ಸಾರಿಗೆ ಬಸ್ ಹಾಯ್ದು ಪಾದಚಾರಿ ಸಾವು

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಸಾರಿಗೆ ಬಸ್ ಹಾಯ್ದು ಪಾದಚಾರಿ ಸಾವು

ಬೈಲಹೊಂಗಲ- ಸಾರಿಗೆ ಬಸ್ ಹಾಯ್ದ ಪರಿಣಾಮ ಪಾದಚಾರಿಯೋರ್ವನು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ತಾಲೂಕಿನ ಕೆಂಗಾನೂರ ಗ್ರಾಮದ ಬಳಿ ಇರುವ ಸಂಗೊಳ್ಳಿ ಕ್ರಾಸ ಬಳಿ ಗುರುವಾರ ರಾತ್ರಿ ಜರುಗಿದೆ.

ಮೃತನನ್ನು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಡೊಂಬರಿಕೊಪ್ಪ ಗ್ರಾಮದ ವಿಠ್ಠಲ ಫಕೀರಪ್ಪ ಜಂಗಮ(27) ಎಂದು ಗುರುತಿಸಲಾಗಿದೆ. 

ಸಾರಿಗೆ ಬಸ್ ದೊಡವಾಡದಿಂದ ಬೈಲಹೊಂಗಲಕ್ಕೆ ಬರುವಾಗ ಸಂಗೊಳ್ಳಿ ಕ್ರಾಸ ಬಳಿ ಪಾದಚಾರಿಯು ರಸ್ತೆ ಕ್ರಾಸ ಮಾಡುವಾಗ ಬಸ್ ಡಿಕ್ಕಿ ಹೊಡೆದ ಪರಿಣಾಮ ತೀವೃವಾಗಿ ಗಾಯಗೊಂಡಿದ್ದನು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. 

ಪ್ರಕರಣ ಬೈಲಹೊಂಗಲ ಪೊಲೀಸ ಠಾಣೆಯಲ್ಲಿ ದಾಖಲಾಗಿದೆ.

ಕೆಂಗಾನೂರು ರಸ್ತೆ ಪಕ್ಕದಲ್ಲಿ ಸುಮಾರು 50 ಕ್ಕೂ ಹೆಚ್ಚು ಹೆಳವರ ಕುಟುಂಬಗಳು ಗುಡಿಸಲು ಹಾಕಿಕೊಂಡು ವಾಸವಾಗಿದ್ದಾರೆ. ವಿಠ್ಠಲ ಈತನಿಗೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯವಾಗಿದ್ದನ್ನು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

Post a Comment

0Comments

Post a Comment (0)