ಲೋಕಸಭೆ ಚುನಾವಣೆ : ಚನ್ನಮ್ಮನ ಕಿತ್ತೂರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಕಾರ್ಯಕರ್ತರ ಸಭೆ...!
ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿರುವ ಅಂಜಲಿ ನಿಂಬಾಳ್ಕರ್ ಪರ ಚೆನ್ನಮ್ಮನ ಕಿತ್ತೂರಿನ ಶೆಟ್ಟರ್ ಹಾಲ್ ನಲ್ಲಿ ನಡೆದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಪಾಲ್ಗೊಂಡು ಮಾತನಾಡಿದರು.
ಚನ್ನಮ್ಮನ ಕಿತ್ತೂರಿನ ಶಾಸಕರಾದ ಬಾಬಾಸಾಹೇಬ ಪಾಟೀಲ ಉಪಸ್ಥಿತರಿದ್ದರು.
ಚನ್ನಮ್ಮನ ಕಿತ್ತೂರಿನ ಕಾರ್ಯಕರ್ತರು ವಿಧಾನಸಭಾ ಚುನಾವಣೆಯಲ್ಲಿ ನಮಗೆ ಮಾತು ಕೊಟ್ಟ ಹಾಗೆ ಶಾಸಕನನ್ನು ಆರಿಸಿ ತಂದಿದ್ದೀರಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಿತ್ತೂರು ಮತ್ತು ಖಾನಾಪುರ ಭಾಗದವರಿಗೆ ಟಿಕೆಟ್ ನಮ್ಮ ಸರ್ಕಾರ ನೀಡಿದೆ ಆದಕಾರಣ ತಾವೆಲ್ಲರೂ ಮತ್ತೊಮ್ಮೆ ಶ್ರಮದಿಂದ ಕಾರ್ಯವನ್ನು ಮಾಡಿ ಶಾಸಕ ಸ್ಥಾನ ಗೆಲ್ಲಿಸಿದಂತೆ ಲೋಕಸಭೆಯ ಸ್ಥಾನವನ್ನು ಗೆಲ್ಲುವಲ್ಲಿ ಪ್ರಮುಖರಾಗಬೇಕು ಮಾತನಾಡಿದರು.
ಉತ್ತರ ಕನ್ನಡ ಲೋಕಸಭೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಖಾನಾಪುರ ಮತಕ್ಷೇತ್ರದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ ಕಾರ್ಯಕರ್ತರನ್ನು ಉದ್ದೇಶಿಸಿ ಅಂಜಲಿ ನಿಂಬಾಲಕರವರು ಮಾತನಾಡಿ ನಮ್ಮ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದ್ದೇವೆ ಗ್ಯಾರಂಟಿ ಭಾಗ್ಯಗಳನ್ನು ನೀಡಿದ್ದೇವೆ ಪ್ರತಿಪಕ್ಷ ಬಿಜೆಪಿ ಎಂಪಿ ಅವರಾಗಿ ಸುಮಾರು ಆರು ಬಾರಿ ಆರಿಸಿ ಹೋದರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಯಾವುದೇ ಕೆಲಸ ಮಾಡಿಲ್ಲ ಕ್ಷೇತ್ರದ ಜನತೆಗೂ ಕೂಡ ಬಂದು ಬಿಟ್ಟಿಯಾಗಿಲ್ಲ ಬರಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಜಾತಿಯ ಮೇಲೆ ಮತವನ್ನು ಸೆಳೆದು ಆರಿಸಿ ಬಂದಿರುವರು ಎಂದು ಗಂಭೀರವಾಗಿ ಆರೋಪಿಸಿದರು, ಈ ಬಾರಿ ನಮ್ಮ ಭಾಗಕ್ಕೆ ಒಲಿದು ಬಂದಿರುವ ಲೋಕಸಭೆಯ ಅವಕಾಶವನ್ನು ನಾವು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಕೈಮುಗಿದು ವಿನಂತಿ ಮಾಡಿಕೊಂಡರು.
ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ಸಿನ ಮುಖಂಡರುಗಳಾದ ನಿಂಗಪ್ಪ ಅರಕೇರಿ ನೇಸರ್ಗಿ ಬ್ಲಾಕ್ ಅಧ್ಯಕ್ಷರು ಕಿತ್ತೂರು ಬ್ಲಾಕ್ ಅಧ್ಯಕ್ಷರಾದ ಸಂಗನಗೌಡ ಪಾಟೀಲ ಹಾಗೂ ಕಿತ್ತೂರು ಭಾಗದ ಪ್ರಮುಖ ಮುಖಂಡರುಗಳು ಮತ್ತು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.