ಬಡತನದಲ್ಲಿ ಅರಳಿದ ಬೈಲಹೊಂಗಲದ ಯುವಕನ ಪ್ರತಿಭೆ....
ವಿಜ್ಞಾನ ವಿಭಾಗದಲ್ಲಿ ಪ್ರತಿಶತ 97.16 ಅಂಕ ಪಡೆದು ಧಾರವಾಡ ಜೇ ಎಸ್ ಎಸ್ ವಿದ್ಯಾಲಯಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದಾನೆ.
ಬೈಲಹೊಂಗಲ:ಬೈಲಹೊಂಗಲ ತಾಲೂಕಿನ ಬೂದಿಹಾಳ ಗ್ರಾಮದ ತಂದೆ ಬಸಯ್ಯ ಕಲ್ಲಯ್ಯ ನರೇಂದ್ರಮಠ ಮಗನಾದ ಅಭಿಷೇಕ ಬ ನರೇಂದಮಠ ಈತನು ಸಮೀಪದ ಧಾರವಾಡದ ಜಿ ಎಸ್ ಎಸ್ ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದ ಪಿಯುಸಿ ಪರೀಕ್ಷೆಯಲ್ಲಿ 600/583 ಅಂಕಗಳನ್ನು ಪಡೆದಿದ್ದಾನೆ. ಬಡ ಕುಟುಂಬದಲ್ಲಿ ಬೆಳೆದಿದ್ದ ಯುವಕ ತನ್ನ ಶ್ರಮದ ಮೂಲಕ ನಿರಂತರ ಪ್ರಯತ್ನಕ್ಕೆ ವಿಜ್ಞಾನ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ ನಾಲ್ಕನೇ ಸ್ಥಾನವನ್ನು ಪಡೆದು ಗ್ರಾಮದ ಹಾಗೂ ಜನ್ಮ ನೀಡಿದ ತಂದೆ ತಾಯಿಯ ಘನತೆ ಗೌರವವನ್ನು ಹೆಚ್ಚಿಸಿದ್ದಾನೆ
ಈ ಯುವಕನ ಮುಂದಿನ ವಿದ್ಯಾಭ್ಯಾಸದ ಭವಿಷ್ಯ ಹೀಗೆ ನಿರಂತರ ಬೆಳೆಯಲಿ ಇವನಿಗೆ ಸಹಕಾರ ನೀಡಿ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲಕ್ಕೆ ಸಹಾಯ ಸಂಸಾರವನ್ನು ನೀಡುತ್ತೇವೆ ಎಂದು ಗ್ರಾಮದ ಹಿರಿಯರಾದ ವಿನಾಯಕ ಬಡಿಗೇರ, ಬಸವರಾಜ ವಾರಿ ಶಿಕ್ಷಕರು, ಬಸವರಾಜ್ ಸಿ ಕುಲಕರ್ಣಿ, ಡಿ ಜಿ ಕುಲಕರ್ಣಿ ತಿಳಿಸಿದರು.