ಬೆಳಗಾವಿ : ಭಾರತೀಯರ ಹೃದಯ ಸಾಮ್ರಾಟ್ ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಳಗಾವಿ ನಗರಕ್ಕೆ ಆಗಮಿಸಲಿದ್ದು, ಉತ್ತರ ಕರ್ನಾಟ ಶೈಲಿಯ ಜೋಳದ ರೊಟ್ಟಿ ಊಟ ಸವಿಯಲಿದ್ದಾರೆ.
ಗೋವಾ ಚುನಾವಣಾ ಪ್ರಚಾರ ಮುಗಿಸಿ ಬೆಳಗಾವಿ ನಗರಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿ ನಗರದ ಐಟಿಸಿ ವೆಲ್ ಕಮ್ ಹೊಟೆಲ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರಿಗೆ ಉತ್ತರ ಕರ್ನಾಟಕ ಶೈಲಿಯ ಜೋಳದ ರೊಟ್ಟಿ ಊಟ ತಯಾರಿಸಿದ್ದಾರೆ. ಮೊದಲಬಾರಿಗೆ ಬೆಳಗಾವಿಯಲ್ಲಿ ವಾಸ್ತವ್ಯ ಹೋಡಲಿರುವ ಪ್ರಧಾನಿ ಮೋದಿಗೆ ಊಟದ ಸವಿ ಬಡಿಸಲು ಖಾದ್ಯ ತಯಾರಿಸಲಾಗಿದೆ.