ಚನ್ನಮ್ಮನ ಕಿತ್ತೂರು : ತಾಲ್ಲೂಕಿನ ಹಿರೇನಂದಿಹಳ್ಳಿ ಗ್ರಾಮ ಪಂಚಾಯತಿ
ವ್ಯಾಪ್ತಿಯಲ್ಲಿ ಬರುವ ಇತಿಹಾಸ ಪ್ರಸಿದ್ದ
ನಾಲ್ಕನೆಯ ಶತಮಾನದ ಧಾರ್ಮಿಕ
ಸುಕ್ಷೇತ್ರ ನಂದಿಹಳ್ಳಿ ಉದ್ಭವ
ನಂದಿಶ್ವರ
ಬಸವೇಶ್ವರ ದೇವಾಲಯ
ವೀರ ರಾಣಿ ಕಿತ್ತೂರು ಚೆನ್ನಮ್ಮಜಿಯ
ಕಷ್ಟಕರ ಅಂತ ಬಂದಾಗ ರಾಜ
ಮನೆತನದ ಪ್ರತಿಯೊಬ್ಬರೂ ಬಂದು
ಪೂಜೆ ಸಲ್ಲಿಸಿ ನೆಮ್ಮದಿಯ ಜೀವನ
ನಡೆಸುತ್ತಿದ್ದರು ಹನ್ನೆರಡನೇ
ಶತಮಾನದಲ್ಲಿ ಕಲ್ಯಾಣದಿಂದ
ಚೆನ್ನಬಸವಣ್ಣನವರು ಉಳವಿ ಕ್ಷೇತ್ರಕ್ಕೆ
ಹೋಗುವಾಗ ಇಲ್ಲಿ ವಿಶ್ರಾಂತಿ ಪಡೆದು
ಲಿಂಗ ಪೂಜೆ ಸಲ್ಲಿಸಿದ್ದರು.
ಶ್ರೀ ಕೇ ಜೀ ಚನ್ನವೀರಪ್ಪ ಹಾಗೂ ಪಾರೋತೆವ್ವ ಗುರುಲಿಗಂಪ್ಪ ಋದಾನಪೂರ, ಬೆಂಗಳೂರಿನ ಈ ಇಂಜಿನಿಯರ್ ದಂಪತಿಗಳು ನಂದಿಶ್ವರನಲ್ಲಿ ಹರಕೆ ಹೊತ್ತು ಭಕ್ತಿಯಿಂದ ಪೂಜಿಸಿ ಹರಕೆ ಇಡೇರಿದ ಮೇಲೆ ದೇವಸ್ಥಾನ ಜೀರ್ನೊದ್ದಾರ ಮಾಡಿದ ಸಾಕ್ಷಿ ಈಗಲೂ ಇದೇ ಇಂತಹ ಇತಿಹಾಸ ಪ್ರಸಿದ್ಧ ಕ್ಷೇತ್ರಕ್ಕೆ ಹರಕೆ ಕಟ್ಟಿಕೊಂಡು ಬರುವ ಭಕ್ತರ ಮನೋಕಾಮನೆಗಳು ನೆರೆವೆರುತ್ತಾ ಬಂದಿವೆ ಇಲ್ಲಿಗೆ ಭೇಟಿ ನೀಡಿದ ಬಳಿಕ ಹರಕೆ ಈಡೇರುತ್ತದೆ ಭಕ್ತರಲ್ಲಿ ಅಪಾರ ನಂಬಿಕೆ ಇದೆ ಈ ಸುಕ್ಷೇತ್ರ ನಂದಿಹಳ್ಳಿಯಲ್ಲಿ ಸೋಮವಾರ ಸಂಜೆ ಬಸವೇಶ್ವರ (ನಂದಿಶ್ವರ) ಮತ್ತು ಸಂಗಮೇಶ್ವರ ರಥೋತ್ಸವ ವೈಭವದಿಂದ ಜರುಗಿತು.
ಸುಕ್ಷೇತ್ರ ನಂದಿಹಳ್ಳಿಯಲ್ಲಿ ಶಿವರಾತ್ರಿ ಅಮವಾಸ್ಯೆಯಂದ ಬೆಳಿಗ್ಗೆ ಯಿಂದಲೇ ವಿಶೇಷವಾಗಿ ಪೂಜೆ, ಧಾರ್ಮಿಕ ಕಾರ್ಯಕ್ರಮ ಗಳು ಜರುಗಿದವು. ಇಡೀ ದಿನ ಭಕ್ತರು ಸರದಿ ಸಾಲಿನಲ್ಲಿ ತೆರಳಿ ಭಕ್ತಿಭಾವದಿಂದ ಸ್ವಾಮಿಯ ದರ್ಶನ ಪಡೆದರು. ಸುಕ್ಷೇತ್ರದೆಲ್ಲೆಡೆ 'ಹರ ಹರ ಮಹಾದೇವ' ಉದ್ಯೋಷ ಮಾರ್ದನಿಸಿತು.
ದೀಡು ನಮಸ್ಕಾರ, ಎತ್ತನ ಮೆರವಣಿಗೆ : ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆಯಿಂದ ಅಪಾರ ಭಕ್ತರು ಇತ್ಯಾದಿ ರೀತಿಯಲ್ಲಿ ಭಕ್ತಿಭಾವದಿಂದ ನಾನಾ ಹರಕೆಗಳನ್ನು ತೀರಿಸಿದರು.
ಅವರಾದಿ ಗ್ರಾಮದಿಂದ ಮಂಗಳ ವಾದ್ಯ ಗಳೊಂದಿಗೆ ವಿಜೃಂಭಣೆಯಿಂದ ಗ್ರಾಮಸ್ಥರು ಬಸಟ್ಟಿಯವರ ಮನೆಯಿಂದ ರಥೋತ್ಸವ ಮೂರ್ತಿ ಬಂಡಿಯಲ್ಲಿ ಭವ್ಯ ಮೆರವಣಿಗೆ ಯೊಂದಿಗೆ ಸಾಗಿಬಂದು ನಂದಿಶ್ವರ ಸ್ವಾಮಿಯ ಉತ್ಸವ ಮೂರ್ತಿ ರಥಕ್ಕೆ ಪ್ರದಕ್ಷಿಣೆ ಹಾಕಿ ರಥದಲ್ಲಿ ಪ್ರತಿಷ್ಠಾಪಿಸಿದ ಬಳಿಕ ರಥೋತ್ಸವ ನಡೆಯುತ್ತಿತ್ತು ಈಗ ಕೆಲವು ವರ್ಷಗಳಿಂದ ಎಲ್ಲಾ ಪದ್ಧತಿಯು ಬದಲಾಗಿ ಉತ್ಸವ ಮುರ್ತಿ ದೇವಸ್ಥಾನದಲ್ಲಿ ಇದ್ದು ನೇರವಾಗಿ ರಥಕ್ಕೆ ಪ್ರತಿಷ್ಟಾಪನೆ ಮಾಡಿ ರಥೋತ್ಸವ ನಡೆಯುತ್ತದೆ.
ಚಿಕ್ಕನಂದಿಹಳ್ಳಿಯ ಸಾರ್ವಜನಿಕರು ಬೃಹತ್ ಹೂ ಮಾಲೆ, ಸಂಗೀತ ನೃತ್ಯ ವಾದ್ಯಗಳೊಂದಿಗೆ ಬರುವುದು ವಿಶೇಷವಾಗಿತ್ತು ಮತ್ತು ದೇವಸ್ಥಾನ ಕಮಿಟಿಯ ಸಿಬ್ಬಂದಿಗಳು ಬಣ್ಣ ಬಣ್ಣದ ಪಟ, ತಳಿರು ತೋರಣಗಳಿಂದ ಸಿಂಗರಿಸಿದ್ದರು
ರಥಕ್ಕೆ ಮಹಾ ಮಂಗಳಾರತಿ ನೆರವೇರಿಸುತ್ತಿದ್ದಂತೆ ಅಪಾರ ಭಕ್ತರು 'ಹರ ಹರ ಮಹಾದೇವ” “ಶಂಭೋ ಹರ ಹರ ಮಹಾದೇವ” ಜಯಘೋಷದೊಂದಿಗೆ ರಥೋತ್ಸವ ಪ್ರಾರಂಭವಾಯಿತು.
ರಥೋತ್ಸವದ ಮೇಲೆ ನೆರೆದಿದ್ದ ಭಕ್ತ ಸಮೂಹ ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿಯಿಂದ ನಮಿಸಿತು. ರಥವು ಪಾದಗಟ್ಟೆವರೆಗೂ ತೆರಳಿ ಮೂಲ ಸ್ಥಳಕ್ಕೆ ಹಿಂತಿರುಗಿತು.
ಹಿರೇನಂದಿಹಳ್ಳಿಯ ಗ್ರಾಮಸ್ಥರು ನಾಲ್ಕನೆಯ ಶತಮಾನದಿಂದ ನಡೆಸಿಕೊಂಡು ಬದಂತ್ತಾ ಪದ್ದತ್ತಿ ನಂದಿಕೋಲ, ಹಳೆ ಬಂಡಿ, ಸಮಾಳ, ಡೋಲು, ಹಲಗೆ ಹಳೆ ಬಂಡಿ, ಕರಡಿ ಮಜಲು, ಬೆಂಡ್ ಬಾಜ್, ಅಲಂಕರಿಸಿದ ಎತ್ತು ಚಕ್ಕಡಿಗಳು ಭಜನೆ ಮೆರವಣಿಗೆ ನಡೆಸಿದರು. ನೂರಾರು ವರ್ಷಗಳಿಂದ ನಡೆದು ಬಂದ ನಂದಿಕೋಲ ಕುಣಿತ ಹಲಗೆ ಶಬ್ದ ಮಂಗಳ ವಾದ್ಯಗಳಿಗೆ ಹೆಜ್ಜೆಗಳನ್ನು ಹಾಕುತ್ತಾ ಕುಣಿಯುವುದು ನೋಡುಗರಲ್ಲಿ ವಿಜೃಂಭಣೆಯ ರಥೋತ್ಸವದ ಮೆರುಗು ಹೆಚ್ಚಿಸಿದವು.
ಚೆನ್ನಮ್ಮನ ಕಿತ್ತೂರು ತಾಲ್ಲೂಕು ಸೇರಿದಂತೆ ಬೈಲಹೊಂಗಲ, ಸವದತ್ತಿ, ಖಾನಾಪುರ, ಧಾರವಾಡ ಹಾಗೂ ರಾಜ್ಯದ ಜಿಲ್ಲೆಗಳಿಂದ ಅಪಾರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ನಂದಿಶ್ವರ ಸ್ವಾಮಿಯ ದರ್ಶನ ಪಡೆದರು.
ಧರ್ಮದತ್ತಿ ಇಲಾಖೆ ಹಾಗೂ ಕಮಿಟಿಯರ ನಿಗದಿತ ಸಮಯದಂತೆ ಸಾಯಂಕಾಲ ನಂದಿಶ್ವರನ ಮಾಹಾರಥೋತ್ಸವ ಮೂರು ಪೂಜ್ಯರ ನೇತ್ರತ್ವದಲ್ಲಿ ಮಹಾ ಮಂಗಳಾರತಿ ಯೊಂದಿಗೆ ಶ್ರೀ ನಾಗಭೂಷಣ ಶಿವಯೋಗಿ ಯವರ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಸ್ವ. ಪ್ರಣವಾನಂದ ಸ್ವಾಮೀಜಿ, ಶ್ರೀ ಮ.ನಿ.ಪ್ರ.ಸ್ವ. ಮಡಿವಾಳರಾಜಯೋಗೀಂದ್ರ ಮಹಾಸ್ವಾಮಿಗಳು, ರಾಜಗುರು ಸಂಸ್ಥಾನ ಕಲ್ಮಠ ಚ ಕಿತ್ತೂರು ಮತ್ತು ಶ್ರೀ
ಮ.ನಿ.ಪ್ರ.ಸ್ವ ಪಂಚಾಕ್ಷರಿ
ಮಹಾಸ್ವಾಮಿಗಳು ಶ್ರೀ ಗುರು
ಮಡಿವಾಳೇಶ್ವರ ಮಠ, ನಿಚ್ಚನಕಿ
ಇವರುಗಳಿಂದ ಮಹಾ ರತೋತ್ಸವ
ಕಾರ್ಯಕ್ರಮ ಮಾಹಾ ಪೂಜೆಗಳೊಂದಿಗೆ
ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ವಿಶೇಷವಾಗಿ ಪೋಲಿಸ್ ಇಲಾಖೆ ಸಿಬ್ಬಂದಿಗಳು, ಬಹಳ ಜವಾಬ್ದಾರಿ ಹೊತ್ತು ಸೇವೆ ಸಲ್ಲಿಸಿದರು ವಿದ್ಯುತ್ ಪೂರೈಕೆ ಸಿಬ್ಬಂದಿಗಳು, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರು, ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿಗಳು, ರಥೋತ್ಸವ ಕಮಿಟಿ ಯುವಕರು, ಗ್ರಾಮ ಪಂಚಾಯತಿ ಹಿರೇನಂದಿಹಳ್ಳಿ ಸಿಬ್ಬಂದಿಗಳು ಹಾಗೂ ನಾನಾ ಗ್ರಾಮಗಳಿಂದ ಬಂದ ಭಕ್ತರು ರಥೋತ್ಸವದಲ್ಲಿ ಉಪಸ್ಥಿತರಿದ್ದರು.