ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ: ಡಿಜಿ-ಐಜಿಪಿ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೆಂಗಳೂರು, ಏಪ್ರಿಲ್ 30: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅಶ್ಲೀಲ ವಿಡಿಯೋ ಪ್ರಕರಣದ ವರದಿಯನ್ನು ಮೂರು ದಿನಗಳಲ್ಲಿ ಆಯೋಗಕ್ಕೆ ಸಲ್ಲಿಸವಂತೆ ಕರ್ನಾಟಕ ಡಿಜಿ-ಐಜಿಪಿ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ನೀಡಿದೆ.

ಇನ್ನು ರಾಜ್ಯ ಮಹಿಳಾ ಆಯೋಗ ಕೂಡ ಡಿಜಿ-ಐಜಿಪಿ ಮತ್ತು ಎಸ್ಐಟಿ ಮುಖ್ಯಸ್ಥರಿಗೆ ಪತ್ರ ಬರೆದಿದೆ. ವಿಡಿಯೋಗಳು ವೈರಲ್ ಆಗದಂತೆ ತಡೆಯಿರಿ. ವಿಡಿಯೋ ಲೀಕ್ ಆಗಿದ್ದು ಎಲ್ಲಿಂದ? ಲೀಕ್ ಮಾಡಿದ್ದು ಯಾರು? ಪ್ರಕರಣವನ್ನು ಕ್ರಿಮಿನಲ್ ಮೊಕದ್ದಮೆ ಅಡಿಯಲ್ಲಿ ತನಿಖೆ ನಡೆಸಬೇಕು ಎಂದು ಪತ್ರ ಬರೆದಿದೆ. ಇನ್ನು ಮಹಿಳಾ ಆಯೋಗ ಸೈಬರ್ ಕ್ರೈಂ ಜೊತೆ ಸಭೆ ನಡೆಸಿದ್ದು, ವಿಡಿಯೋ ವೈರಲ್ ಬಗ್ಗೆ ಮಹತ್ವದ ಚರ್ಚೆ ನಡೆಸಿದೆ. ವಿಡಿಯೋಗಳು ಹೆಚ್ಚು ಶೇರ್ ಆಗದಂತೆ ತಡೆಯಿರಿ ಎಂದು ಹೇಳಿದೆ.

Post a Comment

0Comments

Post a Comment (0)