ಬೈಲಹೊಂಗಲ: ದೇಶದ 140 ಕೋಟಿ ಜನರ ಕನಸು ನರೇಂದ್ರ ಮೋದಿ ಅವರು ಇನ್ನೊಮ್ಮೆ ಪ್ರಧಾನಿಯಾಗಬೇಕು ಎನ್ನುವುದಾಗಿದೆ ಎಂದು ಬೆಳಗಾವಿ ಲೋಕಸಭೆ ಅಭ್ಯರ್ಥಿ ಜಗದೀಶ ಶೆಟ್ಟರ ಹೇಳಿದರು.
ಅವರು ಬುಧವಾರ ಪಟ್ಟಣದ ಪೃಥ್ವಿ ಗಾರ್ಡನಲ್ಲಿ ಮತಕ್ಷೇತ್ರದ ಕಾರ್ಯಕರ್ತ ಸಭೆ ಉದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿಕೊಂಡು ಮತ ಕೇಳಲು ಹೋದರೆ ಬದಲಾವಣೆ ಸಾಧ್ಯ ಇಲ್ಲಾ. ಜನ ನಿಮ್ಮನ್ನು ನಂಬುವುದಿಲ್ಲ. ದೇಶದ ಆರ್ಥಿಕ ಪ್ರಗತಿ, ಭದ್ರತೆ, ದೃಷ್ಟಿಯಿಂದ ಮೋದಿ ಅವರು ಪ್ರಧಾನಿಯಾಗಲು ನೀವೆಲ್ಲರೂ ಆಶೀರ್ವಾದ ಮಾಡಬೇಕು ಎಂದರು.
ಮಾಜಿ ಶಾಸಕರಾದ ಡಾ. ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ ಶಂಕರ ಮಾಡಲಗಿ, ಸಂಸದೆ ಮಂಗಲಾ ಅಂಗಡಿ, ನಾರಾಯಣ ಭಾಂಡಗೆ, ಸಂಜಯ ಪಾಟೀಲ ಮಾತನಾಡಿ,
ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ನಾಯಕನಿಲ್ಲ, 100 ಸಿದ್ದರಾಮಯ್ಯ ಡಿಕೆಶಿ, ಖರ್ಗೆ, ರಾಹುಲ ಗಾಂಧಿ ಸೇರಿದರು ಮೋದಿಗೆ ಯಾರು ಸರಿ ಸಾಟಿ ಇಲ್ಲಾ. ಮೋದಿಯವರನ್ನೂ 3 ನೇ ಬಾರಿಗೆ ಪ್ರಧಾನಿಯಾಗಿ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತ್ಯವ್ಯ. ಜಗದೀಶ ಶೆಟ್ಟರ ಅವರನ್ನು ಭಾರೀ ಅಂತರದಿಂದ ಗೆಲ್ಲಿಸಿ ಮೋದಿ ಅವರ ಕೈ ಬಲಪಡಿಸಲು ಬಿಜೆಪಿ ಗೆ ಮತ ನೀಡಬೇಕೆಂದರು.
ಸಭೆಯಲ್ಲಿ ಈರಣ್ಣ ಕಡಾಡಿ, ಮಹಾಂತೇಶ ಡೊಡಗೌಡ್ರ, ಮಹಾಂತೇಶ ಕವಟಗಿಮಠ, ಶಂಕರ ಮಾಡಲಗಿ, ವಿಜಯ ಮೆಟಗುಡ್ಡ, ಧನಂಜಯ ಜಾಧವ, ಹಣಮಂತ ನಿರಾಣಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಇದ್ದರು.
ಸಂತೋಷ ಹಡಪದ ನಿರೂಪಿಸಿದರು. ಮಂಡಲ ಅಧ್ಯಕ್ಷ ಗುರುಪಾದ ಕಳ್ಳಿ ಸ್ವಾಗತಿಸಿದರು.