ ಯುವಕ ಚಾಕುವಿನಿಂದ ಇರಿದು ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ.

ಕೊಲೆಯ ನಂತರ ತನಿಖೆ ಆರಂಭಿಸಿದ ಪೊಲೀಸರು ಆರೋಪಿ ಫಯಾಜ್ ಎಂಬಾತನನ್ನು ಬೆಳಗಾವಿ ಜಿಲ್ಲೆಯ ಸೌದತ್ತಿಯಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಪ್ರಕಾರ, ಆರೋಪಿ ಸಂತ್ರಸ್ತೆಯ ಸೀನಿಯರ್ ಕಾಲೇಜಿನಲ್ಲಿಯೇ ಓದುತ್ತಿದ್ದನು. ಕೊಲೆಯ ನಂತರ ಆರೋಪಿ ಕೈಯಲ್ಲಿ ಚಾಕು ಹಿಡಿದು ಸ್ಥಳದಿಂದ ತೆರಳಿದ್ದಾರೆ.

24 ವರ್ಷದ ನೇಹಾ ಹಿರೇಮಠ ಎಂಸಿಎ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ತೀವ್ರವಾದ ರಕ್ತಸ್ರಾವದಿಂದ ಸಾವಿಗೀಡಾಗಿದ್ದಾಳೆ.

ಹುಬ್ಬಳ್ಳಿಯ ಕಿಮ್ಸನ ಮುಂಭಾಗದಲ್ಲಿ ಜನ ಸೇರಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಚಾಕುವಿನಿಂದ ಇರಿದಿರುವ ಹಿನ್ನೆಲೆ ಏನಿರಬಹುದೆಂದು ಇನ್ನು ತಿಳಿದು ಬಂದಿಲ್ಲ.

ವಿದ್ಯಾನಗರ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನ‌ ಜರುಗಿಸಿದ್ದಾರೆ.

Post a Comment

0Comments

Post a Comment (0)