ಚೆನ್ನಮ್ಮನ ಕಿತ್ತೂರು : ಹೌದು ದಿನ ಕಳೆದಂತೆ ರಂಗೇರುತ್ತಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹೈ ವೋಲ್ಟೇಜ್ ಕದನವಾಗುವ ಎಲ್ಲ ಸಾಧ್ಯತೆಗಳು ಹೆಚ್ಚಾಗಿದ್ದು. ಟರ್ನಿಂಗ್ ಪಾಯಿಂಟ್ ಎಂಬಂತೆ ಕಿತ್ತೂರು ಮತಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಿ ಕಿತ್ತೂರು ಹುಲಿ ಎಂದೇ ಖ್ಯಾತಿ ಪಡೆದ ಮಾಜಿ ಶಾಸಕ ಹಾಗೂ ಹಿರಿಯ ರಾಜಕಾರಣಿ ಸುರೇಶ ಮಾರಿಹಾಳ ಮತ್ತೆ ಅಖಾಡದಲ್ಲಿ ಕಾಣಿಸಿಕೊಂಡಿದ್ದು ಅಚ್ಚರಿ ಮೂಡಿಸಿದೆ.
ಕಿತ್ತೂರು ಮತಕ್ಷೇತ್ರವನ್ನು ಇತಿಹಾಸದಲ್ಲಿ ಮರುಜೀವ ಪಡೆಯುವಂತೆ ಮಾಡಿದ್ದ ಮಾಜಿ ಶಾಸಕ ಸುರೇಶ ಮಾರಿಹಾಳ. ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸುವ ಸಂಕಲ್ಪಕ್ಕೆ ಹೊಸಪುಷ್ಟಿ ನೀಡಿದ್ದು ವಿರೋಧಿ ಬಣದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕು ಅಷ್ಟೇ.
ಕಿತ್ತೂರು ಮತಕ್ಷೇತ್ರದಲ್ಲಿ ಕಳಂಕ ರಹಿತವಾದ ಜನಸೇವೆ ಕೊಟ್ಟ ನಾಯಕರಲ್ಲಿ ಸುರೇಶ ಮಾರಿಹಾಳ ಕೊಡುಗೆ ಅಪಾರ. ತೆರೆಮರೆಯಲ್ಲಿ ಇದ್ದ ಅದೆಷ್ಟೋ ಅಭಿವೃದ್ಧಿಪರ ಕ್ಷೇತ್ರ ಕಾರ್ಯವನ್ನ ಜನತೆಯ ಮನದಲ್ಲಿ ಮಂದಹಾಸ ಮೂಡಿಸಿದ್ದ ನಾಯಕ ಸುರೇಶ ಮಾರಿಹಾಳ ಎನ್ನುವದರಲ್ಲಿ ಎರಡು ಮಾತಿಲ್ಲ.
ಸದ್ಯ ಉತ್ತರ ಕನ್ನಡ ಲೋಕಸಭಾ ಕುರುಕ್ಷೇತ್ರ ಯುದ್ಧದಲ್ಲಿ ಮಾಜಿಗಳ ಕಾದಾಟ ನೇರಾ ನೇರ ಪಡೆದಿದ್ದು. ಅಚ್ಚರಿ ಎಂಬಂತೆ ತ್ರಿಮೂರ್ತಿಗಳ ಬೆಂಬಲ ಕಾಗೇರಿಗೆ ವಿಜಯಮಾಲೆಯಾಗಿ ಕಂಗೊಳಿಸುವ ಎಲ್ಲ ಸಾಧ್ಯತೆ ಹೆಚ್ಚಾಗಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಜೊತೆಗೆ ಅಚ್ಚರಿ ಮೂಡಿಸುವಂತೆ ಕಿತ್ತೂರು ಮತಕ್ಷೇತ್ರವನ್ನು ರಾಷ್ಟ್ರದ ಗಮನ ಸೆಳೆಯುವ ರೀತಿಯಲ್ಲಿ ಅಭಿವೃದ್ಧಿ ಪರ, ಇತಿಹಾಸ ಪರ, ಅಧ್ಯಯನ ಪರ, ಸಮಾಜ ಪರ ಹೀಗೆ ಅನೇಕ ರೀತಿಯಲ್ಲಿ ಉತ್ತುಂಗಕ್ಕೇರಿಸಿದ್ದ ತ್ರಿಮೂರ್ತಿಗಳಾದ ದಿ!! ಡಿ.ಬಿ ಇನಾಮದಾರ ಕುಟುಂಬ, ಸುರೇಶ ಮಾರಿಹಾಳ ಹಾಗೂ ಮಹಾಂತೇಶ ದೊಡ್ಡಗೌಡರ ಬೆಂಬಲ ಸದ್ಯ ಉತ್ತರ ಕನ್ನಡ ರಾಜಕೀಯದಲ್ಲಿ ಹೊಸ ಸಂಚಲನಕ್ಕೂ ಕಾರಣವಾಗಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಬ್ಯಾಟ್ ಬಿಸಲು ಸಜ್ಜಾಗಿರುವ ನಾಯಕರ ಪೈಕಿ ಸುರೇಶ ಮಾರಿಹಾಳ ಮತ್ತು ಮಹಾಂತೇಶ ದೊಡ್ಡಗೌಡರ ಮತ್ತು ಡಿ.ಬಿ ಇನಾಮದಾರ ಕುಟುಂಬದ ನಡೆ ರಾಷ್ಟ್ರ ರಾಜಕೀಯದಲ್ಲಿ ಹೈವೋಲ್ಟೇಜ್ ಆಗಿ ಮಾರ್ಪಟ್ಟಿದ್ದು. ಕಮಲದ ಟಾಂಗ್ ಕಾಂಗ್ರೆಸ್ ಗೆ ಯಾವ ರೀತಿಯಲ್ಲಿ ಪರಿಣಾಮ ಬೀಳಲಿದೆ ಎಂದು ಕಾದು ನೋಡಬೇಕು ಅಷ್ಟೇ.